
ಮಳವಳ್ಳಿ:; ಯಾವುದೇ ಸ್ವಾರ್ಥ ಇಲ್ಲದೆ ಬರುವ ರೋಗಿಗಳಿಗೆ ಉಚಿತವಾಗಿ ಗಿಡಮೂಲಿಕೆಯ ಸಸ್ಯಗಳ ಮೂಲಿಕೆಗಳಿಂದ ಹಲವಾರು ರೋಗಗಳಿಗೆ ಔಷಧಿ ನೀಡುತ್ತಾ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ .
ಇವರು ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ವಾಸವಿರುವ ನಾಗಮ್ಮ ಎಂಬ ಅಜ್ಜಿಯು ಬರುವ ಜನರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಇದ್ದಾರೆ .
ಹರಸ್ಥಿ ,ಕೀಲುಬಾವು ,ಕಾಮಾಲೆ, ರೋಗಕ್ಕೆ ಗಿಡಮೂಲಿಕೆಯ ನೀಡುತ್ತಾ ಹಲವಾರು ರೋಗಿಗಳನ್ನು ಗುಣಪಡಿಸಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ .
ಜನರಿಗೆ ಮತ್ತು ಗೋವುಗಳಿಗೆ ಹೊಟ್ಟೆ ಉಬ್ಬರ ಆದರೆ ಇವರು ವಿಭೂತಿ ಉಂಡೆಯಿಂದ ಮಂತ್ರಿಸಿ ಕೊಟ್ಟರೆ ಹೊಟ್ಟೆ ಉಬ್ಬರ ಗುಣವಾಗಿ ಹಲವಾರು ಜನರು ಗುಣಮುಖರಾಗಿದ್ದಾರೆ .
ಮಕ್ಕಳು ಬಿದ್ದು ಭೇದಿ ಆಗುತ್ತಿದ್ದರೆ ಆ ಮಕ್ಕಳಿಗೆ ಬಿದ್ದ ಗೂಳು ಪೂಜೆ ಮಾಡಿ ಆ ಮಕ್ಕಳಿಗೆ ಗಿಡಮೂಲಿಕೆಯ ಔಷಧಿಯನ್ನು ಸೊಂಟಕ್ಕೆ ಕಟ್ಟಿ ಕೊಡುತ್ತಾರೆ ಆಗ ಆ ಮಕ್ಕಳು ಗುಣಮುಖರಾಗುತ್ತಾರೆ .
ಮಡಿವಾಳ ಸಮುದಾಯದ ಜನರು ಇವರನ್ನು ಮದುವೆ ಶುಭ ಸಮಾರಂಭಗಳಿಗೆ ಸಿದ್ಧಪ್ಪಾಜಿ ದೇವರ ಗುಡ್ಡನ ಬಿಡಿಸುವುದಕ್ಕೆ ಹಲವಾರು ಪೂಜೆ ಕಾರ್ಯಕ್ರಮಗಳಿಗೆ ಇವರು ಮುಂದೆ ನಿಂತು ಆ ಕಾರ್ಯಗಳನ್ನು ಯಶಸ್ವಿಮಾಡಿಕೊಡುತ್ತಿದ್ದರು ಈಗ ವಯಸ್ಸಾದ ಕಾರಣ ಅಷ್ಟಾಗಿ ಕಾರ್ಯಕ್ರಮಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ .
ಇವರ ಕಿರು ಪರಿಚಯ ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ಲೇಟ್ ಬಸವಯ್ಯನವರ ಧರ್ಮಪತ್ನಿ ನಾಗಮ್ಮ 90 ರ ಅಜ್ಜಿ
ನಾಗಮ್ಮ ಅಪಾರ ಬಂದುಬಳಗವನ್ನು ಪಡೆದಿದ್ದು ಅವರಿಗೆ ಎಲ್ಲ ಇವರು ಎಂದರೆ ಅಚ್ಚುಮೆಚ್ಚಿನ ಅಜ್ಜಿಯಾಗಿದ್ದಾರೆ .
ಎಸ್,ಮಂಜು ಮಳವಳ್ಳಿ…
############################₹₹₹#######
ಸುದ್ದಿ ನೀಡಲು ಸಂಪರ್ಕಿಸಿ::9449553305…