
ಶಿವಮೊಗ್ಗ: ನಗರಕ್ಕೆ ನೂತನ ಡಿವೈಎಸ್ಪಿ ಆಗಿ ಬಿ ಬಾಲರಾಜ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ ಮೂಲತಃ ಹಾಸನ ಜಿಲ್ಲೆಯವರಾದ ಬಾಲರಾಜ್ ಅವರು ಉತ್ತಮ ಕುಟುಂಬದಲ್ಲಿ ಜನಿಸಿದವರು. ಇವರು ಬಿ,ಇ ಪದವಿ ಮುಗಿದ ನಂತರ 1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಪಿಎಸ್ಐ ಆಗಿ ನೇಮಕ ಹೊಂದಿ ರಾಯಚೂರು ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆ, ಇಡಪನೂರು ಪೊಲೀಸ್ ಠಾಣೆ , ಯಾಪಲದಿನ್ನಿ ಪೊಲೀಸ್ ಠಾಣೆ ಗಳಲ್ಲಿ ಕರ್ತವ್ಯ ಮಾಡಿ ಸಿಬ್ಬಂದಿಗಳು ಹಾಗೂ ಜನಸಾಮಾನ್ಯರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .
ನಂತರ ಪಿಐ ಆಗಿ ಬಡ್ತಿ ಹೊಂದಿ ಗುಲ್ಬರ್ಗ ಡಿಸಿ ಐಬಿ ಯಲ್ಲಿ ಹಾಗೂ ಅಳಂದ ದಲ್ಲಿ ಸಿಬ್ಬಂದಿಗಳ ಹಾಗೂ ಜನಸಾಮಾನ್ಯರ ಅಚ್ಚುಮೆಚ್ಚಿನ ಅಧಿಕಾರಿಯಾಗಿ ರಾಯಚೂರು, ಗುಲ್ಬರ್ಗ ,ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹೆಸರು ಮಾಡಿದರು. ನಕ್ಸಲ್ ಸಿದ್ಧಾಂತ ಹೊಂದಿರುವ ಜನರನ್ನು ಮನವೊಲಿಸಿ ನಕ್ಸಲ್ ಬೆಳವಣಿಗೆಗೆ ತಡೆಯೊಡ್ಡಿ ಜನರಿಗೆ ಹಾಗೂ ಸಿಬ್ಬಂದಿಗೆ ಪ್ರೀತಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ 2004ರಲ್ಲಿ ವರ್ಗಾವಣೆಗೊಂಡು ಬರುತ್ತಾರೆ.ತೀರ್ಥಹಳ್ಳಿ ಮಲೆನಾಡಿನ ಪ್ರವಾಸಿಗರ ನೆಚ್ಚಿನ ತಾಣ ,ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲರ ಗುಂಡಿನ ಸಪ್ಪಳ ನಿರಂತರವಾಗಿ ಕೇಳುತ್ತಿತ್ತು .ಅಲ್ಲಿಗೆ ಒಬ್ಬ ದಕ್ಷ ಅಧಿಕಾರಿಯ ಅವಶ್ಯಕತೆ ಇತ್ತು .ಮಲೆನಾಡಿನ ನಕ್ಸಲ್ ಮನೋಭಾವವುಳ್ಳ ಯುವಕರಿಗೆ ಜಾಗೃತಿ ಮೂಡಿಸಿ ಮನವೊಲಿಸಿ ಅವರನ್ನು ಹೊರ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ತಾಲೂಕಿನಲ್ಲಿ ಒಂದಷ್ಟು ಸಮಸ್ಯೆಗಳಿಗೆ ಇತಿಶ್ರೀ ಹಾಡಿ ಅಕ್ರಮಗಳಿಗೆ ಬ್ರೇಕ್ ಹಾಕಿ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರುಗಳಿಸಿದರು .
ನಕ್ಸಲ್ ನಿಗ್ರಹ ದಳ ಹಾಗೂ ರೌಡಿ ನಿಗ್ರಹ ದಳ ರಚನೆ:
ಅಂದಿನ ಎಸ್ಪಿ ಅರುಣ್ ಚಕ್ರವರ್ತಿ ಅವರು ನಕ್ಸಲ್ ನಿಗ್ರಹ ದಳ ಹಾಗೂ ರೌಡಿ ನಿಗ್ರಹ ದಳ ರಚನೆ ಮಾಡಿ ಸಂಪೂರ್ಣ ಜವಾಬ್ದಾರಿಯನ್ನು ಬಿ ಬಾಲರಾಜ್ ಅವರಿಗೆ ವಹಿಸುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಬಾಲರಾಜ್ ಅವರು 2002ರ ಪೊಲೀಸ್ ತಂಡದ ಸಹಕಾರದೊಂದಿಗೆ ಮಲೆನಾಡಿನ ನಕ್ಸಲ್ ಪೀಡಿತ ಗ್ರಾಮಗಳನ್ನು ಗುರುತಿಸಿ ಅಂತ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮಾಡಿ ಅಲ್ಲಿನ ಯುವಕರಿಗೆ ಉದ್ಯೋಗದ ದಾರಿ ಹಿಡಿಯುವಂತೆ ಮಾಡಿ ನಕ್ಸಲ್ ಬೆಳವಣಿಗೆಗೆ ತಡೆ ಒಡ್ಡಿದರು.
