
ಮಂಗಳೂರು :- ಮಂಗಳೂರು ವಿಶ್ವ ವಿದ್ಯಾನಿಲಯದ ಉದ್ಯೋಗ ಮಾಹಿತಿ ಕೇಂದ್ರ ಮತ್ತು ನಿಯೋಜನಾ ಘಟಕಗಳು, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಂಗಳ ಗಂಗೋತ್ರಿಯ ವಿಶ್ವ ವಿದ್ಯಾನಿಲಯದಲ್ಲಿ ” ಮೇ 14 & 15 ರಂದು ಉದ್ಯೋಗ ಮೇಳ ಆಯೋಜನೆ ಮಾಡಿದೆ.
ಸುಮಾರು 40 ಕಂಪನಿಗಳು, 11000 ಕ್ಕೂ ಹೆಚ್ಚಿನ ಹುದ್ದೆಗಳ ನಿರೀಕ್ಷೆ!!
ಎರಡೂ ದಿನಗಳ ಉದ್ಯೋಗ ಮೇಳದಲ್ಲಿ ದೇಶದ ವಿವಿಧಡೇ ಸುಮಾರು 11000 ಹುದ್ದೆಗಳ ನೇಮಕಾತಿ ನೆಡೆಯುವ ಸಾಧ್ಯತೆಯಿದೆ.
UEIGB, UTPC, ಮಂಗಳೂರು ವಿಶ್ವ ವಿದ್ಯಾನಿಲಯದ ವಿವಿಧ ಘಟಕಗಳ ಸಂಯೋಜನೆ, ಸ್ವಾಯತ್ತ ಕಾಲೇಜುಗಳು ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಕ್ಯಾಂಪಸ್ ನ ಸುಮಾರು 10000 ಕ್ಕೂ ಮೀರಿದ ವಿದ್ಯಾರ್ಥಿಗಳು ಸಲ್ಲಿಸಿದ್ದಾರೆ
ಈ ಅರ್ಜಿಗಳನ್ನು ಮ್ಯಾಜಿಕ್ ಬಸ್ ಎಂಬ NGO ಗೆ ಹಸ್ತಾಂತರ ಮಾಡಲಾಗಿದೆ. ಈ ಸಂಸ್ಥೆ ಅರ್ಜಿಗಳನ್ನು ಪರಿಶೀಲನೆ ನೆಡೆಸಿ ಅರ್ಹರಿಗೆ ಟೋಕನ್ ಒದಗಿಸಿ ನೇಮಕಾತಿಗೆ ನೇರ ಸಂದರ್ಶನ ನೆಡೆಸಲಿದೆ.
ಕನಿಷ್ಠ ವೇತನ 10000/- ಗರಿಷ್ಟ ಮಿತಿಯಿಲ್ಲ::
ಸ್ಥಳದಲ್ಲೇ ನೋಂದಣಿಗೂ ಅವಕಾಶವಿದ್ದೂ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿ ನೇರ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಆಗಮಿಸುವಾಗ ಬಯೋಡೇಟಾ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, 10 ನೇ ತರಗತಿಯ ಅಂಕ ಪಟ್ಟಿ ಜೊತೆಗೆ ಗರಿಷ್ಠ ಅರ್ಹತೆಯ ವಿದ್ಯಾಭ್ಯಾಸದ ಅಂಕ ಪಟ್ಟಿಯನ್ನೂ ತರಬೇಕು. ಶೈಕ್ಷಣಿಕ ವರ್ಷದಲ್ಲಿ ಇರುವ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಮಾನವಿಕ, ನಿರ್ವಹಣೆ, ವಿಜ್ಞಾನ,ಮತ್ತು ಲೆಕ್ಚರ್ ಕಾಂಪ್ಲೆಕ್ಸ್ಗಳನ್ನೂ ಉದ್ಯೋಗ ಮೇಳಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಪ್ರತಿಯೊಂದು ವಿಭಾಗಕ್ಕೂ ಸಹಾಯವಾಣಿ ಕಲ್ಪಿಸಲಾಗಿದೆ::
ಉದ್ಯೋಗ ಮೇಳಕ್ಕೆ 80 ಕ್ಕೂ ಹೆಚ್ಚಿನ ಸ್ವಯಂ ಸೇವಕರನ್ನು ನಿಯೋಜನೆ ಮಾಡಿದ್ದೂ ಉದ್ಯೋಗದಾತ ಕಂಪನಿಗಳ ಸಿಬ್ಬಂದಿಯವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾಗಿಯಾದ ಪ್ರತಿಷ್ಟಿತ ಕಂಪನಿಗಳು ಇಂತಿವೆ ” ಅಪೋಲೋ ಫಾರ್ಮಸಿ, ಮುತ್ತುಟ್ಟು ಫೈನಾನ್ಸ್, ಮೆಡಿಪ್ಲಸ್, ಜಸ್ಟ್ ಡೈಲ್, ಬೈಜೂಸ್, ಆಕ್ಸಿಸ್ ಬ್ಯಾಂಕ್, ಕಾಂಚನ ಗ್ರೂಪ್ ಆಫ್ ಕಂಪನಿಸ್, ಹೋಂಡಾ, ಮ್ಯಾಟ್ರಿಕ್ ದಿಯಾ ಸಿಸ್ಟಮ್, ಎಚ್. ಡಿ. ಎಫ್. ಸಿ. ಬ್ಯಾಂಕ್ , ಮಾಂಡೋವಿ ಮೋಟಾರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ ಇನ್ನಿತರ 40 ಪ್ರತಿಷ್ಟಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಅರ್ಹ ಉದ್ಯೋಗಿಗಳಿಗೆ ಉದ್ಯೋಗ ನೀಡಲಿದೆ.
ಉಪಯುಕ್ತ ಮಾಹಿತಿಗಾಗಿ
ಶ್ರೀಮತಿ ಶಾರದಾ ಎಚ್ ಸೋಮಯಾಜಿ ಯು. ಟಿ. ಪಿ. ಸಿ. ಯೋಜನೆ – 63630 22303
✒️ ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305..