Wednesday, April 30, 2025
Google search engine
Homeರಾಜ್ಯಗೌಡ್ರ ಗದ್ದಲದಲ್ಲಿ ಕಿಮ್ಮನೆ ಸುಮ್ಮನಾದ್ರ ? ಒಂದು ಸನ್ಮಾನ ಹಲವು ಅನುಮಾನ..!!

ಗೌಡ್ರ ಗದ್ದಲದಲ್ಲಿ ಕಿಮ್ಮನೆ ಸುಮ್ಮನಾದ್ರ ? ಒಂದು ಸನ್ಮಾನ ಹಲವು ಅನುಮಾನ..!!

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವಾಗ ಮಂಜುನಾಥ ಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದರೂ ಕಿಮ್ಮನೆ ಕೆರಳಲು ಶುರುಮಾಡಿದರು.

ಮುಂಚಿನಿಂದಲೂ ಕಿಮ್ಮನೆ ಒಂದಷ್ಟು ಸಿದ್ಧಾಂತಗಳನ್ನು ಇಟ್ಟುಕೊಂಡು ಬಂದಂತಹ ರಾಜಕಾರಣಿ ಏನಾದರೂ ಹೇಳುವುದಿದ್ದರೆ ನೇರವಾಗಿ ಹೇಳುವಂತಹ ರಾಜಕಾರಣಿ ಅಧಿಕಾರ ಇರಲಿ ಇಲ್ಲದಿರಲಿ ಜನರ ನಡುವೆ ನಿಸ್ವಾರ್ಥಿಯಾಗಿ ಒಂದಷ್ಟು ಕಾನೂನು ಸಲಹೆಗಳನ್ನು ನೀಡುತ್ತಾ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ತಮ್ಮ ಕೈಲಾದ ಸಹಾಯಗಳನ್ನು ಮಾಡುತ್ತಾ ಜನರ ನಡುವೆ ಇರುವ ವ್ಯಕ್ತಿ.

ಮಂಜುನಾಥ್ ಗೌಡರ ಸೇರ್ಪಡೆಯಿಂದ ಇರಿಸುಮುರಿಸು ಗೊಂಡ ಕಿಮ್ಮನೆ:

ಭ್ರಷ್ಟಾಚಾರವನ್ನು ಪ್ರಬಲವಾಗಿ ವಿರೋಧಿಸುವ ಕಿಮ್ಮನೆ ಯಾವಾಗ ಮಂಜುನಾಥ ಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಂಡರೂ ಅಂದಿನಿಂದಲೇ ಗೌಡರ ಸೇರ್ಪಡೆಯನ್ನು ವಿರೋಧಿಸುತ್ತಾ ಬಂದರು.

ಭ್ರಷ್ಟರಿಗೆ ಮಣೆ ಹಾಕಬೇಡಿ ಅವರ ಜೊತೆ ನಾನು ಇರುವುದಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಾ ಬಂದರು ಹಾಗೆ ನಡೆದುಕೊಂಡರು ಕೂಡ ಎಂದು ಸಭೆ-ಸಮಾರಂಭಗಳಲ್ಲಿ ವೇದಿಕೆಗಳಲ್ಲಿ ಮಂಜುನಾಥ ಗೌಡರ ಜೊತೆ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಆದರೆ ಮಂಜುನಾಥ ಗೌಡರು ಎಲ್ಲೂ ಬಹಿರಂಗವಾಗಿ ಕಿಮ್ಮನೆ ಯನ್ನು ವ್ಯಾಪಕವಾಗಿ ಟೀಕಿಸಲಿಲ್ಲ:

ಕಿಮ್ಮನೆ ಅವರ ಸಿದ್ಧಾಂತಗಳ ಬಗ್ಗೆ ಸ್ಪಷ್ಟ ಅರಿವಿದ್ದ ಮಂಜುನಾಥ ಗೌಡರು ಕಿಮ್ಮನೆ ಅವರನ್ನು ಎಲ್ಲೂ ಬಹಿರಂಗವಾಗಿ ವ್ಯಾಪಕವಾಗಿ ಟೀಕಿಸಿಲ್ಲ ಹಾಗೆ ಜೊತೆಯಾಗಿ ರಾಜಕಾರಣವನ್ನು ಮಾಡಲಿಲ್ಲ ಬದಲಿಗೆ ತಾವೇ ತಮ್ಮ ಹಿಂಬಾಲಕ ರೊಂದಿಗೆ ಸ್ಥಳೀಯ ಚುನಾವಣೆಗಳನ್ನು ಎದುರಿಸಿದರು. ಅದರಲ್ಲಿ ಯಶಸ್ವಿಯಾದರು . ಇಬ್ಬರ ನಡುವೆ ಮುಸುಕಿನ ಗುದ್ದಾಟ ಹೀಗೆ ನಡೆದುಕೊಂಡು ಹೋಗುತ್ತಿತ್ತು.

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ತೀರ್ಥಹಳ್ಳಿ ಯ ಬೆಟ್ಟಮಕ್ಕಿಯಲ್ಲಿ ನಡೆದ ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹಾಗೂ ಆರ್​ಎಂ ಮಂಜುನಾಥ್​ ಗೌಡರಿಗೆ ಒಟ್ಟಾಗಿ ಸನ್ಮಾನ ಮಾಡಲಾಗಿದೆ.