ತೀರ್ಥಹಳ್ಳಿಯಲ್ಲಿ ಒಂದಂಕಿ ಲಾಟರಿ ನಿಷೇಧ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಂದಂಕಿ ಲಾಟರಿ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದಾಗ ತೀರ್ಥಳ್ಳಿ ತಾಲೂಕಿನಲ್ಲಿ ಸಂಪೂರ್ಣವಾಗಿ ಬಂದ್ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ .
ಅಕ್ರಮ ದಂಧೆಗಳನ್ನು ನಿಗೂಢವಾಗಿ ಬೆಧಿಸುತ್ತಿದ್ದ ಅಧಿಕಾರಿ:
ಅಕ್ರಮ ದಂಧೆಗಳನ್ನು ನಿಗೂಢವಾಗಿ ಬೆಧಿಸುತ್ತಿದ್ದ ಬಾಲರಾಜ್ ಅವರು ತಮ್ಮ ಸಿಬ್ಬಂದಿಗಳನ್ನು ಮಾರುವೇಷದಲ್ಲಿ ಕಳುಹಿಸಿ ಅಕ್ರಮ ದಂಧೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ನೋಡಿಕೊಂಡು ನಂತರ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದರು.
ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಹೇಳಿ ಠಾಣೆಯಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದ ಅಧಿಕಾರಿ:
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುವುದು ಸರ್ವೇಸಾಮಾನ್ಯ ಇಂತ ಸಮಯದಲ್ಲಿ ಎರಡು ಪಕ್ಷದವರಿಗೂ ಬುದ್ಧಿವಾದ ಹೇಳಿ ಸಮಾಧಾನ ಮಾಡಿ ಕಳುಹಿಸುತ್ತಿದ್ದರು ಯಾವುದೇ ಫಲಾಪೇಕ್ಷೆ ಇಲ್ಲದೆ.
ಮೋಸ ಮಾಡಿದ ಯುವಕರಿಂದಲೇ ಯುವತಿಗೆ ತಾಳಿ ಕಟ್ಟಿಸಿ ಮಾಂಗಲ್ಯ ಭಾಗ್ಯ ಕರುಣಿಸಿದ ಅಧಿಕಾರಿ:
ಹಲವು ಪ್ರಕರಣಗಳಲ್ಲಿ ಯುವಕರು ಯುವತಿಗೆ ಮದುವೆಯಾಗುವುದಾಗಿ ಮೋಸ ಮಾಡಿ ನಂತರ ವಂಚಿಸುತ್ತಿದ್ದ ರು. ನಂತರ ಪ್ರಕರಣಗಳು ಬಯಲಿಗೆ ಬಂದಾಗ ಇವರು ಅಂತ ಯುವಕರಿಗೆ ಬುದ್ಧಿವಾದ ಹೇಳಿ ಅವರಿಗೆ ಮದುವೆ ಮಾಡಿಸಿ ಸುಸೂತ್ರವಾಗಿ ಸಂಸಾರ ನಡೆಸಲು ಸಹಕಾರಿಯಾದ ಹಲವು ಪ್ರಕರಣಗಳಿವೆ ಇಂದಿಗೂ ಕೂಡ ಹಲವು ಇಂಥ ಪ್ರಕರಣಗಳಲ್ಲಿ ಇರುವ ಯುವತಿಯರು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ.
ಕೈಕೆಳಗಿನ ಸಿಬ್ಬಂದಿಗಳಿಗೆ ಇವರ ಇವರನ್ನು ಕಂಡರೆ ಎಲ್ಲಿಲ್ಲದ ಸಂತೋಷ:
ತಮ್ಮ ಕೈಕೆಳಗಿನ ಸಿಬ್ಬಂದಿಗಳಿಗೆ ಗೌರವ ಕೊಟ್ಟು ಮಾತನಾಡಿಸುತ್ತಿದ್ದ ಇವರು ಎಂದು ಯಾವ ಸಿಬ್ಬಂದಿಗಳಿಗೂ ತೊಂದರೆಯನ್ನು ನೀಡಿಲ್ಲ ಒಂದು ವೇಳೆ ಯಾವುದಾದರೂ ಸಿಬ್ಬಂದಿಗಳು ಸಣ್ಣಪುಟ್ಟ ತಪ್ಪನ್ನು ಮಾಡಿದರೆ ಅಂತ ಸಿಬ್ಬಂದಿಗಳಿಗೆ ಕರೆದು ಬುದ್ದಿವಾದ ಹೇಳಿ ಕಳುಹಿಸುತ್ತಿದ್ದರು ನಂತರ ತಪ್ಪು ಸಿದ್ದಿ ಕೊಳ್ಳದೆ ಪುನಃ ಅಂತಹ ತಪ್ಪುಗಳನ್ನು ಮರುಕಳಿಸಿದರೆ, ಅಂತಹ ಸಿಬ್ಬಂದಿಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದರು.
