ಮಳವಳ್ಳಿ: ತಾಲೂಕಿನ ವೀರಾಜಿಪುರ ಗ್ರಾಮದ ತೋಟದಲ್ಲಿ ಜೂಜಿನ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ರವರು ವೀರಾಜಿಪುರ ಗ್ರಾಮದ ತೋಟದಲ್ಲಿ ನಡೆಸಲಾಗಿದ್ದ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ರವರ ತಂಡ
ವೀರಾಜಿಪುರ ಗ್ರಾಮದ ತೋಟವೊಂದರಲ್ಲಿ
ಜೂಜು ಆಡಿಸುತ್ತಿದ್ದ ಇಬ್ಬರು ವ್ಯಕ್ತಿಗಳಾದ ರವಿ ,ಶಂಕರ ರವರನ್ನು ಬಂಧಿಸಿ ಜೂಜು ಆಡುತ್ತಿದ್ದ 6 ಮಂದಿಯನ್ನು ಬಂಧಿಸಿದ್ದಾರೆ. ಹಲವರು ಪರಾರಿಯಾಗಿದ್ದಾರೆ .
ಜೂಜಿನ ಪಣಕ್ಕೆ ಇಟ್ಟಿದ್ದ
1ಲಕ್ಷದ 7ಸಾವಿರದ 900 ರೂ ಹಣ ಹಾಗೂ 12
ಬೈಕ್ 4 ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಜು ಎಸ್ ಮಳವಳ್ಳಿ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…