
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ದಿನಾಂಕ. 7 ಮೇ 2022 ರಂದು ನಡೆದ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ನಡೆದ ಐದನೇ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಎ ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ಭಾಗಗಳಲ್ಲಿ ಭಾಗವಹಿಸಿ 13 ಚಿನ್ನ , ಒಂಬತ್ತು ಬೆಳ್ಳಿ , ಎಂಟು ಕಂಚಿನ ಪದಕಗಳನ್ನು ಗೆದ್ದಿರುತ್ತಾರೆ. ಈ ಪದಕಗಳನ್ನು ಗೆದ್ದಿರುವ ಕ್ರೀಡಾಪಟುಗಳಿಗೆ ಎ ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ವಿಧಾನ ಪರಿಷತ್ತಿನ ಸದಸ್ಯರಾದ ಡಿ, ಎಸ್ ಅರುಣ್ , ಮಾಜಿ ಸಭಾಪತಿ ಎಂ ಶಂಕರಮೂರ್ತಿ , ಹತ್ತನೇ ವಾರ್ಡನ ಮಹಾನಗರಪಾಲಿಕೆಯ ಸದಸ್ಯರಾದ ಅಮರ್ ಪ್ರಕಾಶ್, ಹಾಗೂ ಅಧ್ಯಕ್ಷರಾದ ದಿನೇಶ್ ಶೇಟ್ ಕ್ರೀಡಾಪಟುಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸಿರುತ್ತಾರೆ.

ಪದಕ ಗೆದ್ದಿರುವ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಪತ್ರಿಕೆ ಅಭಿನಂದನೆಯನ್ನು ಸಲ್ಲಿಸುತ್ತದೆ.
ರಘುರಾಜ್ ಹೆಚ್. ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..