
ಮಂಡ್ಯ : ಜಿಲ್ಲೆಯ ಮಳವಳ್ಳಿ ಶಿವನಸಮುದ್ರ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಅಕ್ರಮ ಗಾಂಜಾ ಸಾಗಾಣಿಕೆಯನ್ನು ಪತ್ತೆಹಚ್ಚಿ 2.250 ಕೆಜಿ ಒಣ ಗಾಂಜಾ, ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ಇಲಾಖಾ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕರು ಹಾಗು ಉಪ ಅಧೀಕ್ಷಕರು ಮಂಡ್ಯ ಉಪ ವಿಭಾಗ ರವರ ಮಾರ್ಗದರ್ಶನದಂತೆ ಮಳವಳ್ಳಿ ವಲಯದ ಅಬಕಾರಿ ಉಪ ಆಯುಕ್ತರ ಕಚೇರಿಯ ಉಪ ನಿರೀಕ್ಷಕರಾದ ನಾಗಭೂಷಣ್ ರವರು ಮೊಕದ್ದಮೆ ದಾಖಲಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ಕೃತ್ಯ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಲು ಅಬಕಾರಿ ನಿರೀಕ್ಷಕರಾದ ಪ್ರೇಮ್ ಸಾಗರ್, ಉಪ ನಿರೀಕ್ಷಕರಾದ ವೆಂಕಟೇಶ್, ಸಿಬ್ಬಂದಿಗಳಾದ ಮನೋಹರ್, ಸಿದ್ಧಾರ್ಥ್, ಸಂತೋಷ್ ಕುಮಾರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು .
ವರದಿ: ಎಸ್ .ಮಂಜು ಮಳವಳ್ಳಿ...
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…