
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗೃಹ ಮಂತ್ರಿಗಳ ಊರಾದ ಆರಗ ಗ್ರಾಮದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ದೂರು ದಾಖಲಾಗಿದ್ದು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆತನ ಗಂಡನ ದೂರಿನ ಅನ್ವಯ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಶರಣಾಗಿದ್ದಾರೆ.
ಶರಣಾಗಿರುವ ಆರೋಪಿಗಳು ನಿಜವಾಗಲೂ ಮಾನಭಂಗ ಮಾಡಿದ್ದಾರ ?
ಇವತ್ತು ಮುಂಜಾನೆ ಪೊಲೀಸರಿಗೆ ಶರಣಾಗಿರುವ ಆರೋಪಿಗಳಾದ ಸಂಪತ್ ಮತ್ತು ಆದರ್ಶ ನಿಜವಾಗಲೂ ದಲಿತ ಮಹಿಳೆಯ ಮೇಲೆ ಮಾನಭಂಗ ಮಾಡಿದ್ದಾರಾ?
ಬುದ್ಧಿವಾದ ಹೇಳಿದ್ದೆ ಮುಳುವಾಯಿತಾ?
ದೂರು ನೀಡಿರುವ ದಲಿತ ಜನಾಂಗದ ದೇವಿಂದ್ರ ಆತನ ಜೊತೆ ಮಹಿಳೆಯನ್ನು ವೈನ್ ಸ್ಟೋರ್ ಗೆ ಮದ್ಯ ಖರೀದಿಸಲು 10:30, ರಿಂದ11 ಗಂಟೆ ಸುಮಾರಿಗೆ ಬಂದಿದ್ದಾನೆ. ಇದನ್ನು ಗಮನಿಸಿದ ಸಂಪತ್ ಮತ್ತು ಆದರ್ಶ ಇಷ್ಟು ಹೊತ್ತಿಗೆ ಈಕೆಯನ್ನು ಏಕೆ ವೈನ್ ಶಾಪ್ ಗೆ ಕರೆದುಕೊಂಡು ಬಂದೆ ಎಂದು ಕೇಳಿದ್ದಾರೆ.
ಮೊದಲೇ ಕುಡಿದಿದ್ದ ದೇವಿಂದ್ರ ಆದರ್ಶ ಮತ್ತು ಸಂಪತ್ ಮೇಲೆ ತಿರುಗಿಬಿದ್ದನಾ?
ಮೊದಲೇ ಕುಡಿದು ಬಂದಿದ್ದ ದೇವೇಂದ್ರ ನಾನು ಈಗಾಗಲೇ ಸಂಕದಹೊಳೆಯಲ್ಲಿ ಯೋಗೇಂದ್ರ ಎಂಬುವವರ ಜೊತೆ ಗಲಾಟೆ ಮಾಡಿಕೊಂಡು ಬಂದಿದ್ದೇನೆ ಎಂದು ಮುಖದಲ್ಲಿ ಆದ ಗಾಯಗಳನ್ನ ತೋರಿಸಿದ್ದಾನೆ, ಇದನ್ನ ನೋಡಿದ ಸಂಪತ್ ಮತ್ತು ಆದರ್ಶ್ ನೀನು ತಕ್ಷಣ ಆಕೆಯನ್ನ ಇಲ್ಲಿಂದ ಕರೆದುಕೊಂಡು ಹೊರಡು ಇಲ್ಲ ಅಂದ್ರೆ ನಾವು ನಾಲ್ಕು ಬಿಟ್ಟು ಕಳಿಸಬೇಕಾಗುತ್ತೆ ಎಂದು ಬೆದರಿಸಿದ್ದಾರೆ.
