
ಸಾಗರ:- ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತವೂ ಬಿಜೆಪಿ ಸರ್ಕಾರ ಸರ್ಕಾರ ಆಡಳಿತ ವ್ಯವಸ್ಥೆ ಇದ್ದರೂ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ದುರಾಡಳಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಪ್ರತಿ ಗುರುವಾರ ನೆಡೆಯುವ ಸಂತೆ ಕೆಸರುಮಯವಾಗಿದ್ದೂ ತರಕಾರಿ ಹಾಗೂ ಜನುಪಯೋಗಿ ಸರಕು ಸಾಮಗ್ರಿಗಳನ್ನೂ ಮಾರುವವರ ಕೊಳ್ಳುವವರ ಸ್ಥಿತಿ ನರಕ ಸದೃಶವಾಗಿದ್ದೂ, ನಗರಸಭೆಯ ಆಡಳಿತರೂಢರ ವಿರುದ್ಧ ಹಿಡಿಶಾಪ ಹಾಕುತ್ತಿದ್ದೂ, ಪ್ರತಿ ವರ್ಷ ಕೋಟ್ಯಂತರ ರೂ ಆದಾಯವಿರುವ ಸಾಗರ ನಗರಸಭೆಯ ಆಡಳಿತಕ್ಕೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ.
ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ಸನಿಹದಲ್ಲೇ ಕೋಟ್ಯಂತರ ರೂ ಸಾರ್ವಜನಿಕ ತೆರಿಗೆ ಹಣ ಬಳಸಿ ಸುಸಜ್ಜಿತ ಸಂತೆ ಮೈದಾನ ಕಟ್ಟಡವೂ ನಿರ್ಮಿಸಿ ಹಲವು ವಸಂತಗಳೇ ಉರುಳಿದರೂ ಇನ್ನೂ ಉದ್ಘಾಟನೆಯಾಗದೇ ಇರುವುದು, ಸಾಗರ ನಗರಸಭೆಯು ಸಂತೆ ನೆಡೆಸುವ ಕಟ್ಟಡ ಮೂಲ ಉದ್ದೇಶವನ್ನೇ ಮರೆತಂತಿದೆ. ಈ ಸಂತೆ ಮೈದಾನವನ್ನೂ ಮದುವೆ, ಅರತಕ್ಷತೆ, ಕೆರೆಹಬ್ಬ ಇನ್ನಿತರ ಸಭಾ ಕಾರ್ಯಕ್ರಮಕ್ಕೆ ಮೀಸಲಿಟ್ಟಿರುವ ಸಾಗರ ನಗರಸಭೆಯ ಆಡಳಿತ ವಿರುದ್ಧ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಂದಿರಾ ಗಾಂಧಿ ಮಹಿಳಾ ಕಾಲೇಜು ಹತ್ತಿರದಲ್ಲಿರುವ ಸುಸಜ್ಜಿತ ಕಟ್ಟಡಗಳನ್ನೂ ಹೊಂದಿದ ಸಂತೆ ಮೈದಾನವನ್ನೂ ತ್ವರಿತವಾಗಿ ಸಾರ್ವಜನಿಕರಿಗೆ ಸದುಪಯೋಗದತ್ತ ಸೂಕ್ತ ಕ್ರಮಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಸಾಗರದ ನಗರಸಭೆಯ ಆಡಳಿತರೂಢರಿಗೆ ಮನವಿ ಮಾಡಿದ್ದಾರೆ
✒️ ಓಂಕಾರ ಎಸ್. ವಿ. ತಾಳಗುಪ್ಪ..
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…