ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿ ಶಾಮಕ ದಳದ ಶ್ರೀ ಮಹಾಬಲೇಶ್ವರ ಮರತ್ತೂರು ರವರಿಗೆ ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ..

ಸೊರಬ:- ಶಿವಮೊಗ್ಗ ಜಿಲ್ಲೆ ಸೊರಬ ಅತ್ಯಂತ ತುರ್ತು ಪರಿಸ್ಥಿತಿಯಾದ ಬೆಂಕಿ ಆಕಸ್ಮಿಕ, ಬಾವಿ, ನದಿ, ಹೊಳೆ, ಶರಾವತಿ ಹಿನ್ನೀರು ಆಕಸ್ಮಿಕವಾಗಿ ಬಿದ್ದ ಜನ, ಜಾನವರು, ಪ್ರಾಣಿಗಳು ತಮ್ಮ ಜೀವದ ಹಂಗು ತೊರೆದು ಸಂರಕ್ಷಣೆ ಮಾಡುತ್ತಿರುವ ಅಗ್ನಿ ಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಹಾಬಲೇಶ್ವರ ಮರತ್ತೂರು ರವರ ಕರ್ತವ್ಯ ಸೇವೆಯನ್ನೂ ಗುರುತಿಸಿದ ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀ ಮಹಾಬಲೇಶ್ವರ ಮರತ್ತೂರು ಮಾತನಾಡಿ ” ತುರ್ತು ಸೇವೆಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ನನ್ನ ಕರ್ತವ್ಯಕ್ಕೆ ಸಂದ ಗೌರವ. ಇನ್ನೂ ಮುಂದೂ ಕರ್ತವ್ಯದಿಂದ ಹೆಚ್ಚಿನ ಜವಾಬ್ದಾರಿಯೊಂದಿಗೆ ಸಮಾಜಕ್ಕೆ ಕರ್ತವ್ಯವನ್ನೂ ಸಲ್ಲಿಸುತ್ತೇನೆ. ಈ ಸನ್ಮಾನ ಬರೀ ನನಗೆ ಮಾತ್ರ ಸನ್ಮಾನ ಸಲ್ಲುತ್ತಿರುವುದು ಅಲ್ಲ ನನ್ನ ಅಗ್ನಿ ಶಾಮಕ ದಳದಲ್ಲಿ ಕರ್ತವ್ಯ ನಿರತ ತಂಡಕ್ಕೆ ಸಲ್ಲಿಸಿದ ಸನ್ಮಾನ ಎಂದು ನುಡಿದರು.
ರಾತ್ರಿ ಹೋಗಿದ್ದೂ ಬಹಿರ್ದಶೆಗೆ – ಬಿದ್ದಿದ್ದು ಬಾವಿಗೆ – ಕಾಪಾಡಿದ್ದೂ ಅಗ್ನಿ ಶಾಮಕ ದಳ ::

ಸೊರಬ :- ಸೊರಬ ತಾಲ್ಲೂಕು ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏನ್ ದೊಡ್ಡೇರಿ ಹನುಮಂತಪ್ಪ ತಂದೆ ಕಣ್ಣಪ್ಪ ಸುಮಾರು 48 ವರ್ಷ ರಾತ್ರಿ ಬಹಿದರ್ಶೆಗೆ ಹೋದಾಗ ಪಕ್ಕದ ಮನೆ ನಾಗರಾಜ ತಂದೆ ಹಾಲಪ್ಪ ಬಾವಿಯಲ್ಲಿ ಕಾಲು ಜಾರಿ 60 ಅಡಿ ಆಳದ ಬಾವಿ ಬಿದ್ದಿದ್ದು ಸೊರಬ ಅಗ್ನಿ ಶಾಮಕ ದಳ ಸತತವಾಗಿ 02 ತಾಸುಗಳ ಅವಿರತ ಶ್ರಮದಿಂದ ಬಾವಿಗೆ ಬಿದ್ದ ಹನುಮಂತಪ್ಪ ರವರನ್ನು ರಕ್ಷಣೆ ಮಾಡಿದ್ದಾರೆ. ಬಾವಿಯಲ್ಲಿ ಬಿದ್ದ ಗಾಯಳುಗಳನ್ನೂ ಸೊರಬ ಸರ್ಕಾರಿ ಆಸ್ಪತ್ರೆ ಸೂಕ್ತ ಚಿಕಿತ್ಸೆಗಾಗಿ ದಾಖಲಿಸಿದ್ದೂ ಹನುಮಂತಪ್ಪರವರ ಅರೋಗ್ಯವಾಗಿದ್ದಾರೆ.

ಬದುಕುಳಿದ ಗಾಯಳು ಹನುಮಂತ ರವರು ಅಗ್ನಿ ಶಾಮಕ ದಳದ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸ್ಥಳೀಯರೂ ಸಹ ಸತತವಾಗಿ 2 ಗಂಟೆಗಳ ಕಾಲ ಅವಿರತ ಶ್ರಮವಹಿಸಿ ಹನುಮಂತಪ್ಪ ರವರನ್ನು ಸಂರಕ್ಷಣೆ ಮಾಡಿದ ಅಗ್ನಿ ಶಾಮಕ ದಳದವರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಕಾರ್ಯಾಚರಣೆಯಲ್ಲಿ ಮಹಾಬಲೇಶ್ವರ ಅಗ್ನಿ ಶಾಮಕ ಠಾಣಾಧಿಕಾರಿ, ಚಾಲಕ ಪ್ರಶಾಂತ್ ಏನ್. ಪ್ರಮುಖ ಅಗ್ನಿ ಶಾಮಕರು ಮಂಜುನಾಥ ಎಂ. ಆರ್ ಹಾಗೂ ಅಗ್ನಿ ಶಾಮಕರು ಪ್ರದೀಪ್ ಏನ್. ಜಿ, ಪರುಶುರಾಮಪ್ಪ ಏನ್. ಎಚ್ ಎಂ ಪ್ರಸನ್ನ ಕುಮಾರ್, (ಬಾವಿಯಿಳಿದು ಸಾಹಸ ಮಾಡಿ ಬಾವಿಯಿಂದ ಮೇಲಕ್ಕೆತ್ತಿದ ಅಗ್ನಿ ಶಾಮಕರು ) ಅಗ್ನಿ ಶಾಮಕ ದಳ ಸೊರಬ ಹನುಮಂತಪ್ಪರವರನ್ನು ಸಂರಕ್ಷಣೆ ಮಾಡುವಲ್ಲಿ ಭಾಗವಹಿಸಿದ್ದರು
✒️ ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…