ಬುದ್ಧಿವಾದವನ್ನು ಬೈಗುಳ ಎಂದು ತಿಳಿದುಕೊಂಡ ದೇವಿಂದ್ರ ಮತ್ತು ಮಹಿಳೆ ತಿರುಗಿಬಿದ್ದಿದ್ದಾರೆ:
ಸಂಪತ್ ಮತ್ತು ಆದರ್ಶ ಹೇಳಿದ ಬುದ್ಧಿವಾದವನ್ನು ಕುಡಿದ ಮತ್ತಿನಲ್ಲಿ ಬೈಗುಳ ಎಂದು ತಿಳಿದುಕೊಂಡ ದೇವಿಂದ್ರ ಅವರ ವಿರುದ್ಧ ತಿರುಗಿ ಬಿದ್ದಿದ್ದಾನೆ. ಅಶ್ಲೀಲವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಗಮನಿಸುತ್ತಿದ್ದ ಆಕೆ ಕೂಡ ಅವರ ವಿರುದ್ಧ ತಿರುಗಿಬಿದ್ದು ಅವಾಚ್ಯಶಬ್ದಗಳಿಂದ ನಿಂದಿಸಿದ್ದಾಳೆ. ಆ ಸಮಯದಲ್ಲಿ ಈ ನಾಲ್ವರ ನಡುವೆ ಸ್ವಲ್ಪ ಜಗಳವಾಗಿದೆ. ನಂತರ ಎಲ್ಲವೂ ಸರಿ ಹೋಗಿ ದೇವಿಂದ್ರ ಮತ್ತು ಆ ಮಹಿಳೆ ತಮ್ಮ ತಮ್ಮಲ್ಲೇ ಜಗಳವಾಡಿ ಕೊಳ್ಳುತ್ತಾ ಮನೆಗೆ ಹಿಂದಿರುಗಿದ್ದಾರೆ.
ನಂತರ ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ:
ಮೊದಲೇ ಕುಡಿದ ಮತ್ತಿನಲ್ಲಿ ಇದ್ದಿದ್ದರಿಂದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಎದ್ದು ಬಿದ್ದು ಗಾಯಗಳನ್ನು ಮಾಡಿಕೊಂಡು ಮನೆಗೆ ಹೋಗಿದ್ದಾರೆ. ಆದರೆ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಲು ಬಿಡದೆ ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗೂ ಹೇಗಾದರೂ ಮಾಡಿ ಗೃಹ ಸಚಿವರ ಹೆಸರಿಗೆ ಕಳಂಕ ತರಲು ವ್ಯವಸ್ಥಿತವಾಗಿ ಸಂಚು ರೂಪಿಸಿ ತಮ್ಮ ಮೇಲೆ ಹಲ್ಲೆಯಾಗಿದೆ ಹಾಗೂ ರೇಪ್ ಮಾಡಿದ್ದಾರೆ ಎನ್ನುವ ದೂರು ನೀಡಿ ಎಂದು ಪ್ರಚೋದಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವಿಂದ್ರ ಮತ್ತು ಆ ಮಹಿಳೆಗೆ ಪ್ರಚೋದಿಸಿ ದೂರು ನೀಡಿಸಿದ್ದಾರೆ.
ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರೆ ದೂರು ನೀಡಲು?