ಈ ತರಹದ ಅಧಿಕಾರಿಗಳು ನಮ್ಮ ಇಲಾಖೆಯಲ್ಲಿ ಇದ್ದರೆ ಕೈಕೆಳಗಿನ ಅಧಿಕಾರಿಗಳು ಸಾಕಷ್ಟು ನೆಮ್ಮದಿಯ ವಾತಾವರಣದಿಂದ ಇರಲು ಸಾಧ್ಯವಾಗುತ್ತದೆ ಏಕೆಂದರೆ ಪ್ರತಿಯೊಬ್ಬರನ್ನು ಗೌರವಿಸುವವರು ಅವರಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕು ಎನ್ನುವುದನ್ನು ಕೂಡ ಚೆನ್ನಾಗಿ ಬಲ್ಲರು ಬಹುಶಃ ಈ ತರಹದ ಅಧಿಕಾರಿಗಳು ನಮ್ಮ ಇಲಾಖೆಯಲ್ಲಿ ಇನ್ನಷ್ಟು ಜನ ಇದ್ದಿದ್ದರೆ ಜೂನ್ 4/ 2016ರ ಸಮಸ್ಯೆ ಬರುತ್ತಿರಲಿಲ್ಲ ಎನ್ನುವುದು ಕೆಲವು ಸಿಬ್ಬಂದಿಗಳ ಮನದಾಳದ ಮಾತು.
ಶಿವಮೊಗ್ಗದ ರೌಡಿಸಂಗೆ ಇತಿಶ್ರೀ ಹಾಡಿದ ಬಾಲರಾಜ್:
ತಮ್ಮ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಸಂ ಸಂಪೂರ್ಣ ನಿಯಂತ್ರಣಕ್ಕೆ ತಂದರು ಬಾಲರಾಜ್ ಹೆಸರು ಕೇಳಿದರೆ ಸಾಕು ರೌಡಿಗಳು ಹೆದರುತ್ತಿದ್ದರು. ಹೇಳಿಕೇಳಿ ಶಿವಮೊಗ್ಗ ಜಿಲ್ಲೆ ರೌಡಿಸಂ ಗೆ ಫೇಮಸ್ಸು ಕೊತ್ವಾಲ್ ರಾಮಚಂದ್ರ ನಿಂದ ಹಿಡಿದು ಹಲವು ರೌಡಿಗಳು ಶಿವಮೊಗ್ಗವನ್ನು ಆಳಿದ್ದಾರೆ ಹಾಗೂ ತೆರೆಮರೆಗೆ ಸರಿದಿದ್ದಾರೆ ಕೆಲವರು ಸಾವನ್ನಪ್ಪಿದ್ದಾರೆ ಕೆಲವರು ರೌಡಿಸಂ ಬಿಟ್ಟು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಭೂಗತಪಾತಕಿ ತಮಿಳ್ ಕುಮಾರನ ಎನ್ಕೌಂಟರ್:
ಶಿವಮೊಗ್ಗದ ಪಾತಕಲೋಕ ಉತ್ತುಂಗ ಸ್ಥಾನದಲ್ಲಿದ್ದ ಸಮಯದಲ್ಲಿ ತಮಿಳ್ ಕುಮಾರನ ಎನ್ಕೌಂಟರ್ ಪಿಓ ಶಿವಕುಮಾರ್ ಮತ್ತು ಬಾಲರಾಜ್ ಅವರ ತಂಡದಿಂದ ತಮಿಳ್ ಕುಮಾರನ ಎನ್ಕೌಂಟರ್ ನಡೆಯುತ್ತದೆ . ಇದರಿಂದ ಭಯಭೀತರಾದ ಶಿವಮೊಗ್ಗದ ಇತರ ರೌಡಿಗಳು ಎಲ್ಲಿ ಬಾಲರಾಜ್ ತಮ್ಮ ಬಂಧೂಕಿನಿಂದ ತಮಿಳ್ ಕುಮಾರನ ಎನ್ಕೌಂಟರ್ ಮಾಡಿದ ಹಾಗೆ ಮಾಡುತ್ತಾರೋ ಎನ್ನುವ ಪ್ರಾಣಭಯದಿಂದ ಇತರ ಜಿಲ್ಲೆಗಳಿಗೆ ಹೋಗಿ ಬೇರೆ ಬೇರೆ ಪ್ರಕರಣಗಳಲ್ಲಿ ಬಂಧನ ವಾಗುತ್ತಾರೆ.
