
ಶಿವಮೊಗ್ಗ: ನಗರದ ಕೆಲವು ವಾರ್ಡಗಳಲ್ಲಿ ಬೀದಿನಾಯಿಗಳ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು. ಶಾಲಾ ಮಕ್ಕಳಿಗೆ ರಜಾ ಇರುವ ಈ ದಿನಗಳಲ್ಲಿ ಮಕ್ಕಳು ಹೊರಗೆ ಓಡಾಡುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಕಚ್ಚುವುದು ಗಾಯ ಗೊಳಿಸುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.
ಇಂದು ಅಶ್ವತ್ ನಗರದಲ್ಲಿ ನಡೆದ ಘಟನೆ:
ಇಂದು ಅಶ್ವತ್ ನಗರದಲ್ಲಿ ಶಾಲಾ ಬಾಲಕ ಹೊರಗಡೆ ಆಟವಾಡುತ್ತಿದ್ದಾಗ ಹಂದಿ ಒಂದು ಏಕಾಏಕಿ ಬಂದು ಆತನಿಗೆ ಗಾಯಗೊಳಿಸಿದೆ ತೀವ್ರತರದ ಪೆಟ್ಟು ಬೀಳುವ ಮುಂಚೆ ಆತನ ಪೋಷಕರು ನೋಡಿ ಹಂದಿಯನ್ನು ಓಡಿಸಿದ್ದಾರೆ.
ಹಂದಿಗಳ ಹಿಂಡು ಅಶ್ವತ್ ನಗರ l.b.s. ನಗರದಲ್ಲಿ ಹೆಚ್ಚಾಗಿವೆ.
ಹಾಗೂ ಬೀದಿನಾಯಿಗಳು ಕೂಡ ಯಥೇಚ್ಛವಾಗಿ ಓಡಾಡುತ್ತವೆ.
ಕೂಡಲೇ ಮಹಾನಗರಪಾಲಿಕೆ ಇದರ ವಿರುದ್ಧ ಕ್ರಮ ಕಗೊಳ್ಳುವಂತೆ ಸ್ಥಳೀಯರ ಮನವಿ:
ಏನಾದರೂ ಒಂದು ದೊಡ್ಡ ಅನಾಹುತ ಆಗುವ ಮೊದಲು ಮಹಾನಗರ ಪಾಲಿಕೆ ಕೂಡಲೇ ಈ ಹಂದಿಗಳ ಹಾಗೂ ಬೀದಿನಾಯಿಗಳನ್ನು ಹಿಡಿಸಿ ಮಕ್ಕಳ ರಕ್ಷಣೆ ಹಾಗೂ ವಾರ್ಡ್ ನ ಸ್ವಚ್ಛತೆ ಕಾಪಾಡುವಲ್ಲಿ ಗಮನಹರಿಸಬೇಕೆಂದು ಸ್ಥಳೀಯರು ಮನವಿ ಹಾಗೂ ಆಗ್ರಹ ಮಾಡಿದ್ದಾರೆ .
ರಘುರಾಜ್ ಹೆಚ್. ಕೆ…
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…