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಕರು ಒಂದೇ ಪಕ್ಷದಲ್ಲಿದ್ದರೂ ಪ್ರಬಲವಾಗಿ ಒಬ್ಬರನ್ನೊಬ್ಬರು ವಿರೋಧಿಸುತ್ತಿದ್ದ ಇಬ್ಬರು ನಾಯಕರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಸನ್ಮಾನ ಮಾಡಿರುವುದು ಹಾಗೂ ಇಬ್ಬರು ಒಪ್ಪಿಕೊಂಡು ಪರಸ್ಪರ ಕುಳಿತು ಸನ್ಮಾನ ಮಾಡಿಸಿ ಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತೀರ್ಥಹಳ್ಳಿ ರಾಜಕೀಯಕ್ಕೆ ಹೊಸ ತಿರುವು ಕೊಡುತ್ತಾ ಈ ಬೆಳವಣಿಗೆ?

ಮಂಜುನಾಥ್ ಗೌಡರು ಕಾಂಗ್ರೆಸ್ ಸೇರಿದ್ದನ್ನು ಪ್ರಬಲವಾಗಿ ವಿರೋಧಿಸಿ ತಮ್ಮ ಆತ್ಮೀಯರ ಜೊತೆ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದ ಕಿಮ್ಮನೆ ರತ್ನಾಕರ್ ಚುನಾವಣೆಗಾಗಿ ಗೌಡರ ಜೊತೆ ಹೊಂದಿಕೊಂಡರಾ?

ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನ ನಗೆ ಬೀರಿದ ಮಂಜುನಾಥ್ ಗೌಡರು ಮುಂದಿನ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನನಗೆ ಕನ್ಫರ್ಮ್ ಎಂದು ಆತ್ಮೀಯರಲ್ಲಿ ಹೇಳಿಕೊಳ್ಳುತ್ತಿದ್ದರು. ಹಾಗೆ ಕಿಮ್ಮನೆ ಕಾರ್ಯಕ್ರಮಗಳಲ್ಲಿ ದೂರ ಉಳಿಯುತ್ತಿದ್ದರು ಇಬ್ಬರ ನಡುವಿನ ಶೀತಲ ಸಮರ ಹೀಗೆ ಮುಂದುವರೆದಿತ್ತು. ಆದರೆ ಈ ಬೆಳವಣಿಗೆಯಿಂದ ತೀರ್ಥಳ್ಳಿ ಕಾಂಗ್ರೆಸ್ಸಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಹತ್ತಿರ ಇರುವುದರಿಂದ ಇಬ್ಬರೂ ಒಂದಾದ್ರ? ರಾಜಕೀಯ ವೈಮನಸ್ಸು ಬಿಟ್ಟರಾ?

ಚುನಾವಣೆಯ ಸಮಯ ಹತ್ತಿರ ಬರುತ್ತಿದ್ದಂತೆ ಇಬ್ಬರು ನಾಯಕರು ತಮ್ಮ ನಡುವಿನ ಅಸಮಧಾನವನ್ನು ಬಿಟ್ಟು ಪಕ್ಷಕ್ಕಾಗಿ ಒಂದಾಗಿದ್ದಾರಾ? ಅಥವಾ ಕಿಮ್ಮನೆ ರತ್ನಾಕರ್ ಅವರಿಗೆ ತೀರ್ಥಹಳ್ಳಿಯ ವಿಧಾನಸಭೆಯ ಕ್ಷೇತ್ರ ಕನ್ಫರ್ಮ್ ಆಯ್ತಾ? ಆರ್ ಎಂ ಮಂಜುನಾಥ್ ಗೌಡರಿಗೆ ಬದಲಿ ವ್ಯವಸ್ಥೆ ಆಗಿದೆಯಾ? ಇದು ಇಬ್ಬರ ನಡುವೆ ಶೀತಲ ಸಮರ ಸರಿಯಾಗಲು ಕಾರಣನಾ? ಇದೆಲ್ಲವೂ ಪಕ್ಷದ ಆಂತರಿಕ ವಿಷಯ ಅದೇನೇ ಇರಲಿ,

ಒಟ್ಟಿನಲ್ಲಿ ಬಿಜೆಪಿಗೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ನ ಇಬ್ಬರು ನಾಯಕ ನಾಯಕರು ಒಂದಾಗಿರುವುದು ಕಾಂಗ್ರೆಸ್ಸಿನ ಉಳಿದ ನಾಯಕರಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹದ ಚಿಲುಮೆ ಮೂಡಿಸಿದೆ.

ಹಲವು ಅನುಮಾನಗಳನ್ನು ಹುಟ್ಟು ಹಾಕಿರುವ ಈ ಸನ್ಮಾನ ತೀರ್ಥಹಳ್ಳಿಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿರುವುದಂತೂ ಸತ್ಯ ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕು ‌..

ರಘುರಾಜ್ ಹೆಚ್. ಕೆ….

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...