181
ಮನರಂಜಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನಕ್ಕು ನಗಿಸುವ ಆಟೋಟಗಳು, ಸಮಯ ಪಾಲನೆಗೆ, ಆಹಾರ ವ್ಯರ್ಥ ಮಾಡದಂತೆ ಪ್ರೇರೇಪಿಸುವ ಸ್ಪರ್ಧೆಗಳು, ಅರಿವನ್ನು ಹೆಚ್ಚಿಸುವ ಮಾಹಿತಿ ಕಾರ್ಯಾಗಾರ, ವ್ಯಂಗ್ಯಚಿತ್ರ ಪ್ರದರ್ಶನ, ಆತ್ಮೀಯ ಸನ್ಮಾನಗಳು ಹೀಗೆ ಹತ್ರು ಹಲವು ವಿಶಿಷ್ಟತೆಗಳಿಂದ ಕೂಡಿದ್ದ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ “ಸಂಭ್ರಮ-2025” ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತನ್ ಇಲಾಖೆಯ ಕಾಯಕಲ್ಪ ಮತ್ತು ಎನ್ ಕ್ಯು ಎ ಎಸ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಖ್ಯಾತ ವ್ಯಂಗಚಿತ್ರಕಾರ ಮೇಗರವಳ್ಳಿ ಸುಬ್ರಮಣ್ಯರ ಆಕರ್ಷಕ ವ್ಯಂಗ್ಯ ಚಿತ್ರ ಪ್ರದರ್ಶನವಿತ್ತು. ಪ್ಲಾಸ್ಟಿಕ್ ಮುಕ್ತ ಸ್ವಾದಿಷ್ಟ ಭೋಜನ ವ್ಯವಸ್ಥೆ ಇತ್ತು.
ವಿಶಿಷ್ಟವಾಗಿ ನಡೆದ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ ಸಂಭ್ರಮ ಕಾರ್ಯಕ್ರಮ..!
previous post

ಸತತ ಮೂರು ವರ್ಷಗಳಿಂದ ಕಾರ್ಯಕ್ರಮದ ಸ್ವಾದಿಷ್ಟ ಭೋಜನ ವ್ಯವಸ್ಥೆಯ ಪ್ರಾಯೋಜಕತ್ವ ವಹಿಸುತ್ತಿರುವ ಸಂಘದ ಕಾರ್ಯಾಧ್ಯಕ್ಷೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್ ರವರನ್ನು ಕೃತಜ್ಞತೆಯಿಂದ ಗೌರವಿಸಲಾಯಿತು.