
ತಿರ್ಥಹಳ್ಳಿ : ಮೇಗರವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗಾರಿನ ವೈದ್ಯಾಧಿಕಾರಿ ಡಾ/ ಹರ್ಷ ಜನರಲ್ ಮೆಡಿಸಿನ್ ವಿಭಾಗದಲ್ಲಿ ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿದ್ದು .ವೈದ್ಯಾಧಿಕಾರಿ ಡಾ.ಹರ್ಷರವರಿಗೆ ಪ್ರಾ.ಆ.ಕೇಂದ್ರ ಮೇಗರವಳ್ಳಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯವಾಗಿ ಅಭಿನಂದಿಸಿ,ಹಾರ್ದಿಕವಾಗಿ ಶುಭ ಹಾರೈಸಲಾಯಿತು.
ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಸಾತ್ವಿಕ ಸಜ್ಜನಿಕೆಯ ನಡೆನುಡಿ, ಹಸನ್ಮುಖಿ ವ್ಯಕ್ತಿತ್ವದ ಜೊತೆಗೆ ಹಗಲಿರುಳೆನ್ನದೆ ರೋಗಿಗಳ ಅಗತ್ಯಕ್ಕೆ ಸ್ಪಂದಿಸುತಿದ್ದ ಯುವ ಉತ್ಸಾಹಿ ವೈದ್ಯಾಧಿಕಾರಿ ಡಾ.ಹರ್ಷರವರ ಜನಪರ ಕಾಳಜಿ ಬದ್ದತೆಗಳು ನಿಜಕ್ಕೂ ಮಾದರಿ. ಇಂತಹ ಉತ್ತಮ ವೈದ್ಯಾಧಿಕಾರಿಗಳ ಉನ್ನತ ವ್ಯಾಸಾಂಗದಿಂದ ಸಮಾಜಕ್ಕೆ ಖಂಡಿತವಾಗಿಯೂ ಇನ್ನಷ್ಟು ಹೆಚ್ಚಿನ ಆರೋಗ್ಯ ಸೇವೆ ದೊರಕಲಿದೆ. ಇಂತಹ ಸಜ್ಜನ ವೈದ್ಯಾಧಿಕಾರಿಗಳ ಸಂಖ್ಯೆ ಹೆಚ್ಚಲಿ. ಇವರ ಉನ್ನತ ವ್ಯಾಸಾಂಗಕ್ಕೆ ದೊಡ್ಡ ಯಶಸ್ಸು ಲಭಿಸಲಿ, ಇವರಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ದೊರಕಲಿ ಎಂದು ಶುಭ ಹಾರೈಸಿದರು.
ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಗೀತಾ ಚಂದ್ರಮೌಳಿ, ಶುಶ್ರೂಷಣಾಧಿಕಾರಿ ನಿರ್ಮಲ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಅನುಸೂಯ ಬಿ ಆರ್. ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ರಾಘವೇಂದ್ರ, ಕೈಲಾಸ್, ಲಿಷಾ, ಡಿ ದರ್ಜೆ ನೌಕರರಾದ ಪಾರ್ವತಿ,ಗಣೇಶ, ವಾಹನ ಚಾಲಕ ಸುಂದರೇಶ್ ಮತ್ತಿತರರಿದ್ದರು.
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…