ಸಾಗರ : ಸಾಗರದ ನಗರಸಭೆಯ ಅಧಿಕಾರಿಗಳು ಈ ವರ್ಷ ಒಂದು ಜನಸ್ನೇಹಿ ಕೆಲಸ ಮಾಡಿದ್ದಾರೆ. ಆದ್ದರಿಂದ ನಗರದ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹೋದವರ್ಷ ಸಾಗರ ನಗರಸಭಾ ವ್ಯಾಪ್ತಿಯ ಮನೆಕಂದಾಯ ಮತ್ತು ನೀರಿನಕಂದಾಯಗಳನ್ನು ದೂರದ ಬ್ಯಾಂಕ್ ಗಳಲ್ಲಿಯೇ ಸರದಿಸಾಲಿನಲ್ಲಿ ನಿಂತು ತುಂಬಬೇಕಿತ್ತು. ಇದು ಹಿರಿಯ ನಾಗರಿಕರಿಗೆ, ಗರ್ಭಿಣಿಯರು ಮತ್ತು ಅನಾರೋಗ್ಯಪೀಡಿತರಿಗೆ ತುಂಬಾ ತೊಂದರೆ ಆಗುತ್ತಿತ್ತು. ಈ ಬಗ್ಗೆ ಸ್ಥಳೀಯರಾದ ಶ್ರೀಧರ್ ಶರ್ಮ ಮತ್ತು ಕೆಲವು ಸಮಾನ ಮನಸ್ಕ ನಾಗರಿಕರು ನಮಗೆ ನಗರಸಭೆಯ ಆವರಣದಲ್ಲಿಯೇ ವಿವಿಧ ಕಂದಾಯ ತುಂಬಲು ಅನುಕೂಲ ಮಾಡಿಕೊಡಿ ಎಂದು ನಿರಂತರವಾಗಿ ಒತ್ತಾಯ ಮಾಡುತ್ತಿದ್ದರು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಗರಸಭೆ ಈಗ ನಗರಸಭೆಯ ಕಚೇರಿಯ ಒಂದು ಮುಂಗಟ್ಟೆಯಲ್ಲಿಯೇ ಹಣ ತುಂಬುವ ಅನುಕೂಲ ಮಾಡಿಕೊಟ್ಟಿದೆ. ಇದನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಹಿರಿಯ ನಾಗರಿಕರಾದ ಶ್ರೀಧರ್ ಶರ್ಮ ಮತ್ತು ಅವರ ಸಮಾನಮನಸ್ಕ ವ್ಯಕ್ತಿಗಳು ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸಿದ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು , ಸ್ಥಾಯಿಸಮಸ್ಯೆ ಅಧ್ಯಕ್ಷರು ಹಾಗೂ ನಗರಸಭೆಯ ಆಯುಕ್ತರು ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ತೆರಿಗೆದಾರರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಪತ್ರಿಕೆ ಮೂಲಕ ಅರ್ಪಿಸಿದ್ದಾರೆ. ಅಂತೆಯೇ ಬ್ಯಾಂಕ್ ನ ಸುಸಜ್ಜಿತ ಕಟ್ಟಡದಿಂದ ನಗರಸಭೆಯ ಕಚೇರಿಯೊಳಗೇ ಸಾಗಿಬಂದ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೆ ಇದು ಇಲ್ಲಿಗೆ ನಿಲ್ಲದೆ ಹೀಗೆ ನಿರಂತರವಾಗಿ ಮುಂದುವರಿದುಕೊಂಡು ಹೋಗಲಿ ಎನ್ನುವುದು ಶ್ರೀಧರ್ ಶರ್ಮ ಅವರ ತಂಡದ ಕೋರಿಕೆ…
#################################₹₹₹₹
ಸುದ್ದಿ ನೀಡಲು ಸಂಪರ್ಕಿಸಿ:9449553305…