
ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಹಾಡುಹಗಲಿನಲ್ಲಿ ಬಾಗಿಲ ಬೀಗ ಮುರಿದು 4 ಲಕ್ಷ ರೂ ಹಣ 150 ಗ್ರಾಂ ಚಿನ್ನ ದೋಚಿ ಕಳ್ಳರು ಪರಾರಿಯಾಗಿದ್ದು.
ತಾಲ್ಲೂಕಿನ ಗಟ್ಟಿಕೊಪ್ಪಲು ಗ್ರಾಮದ ಮಹದೇವು ಎಂಬುವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇಂದು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ ಕಳ್ಳರು ಮನೆಯ ಬೀಗ ಮುರಿದು ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ನೋವು ಆಕ್ರಂದನ ಮುಗಿಲು ಮುಟ್ಟಿತ್ತು ಗ್ರಾಮದ ಜನರು ಮಹದೇವು ರವರ ಮನೆಗೆ ಜಮಾಯಿಸಿದರು .
ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಕೇಸು ದಾಖಲಿಸಿಕೊಂಡು ಆರೋಪಿಗಳ ಹುಡುಕಾಟದಲ್ಲಿದ್ದಾರೆ .
ಮಂಜು ಎಸ್ ಮಳವಳ್ಳಿ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…