
ಈ ದಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರು 2022-23 ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದೊಂದು ರೈತಪರ ಬಜೆಟ್ ಆಗಿರುತ್ತದೆ. ಸುಮಾರು 32 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24,000 ಕೋಟಿ ಬೆಳೆಸಾಲ ನೀಡುವ ಯೋಜನೆಯನ್ನು ಮುಂದುವರೆಸಿರುವುದು ಸ್ವಾಗತಾರ್ಹ ರೈತರ ಬೇಡಿಕೆಯಂತೆ ಯಶಸ್ವಿನಿ ಆರೋಗ್ಯ ವಿಮೆಯನ್ನು ಮರು ಜಾರಿಗೆ ಕೊಡುತ್ತಿರುವುದು ಹಾಗೂ ರೈತಶಕ್ತಿ ಯೋಜನೆಯನ್ನು ಜಾರಿಗೆ ತರಲಿದ್ದು ಈ ಯೋಜನೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಡೀಸೆಲ್ ಖರೀದಿಗೆ ಆರ್ಥಿಕ ನೆರವು ನೀಡುತ್ತಿರುವುದು ಅಭಿನಂಧನೀಯ.
ಶಿವಮೊಗ್ಗದಲ್ಲಿ ಆರ್ಯುವೇದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಹಣ ಮಂಜುರಾತಿ ಮಾಡಿರುವುದು, ಶಿವಮೊಗ್ಗ-ಚಿಕ್ಕಮಂಗಳೂರು-ಚಿತ್ರದುರ್ಗ ಹಾಲು ಒಕ್ಕೂಟವನ್ನು ವಿಭಜಿಸಿ ಪ್ರತ್ಯೇಕವಾಗಿ ರಚಿಸುವ ತೀರ್ಮಾನಗಳು ಜನಪರವಾಗಿದೆ.
ಜೋಗ್ ಫಾಲ್ಸ್ ನಲ್ಲಿ ರೋಪ್ ವೇ ನಿರ್ಮಾಣಕ್ಕೆ 113 ಕೋಟಿ ಹಣ ಮಂಜೂರಾತಿ, ಶಿವಮೊಗ್ಗ – ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ಹಣ ಮಂಜೂರು ಮಾಡಿರುವುದು ಆ ಭಾಗದ ಜನರಿಗೆ ನೀಡಿದ ಕೊಡುಗೆಯಾಗಿದೆ.
ಒಟ್ಟಾರೆ ಮುಖ್ಯಮಂತ್ರಿಗಳು ಕೃಷಿಪರ ಹಾಗೂ ಜನಪರ ಬಜೆಟ್ ಮಂಡಿಸಿದ್ದು, ಶಿವಮೊಗ್ಗ ಜಿಲ್ಲೆಯ ರೈತರ ಪರವಾಗಿ ಹಾಗೂ ಎಲ್ಲಾ ಸಹಕಾರಿ ಸಂಸ್ಥೆಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದಾರೆ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305….