ತೀರ್ಥಹಳ್ಳಿ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು. ಪೊಲೀಸರು ಕಡಿವಾಣ ಹಾಕಲು ಪ್ರಯತ್ನಿಸಿದರು ಕೂಡ ಹಲವು ಕಡೆ ಕದ್ದುಮುಚ್ಚಿ ಅಂಗಡಿ ಮನೆಗಳಲ್ಲಿ ದಿನಸಿ ವ್ಯಾಪಾರಿಗಳು ಕೆಲವು ಕಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಕಡಿವಾಣ ಹಾಕಬೇಕಾದ ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ:
ತಾಲೂಕಿನಲ್ಲಿ ಅಕ್ರಮ ಮಧ್ಯಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ತಾಲೂಕಿನಲ್ಲಿ ಕಣ್ಮುಚ್ಚಿ ಕುಳಿತಿರುವುದು ದುರಂತವೇ ಸರಿ ಅಕ್ರಮ ಮದ್ಯ ಮಾರುವ ರಿಂದ ಹಾಗೂ ಮಾರಾಟಗಾರರಿಂದ ಲಂಚ ತೆಗೆದುಕೊಂಡು ಅವರಿಗೆ ಮದ್ಯ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಿರುವುದು ಈಗ ಬಹಿರಂಗವಾಗಿ ಉಳಿದಿಲ್ಲ.
ಮದ್ಯ ಮಾರಾಟಗಾರರು ಹಾಗೂ ಮಧ್ಯ ಮಾರುವವರು ನೇರವಾಗಿ ಅಬಕಾರಿ ಅಧಿಕಾರಿಗಳ ಲಂಚ ಬಾಕ ತನಕ್ಕೆ ಸಾಕ್ಷಿಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಪೊಲೀಸ್ ಇಲಾಖೆ ಸದೃಢವಾಗಿದ್ದು ಅಕ್ರಮ ಮದ್ಯ ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ:
ತೀರ್ಥಹಳ್ಳಿ ಪೊಲೀಸ್ ಇಲಾಖೆ ಅಕ್ರಮ ಮದ್ಯ ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು. ವಿವಿಧೆಡೆ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಾರೆ.
ಡಿವೈಎಸ್ಪಿ ಶಾಂತ್ ವೀರ್ ನೇತೃತ್ವದಲ್ಲಿ ತಂಡ ರಚನೆ::
1)ಡಿವೈಎಸ್ಪಿ ಶಾಂತ್ ವೀರ್ ಮತ್ತು ಅವರ ತಂಡ..
2) ತೀರ್ಥಹಳ್ಳಿ ಇನ್ಸ್ಪೆಕ್ಟರ್ ಮತ್ತು ಅವರ ನೇತೃತ್ವದ ತಂಡ..
3) ತೀರ್ಥಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಷ್ಮಾ ಮತ್ತು ಅವರ ತಂಡ..
4) ಮಾಲೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಮತ್ತು ಅವರ ತಂಡ:
5) ಆಗುಂಬೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ನಾಗೇಶ್ ಮತ್ತು ಅವರ ತಂಡ..
ಈ ಮೇಲ್ಕಂಡಂತೆ ಪೊಲೀಸ್ ತಂಡಗಳ ರಚನೆ ಮಾಡಿದ್ದು ಅಕ್ರಮ ಮಧ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೀರ್ಥಹಳ್ಳಿ ಪೊಲೀಸ್ ಪಡೆ ಕಾರ್ಯತಂತ್ರ ರೂಪಿಸಿದೆ.
ವಿವಿಧ ತಂಡಗಳು 30ಕ್ಕೂ ಅಧಿಕ ಕಡೆ ಅಕ್ರಮ ಮದ್ಯ ಮಾರಾಟಗಾರರ ಮಳಿಗೆಗಳ ಮೇಲೆ ದಾಳಿ ಮಾಡಿದ್ದು. ಆರು ಕೇಸ್ ದಾಖಲಾಗಿದೆ.
ಮಧ್ಯ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ ಶಾಂತ್ ವೀರ್::
ಅಕ್ರಮ ಮದ್ಯ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ ಶಾಂತ್ ವೀರ್ ಇನ್ನು ಮುಂದೆ ತಮ್ಮ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿವೆ. ವಿನಃ ಕಾರಣ ಕೇಸು ದಾಖಲಿಸಿಕೊಂಡು ಜೈಲಿಗೆ ಹೋಗಬೇಡಿ ಇನ್ನು ಮುಂದೆ ಪಟ್ಟಣ ಸೇರಿದಂತೆ ಪ್ರತಿ ಗ್ರಾಮಗಳಲ್ಲೂ ಪೊಲೀಸ್ ಪಡೆ ಜಾಗೃತವಾಗಿ ಕಾರ್ಯನಿರ್ವಹಿಸಲಿದೆ. ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವವರನ್ನು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಪತ್ರಿಕೆ ಮೂಲಕ ನೀಡಿದ್ದಾರೆ.
ಅಬಕಾರಿ ಅಧಿಕಾರಿಗಳೇ ಇನ್ನುಮುಂದಾದರೂ ಎಚ್ಚೆತ್ತುಕೊಳ್ಳಿ:
ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ತೀರ್ಥಹಳ್ಳಿಯ ಅಬಕಾರಿ ಇಲಾಖೆ ಇನ್ನುಮುಂದಾದರೂ ಎಚ್ಚೆತ್ತುಕೊಂಡು ತಮ್ಮ ಕಾರ್ಯನಿರ್ವಹಿಸಲಿ ತಮ್ಮ ಮೇಲೆ ಬಂದಿರುವ ಲಂಚದ ಆರೋಪಗಳಿಗೆ ಉತ್ತರ ನೀಡಲಿ.. ಅಕ್ರಮ ಮದ್ಯ ಮಾರಾಟ ಮುಕ್ತ ತಿರ್ಥಹಳ್ಳಿ ಯನ್ನಾಗಿ ಮಾಡಲಿ.. ಎನ್ನುವುದು ತೀರ್ಥಹಳ್ಳಿಯ ನೂಂದ ಮಹಿಳೆಯರ ಮಕ್ಕಳ ಮನವಿ ಮತ್ತು ಆಗ್ರಹ ..
ರಘುರಾಜ್ ಹೆಚ್.. ಕೆ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305..