
ಶಿವಮೊಗ್ಗ: ದಿನಾಂಕ 4 ಮಾರ್ಚ್ 2022ರ ಶುಕ್ರವಾರ ಮತ್ತು 5 ಮಾರ್ಚ್ 2022 ರ ಶನಿವಾರದಂದು ಗೋವಾದಲ್ಲಿ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಇಂಟರ್ನ್ಯಾಷನಲ್ ಯೂತ್ ಯೋಗ ಫೆಡರೇಶನ್ ಮತ್ತು ಆಯುಷ್ ಇಲಾಖೆ ಸಹಯೋಗದೊಂದಿಗೆ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ.

ಶಿವಮೊಗ್ಗದ ಹೆಸರಾಂತ ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಸುಮಾರು ಐದು ವರ್ಷಗಳಿಂದ ಹಲವಾರು ಉಚಿತ ಯೋಗಾಸನ ತರಬೇತಿಗಳನ್ನು ಸರ್ಕಾರಿ ಶಾಲೆಯಲ್ಲಿ ವೃದ್ಧಾಶ್ರಮ ಮೊರಾರ್ಜಿ ಶಾಲೆ ಪೌರಕಾರ್ಮಿಕರಿಗೆ ಉಚಿತ ಯೋಗಾಸನ ತರಬೇತಿ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತರಗತಿಗಳನ್ನು ಮಾಡಿಕೊಂಡು ಬಂದಿರುತ್ತದೆ.
ಈ ಬಾರಿ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಸಂಸ್ಥೆಯಿಂದ ಸುಮಾರು 50 ಬಡ ಪ್ರತಿಭಾವಂತ ಮಕ್ಕಳನ್ನು ಸ್ಪರ್ಧೆಗೆ ಕರೆದುಕೊಂಡು ಹೋಗುತ್ತಿದ್ದು ಒಬ್ಬರಿಗೆ ಸುಮಾರು 10,000 ರುಗಳು ಪ್ರವೇಶ ಶುಲ್ಕ ಮತ್ತು ಊಟಕ್ಕೆ ಬಸ್ಸಿಗೆ ಮತ್ತು ಇನ್ನಿತರೆ ಖರ್ಚುಗಳಿಗೆ ಸುಮಾರು 6ಲಕ್ಷ ರೂಗಳ ಲಕ್ಷವಿದ್ದು ಉದಾರ ಮನಸ್ಸಿನಿಂದ ಸಹಾಯವನ್ನು ಮಾಡುವುದರ ಜೊತೆಗೆ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕೆಂದು ಹಾಗೂ ಕೆಳಗಿನ ಅಕೌಂಟ್ ನಂಬರಿಗೆ ದಯವಿಟ್ಟು ಕಣ ಪಾವತಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ .

ಸಂಸ್ಥಾಪಕರು ಮತ್ತು ಕಾರ್ಯದರ್ಶಿಗಳು ವೆಂಕಟೇಶ ಆಚಾರ್ಯ ಎನ್.ಪೀ ಅಂತರಾಷ್ಟ್ರೀಯ ಯೋಗ ಪಟು ಮತ್ತು ಯೋಗ ಶಿಕ್ಷಕರು ಶಿವಮೊಗ್ಗ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…