10
Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್ಯಾರೆ ಎನ್ನದ ಆಡಳಿತ ಮಂಡಳಿ..!
ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂಬರ್ 21 ರೆವಿನ್ಯೂ ವಾರ್ಡ್ ನಂಬರ್ 31 ಮಿಷನ್ ಕಾಂಪೌಂಡ್ ನಲ್ಲಿರುವ ಸಮುದಾಯ ಭವನದ ಹಿಂಭಾಗದಲ್ಲಿ ಸಂತ ಥಾಮಸ್ ಆಡಳಿತ ಮಂಡಳಿ ಕ್ರಾಸ್ ಸ್ತಂಭಗಳನ್ನು ನಿರ್ಮಾಣ ಮಾಡಿದ್ದು ಈ ಜಾಗ ವಿವಾದದ ಕೇಂದ್ರ ಬಿಂದುವಾಗಿದೆ.
ಏಕೆಂದರೆ ಇದೇ ಜಾಗದ ಹತ್ತಿರ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇದ್ದಕ್ಕಿದ್ದಂತೆ ಜಾಗವನ್ನು ಉಳಿಸಿಕೊಳ್ಳುವ ನೆಪದಲ್ಲಿ ಅನಧಿಕೃತವಾಗಿ ಕ್ರಾಸ್ ಸ್ತಂಭಗಳ ನಿರ್ಮಾಣ ಮಾಡಿದ್ದು ಈಗ ದೊಡ್ಡ ಮಟ್ಟದ ಸುದ್ದಿಯಾಗಿದ್ದು ಕ್ರಿಶ್ಚಿಯನ್ ಸಮುದಾಯದ ಹಲವರು ಈ ನಡವಳಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ.
ತಿಳುವಳಿಕೆ ಪತ್ರ ಕೊಟ್ಟು ಸುಮ್ಮನಾಗಿರುವ ಮಹಾನಗರ ಪಾಲಿಕೆ..!
ಇಲ್ಲಿ ಇದ್ದಕ್ಕಿದ್ದಕ್ಕೆ ರಾತ್ರೋರಾತ್ರಿ ಅನಧಿಕೃತವಾಗಿ ಕ್ರಾಸ್ ಸ್ತಂಭಗಳ ನಿರ್ಮಾಣ ಮಾಡಿದ್ದು ಅದಕ್ಕೆ ಪೂರಕವಾಗಿ ಕಟ್ಟಡಕ್ಕೆ ಬೆಡ್ ಕಾಂಕ್ರೀಟ್ ಹಾಕಿ ಹಳೆಯ ಮನೆಯನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡುತ್ತಿರುವುದು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಾಗ ಅವರು ಇವರಿಗೆ ತಿಳುವಳಿಕೆ ಪತ್ರ ನೀಡಿ ಯಾವುದೇ ರೀತಿಯ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕ್ರಾಸ್ ಸ್ತಂಭಗಳನ್ನು ನಿರ್ಮಾಣ ಮಾಡಿದ್ದು ಸರಿಯಲ್ಲ ಇದನ್ನು ತೆರವುಗೊಳಿಸಬೇಕು ಹಾಗೂ ಪರವಾನಿಗೆ ಪಡೆಯದೆ ರಾತ್ರೋರಾತ್ರಿ ಹಳೆ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಿರುವ ಹೊಸ ಕಟ್ಟಡದ ಭಾಗವನ್ನು ಮತ್ತು ಅದಕ್ಕೆ ಕಟ್ಟಿರುವ ಕಾಂಪೌಂಡ್ ಅನ್ನು ತೆರವುಗೊಳಿಸಿ ಸದರಿ ಆಸ್ತಿಗೆ ಸಂಬಂಧಪಟ್ಟಂತ ಸಂಪೂರ್ಣ ದಾಖಲೆಗಳು ತಮ್ಮ ಮಾಲೀಕತ್ವದಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪರವಾನಿಗೆಗಳನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದ್ದರು.


