
ಶಿವಮೊಗ್ಗ: ನಗರದಲ್ಲಿ ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಔಷಧಿ ಸಿಂಪಡಿಸಿ ಬೇಕಾದ ಮಹಾನಗರ ಪಾಲಿಕೆ ಮೌನವಾಗಿ ಕುಳಿತಿದೆ.
ಚರಂಡಿಯಲ್ಲಿ ನಿಂತ ನೀರು :
ನಗರದ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಶೆಕೆ ಜೊತೆಗೆ ಸೊಳ್ಳೆ ಕಾಟ ಬೇರೆ ಹೇಳಲು ಆಗದೆ ಅನುಭವಿಸಲೂ ಆಗದೇ ನಾಗರಿಕರು ಸಂಕಟ ಪಡುತ್ತಿದ್ದಾರೆ.
ಸಾಂಕ್ರಾಮಿಕ ರೋಗ ಹರಡುವ ಮುನ್ನ ಎಚ್ಚೆತ್ತುಕೊಳ್ಳಿ:
“ನ್ಯೂಸ್ ವಾರಿಯರ್ಸ್” ಪತ್ರಿಕೆ ಮೌಖಿಕವಾಗಿ ಮೊನ್ನೆ ಹೇಳಿದ ನಂತರ ಕೋಟೆ ಭಾಗದಲ್ಲಿ ಔಷಧಿ ಸಿಂಪಡಿಸಿ ಲಾಗುತ್ತಿದೆ. ಸ್ಪಂದನೆಗೆ ಧನ್ಯವಾದಗಳು. ಅದೇ ರೀತಿ ಬೇರೆ ವಾರ್ಡ್ ಗಳ ಚರಂಡಿಗಳಲ್ಲಿ ನೀರು ನಿಂತಿದ್ದು. ಸುತ್ತಲೂ ಸಣ್ಣಪುಟ್ಟ ಗಿಡಗಳು ಬೆಳೆದಿದೆ. ಕ್ಲೀನ್ ಆಗಬೇಕು ನಂತರ ಸೊಳ್ಳೆಗಳ ಔಷಧಿ ಸಿಂಪಡಿಸಬೇಕು.

ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ನಿವಾಸಿಗಳ ಗೋಳು ಕೇಳೋರ್ಯಾರು?

ನಗರದ ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಜನರ ಗೋಳು ಕೇಳುವವರು ಇಲ್ಲದಂತಾಗಿದೆ . ಉತ್ತಮವಾದ ರಸ್ತೆಗಳು ಮೊದಲೇ ಇಲ್ಲ ,ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ , ನಿರಂತರವಾಗಿ ಮಹಾನಗರ ಪಾಲಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿಲ್ಲ. ಚರಂಡಿಗಳ ವ್ಯವಸ್ಥೆಯಂತೂ ಹೇಳತೀರದು ಇಲ್ಲಿನ ಜನರು ಮಹಾ ನಗರಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನುಮುಂದಾದರೂ ಎಚ್ಚೆತ್ತುಕೊಂಡು ಮಲ್ಲಿಕಾರ್ಜುನ ನಗರ ಹಾಗೂ ಬೊಮ್ಮನಕಟ್ಟೆ ಕಡೆ ಗಮನ ನೀಡಲಿ.
ರಘುರಾಜ್ ಹೆಚ್.ಕೆ….
#####################################ಸುದ್ದಿ ನೀಡಲು ಸಂಪರ್ಕಿಸಿ:9449553305…