ಹಲವು ಪ್ರಕರಣಗಳಲ್ಲಿ ಬಾಲರಾಜ್ ಅವರನ್ನು ಈಗಲೂ ನೆನೆಸಿಕೊಳ್ಳುತ್ತಾರೆ ಜನರು:
ಭದ್ರಾವತಿಯಲ್ಲಿ ಮಾಲು ಕಳೆದುಕೊಂಡ ವ್ಯಕ್ತಿ ಸಿಗುವುದಿಲ್ಲ ಎನ್ನುವ ಭಯ ದಲ್ಲಿದ್ದಾಗ ಅದನ್ನು ಹುಡುಕಿ ಕೊಟ್ಟಾಗ ತನಗಾದ ಸಂಭ್ರಮ ಅಷ್ಟಿಷ್ಟಲ್ಲ ಈಗಲೂ ಆತ ಅದನ್ನು ನೆನೆಸಿಕೊಳ್ಳುತ್ತಾನೆ. ಇದೇ ತರ ಹಲವು ಪ್ರಕರಣಗಳಲ್ಲಿ ಬಾಲರಾಜ್ ಹೆಸರು ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.
ಇವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕ ಹಾಗೂ ರಾಷ್ಟ್ರಪತಿ ಪದಕ:
ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕವನ್ನು ನೀಡಿ ಗೌರವಿಸಿದರೆ, ಕೇಂದ್ರ ಸರ್ಕಾರ ರಾಷ್ಟ್ರಪತಿ ಪದಕವನ್ನು ನೀಡಿ ಗೌರವಿಸಿದೆ.
ಹದಿನೈದು ವರ್ಷಗಳ ನಂತರ ಶಿವಮೊಗ್ಗಕ್ಕೆ ರೀ ಎಂಟ್ರಿ:

2004ರಿಂದ 2006ರವರೆಗೆ ಸುಮಾರು ಮೂರು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬಿ ಬಾಲರಾಜ್ ಅವರು ಈಗ ನೂತನ ಡಿವೈಎಸ್ಪಿ ಶಿವಮೊಗ್ಗ ಮತ್ತೆ ಆಗಮಿಸಿದ್ದು.
ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಬಾಲರಾಜ್ ಅವರ ಮೇಲಿದೆ ಪ್ರಸ್ತುತ ಶಿವಮೊಗ್ಗ ಅತಿ ಸೂಕ್ಷ್ಮವಾಗಿದೆ. ಬೂದಿ ಮುಚ್ಚಿದ ಕೆಂಡದಂತಿದೆ ಇನ್ನೇನು ಅನಾಹುತ ಸಂಭವಿಸಿತ್ತು ಎನ್ನುವಷ್ಟರಲ್ಲಿ ದಕ್ಷ ವರಿಷ್ಠಾಧಿಕಾರಿಗಳಾದ ಲಕ್ಷ್ಮೀಪ್ರಸಾದ್ ಅವರ ಮುಂಜಾಗ್ರತೆಯಿಂದ ಅನಾಹುತ ತಪ್ಪಿದೆ. ಆರೋಪಿಗಳನ್ನು ಹಿಡಿದಿದ್ದಾರೆ.
ನೂತನ ಡಿವೈಎಸ್ಪಿ ಬಾಲರಾಜ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ಒಂದು ಕಡೆ ಇಂತಹ ಸೂಕ್ಷ್ಮ ಸಂದರ್ಭವನ್ನು ಸರಿಯಾಗಿ ನಿಭಾಯಿಸುವುದು , ಇನ್ನೊಂದು ಕಡೆ ಅಕ್ರಮ ಚಟುವಟಿಕೆಗಳ ಮೇಲೆ ಬ್ರೇಕ್ ಹಾಕುವುದು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಬಾಲರಾಜ್ ಅವರ ಸದ್ಯದ ಪರಿಸ್ಥಿತಿ ಆಗಿದ್ದು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಿ ದಕ್ಷ ವರಿಷ್ಠಾಧಿಕಾರಿಗಳಾದ ಲಕ್ಷ್ಮಿಪ್ರಸಾದ್ ಅವರ ಜೊತೆಗೆ ಶಿವಮೊಗ್ಗದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಕ್ರಮಗಳಿಗೆ ಬ್ರೇಕ್ ಹಾಕುತ್ತಾರೆ ಎನ್ನುವ ನಿರೀಕ್ಷೆ ನಾಗರಿಕರಲ್ಲಿ ಇದೆ…
ವರದಿ: ರಘುರಾಜ್ ಹೆಚ್. ಕೆ….,9449553305…
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…