ಆಗಿದ್ದು ಆಯ್ತು ನಮ್ಮದು ತಪ್ಪಿದೆ ಎಂದು ಸುಮ್ಮನಾಗಿದ್ದ ದೇವಿಂದ್ರ ಮತ್ತು ಆ ಮಹಿಳೆಗೆ ಪುಸಲಾಯಿಸಿ, ಪ್ರಚೋದಿಸಿ, ದೂರು ನೀಡಲು ಪ್ರೋತ್ಸಾಹಿಸಿದರು. ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ದೂರು ನೀಡಲು ಮುಂದಾದರು. ಎನ್ನುತ್ತವೆ ಕೆಲವು ಮೂಲಗಳು…
ಸ್ಥಳೀಯ ಕೆಲವರು ಹೇಳುವುದೇ ಬೇರೆ:
ರಾತ್ರಿ ತಡವಾಗಿದ್ದರಿಂದ ಗಂಡ ಹೆಂಡತಿಯನ್ನು ಬಿಟ್ಟು ಬಾರಿಗೆ ಒಬ್ಬನೇ ಹೋಗಿ ಊಟ ತರಲು ಸಾಧ್ಯವಿಲ್ಲ ಆದ್ದರಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ದುಷ್ಕರ್ಮಿಗಳು ಅವರನ್ನು ಹೊಡೆದಿದ್ದು ನಿಜ ಹಾಗೆ ಅವರಿಂದ ಬಿಡಿಸಿ ಆಟೋ ಮಾಡಿಸಿ ಮನೆಗೆ ಕಳಿಸಿದ್ದು ನಿಜ ಇದರಲ್ಲಿ ಯಾವುದೇ ಸಂಶಯವಿಲ್ಲ. ಮುಂದೆ ಯಾರಿಗೂ ಹೀಗಾಗಬಾರದು ಎಂದು ಸ್ಥಳೀಯರು ಹೇಳುತ್ತಾರೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯಿತು ಎಲ್ಲ ದೃಶ್ಯಗಳು:

ಸಿಸಿ ಕ್ಯಾಮೆರಾದಲ್ಲಿ ಮಹಿಳೆ ಮತ್ತು ಆಕೆಯ ಗಂಡ ಬಾರ್ ಗೆ ಬಂದಿರುವುದು ಅಲ್ಲಿ ನಡೆದಿರುವ ಘಟನೆ ಸೆರೆಯಾಗಿದ್ದು ಘಟನೆಯ ತನಿಖೆಯ ನಂತರ ನಿಜವಾದ ಸತ್ಯ ಹೊರಗೆ ಬರುತ್ತದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿರುವುದು 10:50 ರ ಸುಮಾರಿಗೆ ಆದರೆ ದೇವಿಂದ್ರ ಮತ್ತು ಆಕೆಯ ಪತ್ನಿ ನೀಡಿದ ದೂರು 9 ಗಂಟೆ ಸುಮಾರಿಗೆ ಎಂದು ದೂರಿನಲ್ಲಿಯೇ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಆರೋಪಿಗಳು ನಿಜವಾಗಲೂ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ತಪ್ಪೇ ಮಾಡದಿದ್ದರೆ ಯಾರೋ ಹೆಣೆದ ಕುತಂತ್ರಕ್ಕೆ ಇವರು ಬಲಿಯಾಗದಿರಲಿ.
ಸುದೀರ್ಘ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಿಲ್ಲಲಿ:
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು ಒಂದಷ್ಟು ಸಿದ್ಧಾಂತಗಳನ್ನು ಮಾನವೀಯ ಮೌಲ್ಯಗಳನ್ನು ಆಚಾರ-ವಿಚಾರಗಳನ್ನು ಇಟ್ಟುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಗೃಹ ಖಾತೆಯಂತಹ ಉನ್ನತ ಸ್ಥಾನದಲ್ಲಿದ್ದರೂ ಯಾವುದೇ ಅಹಂ ಮಾಡದೆ ಸಾಮಾನ್ಯ ಜನರಿಗೆ ಯಾವಾಗಲೂ ಲಭ್ಯವಾಗುವ ವ್ಯಕ್ತಿ ಆರಗ ಜ್ಞಾನೇಂದ್ರ ಅವರು ಅಂಥವರ ಹೆಸರಿಗೆ ಕಳಂಕ ತರುವ ಕೆಲಸವನ್ನು ನಿಲ್ಲಿಸಲಿ ರಾಜಕೀಯ ಮಾಡಲು ದಾಳಿ ಪ್ರತಿ ದಾಳಿಗಳನ್ನು ನಡೆಸಲು ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಯಾರು ಮುಗ್ಧರನ್ನು ಅಮಾಯಕರನ್ನು ಬಲಿ ಮಾಡುವುದನ್ನು ಬೇಡ ಎನ್ನುವುದು ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ಕಳಕಳಿಯ ಮನವಿ..
ರಘುರಾಜ್ ಹೆಚ್.ಕೆ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…