
ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಅವರನ್ನು ರಾಜ್ಯ ಸರ್ಕಾರ ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ಜಾಗಕ್ಕೆ ನೂತನ ಕಮಿಷನರ್ ಆಗಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆಗಿದ್ದ ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿಲಾಗಿದೆ.
ಹಲವು ದಿನಗಳ ಅನುಮಾನಗಳಿಗೆ ತೆರೆಎಳೆದ ಸರ್ಕಾರ::
ಚಂದ್ರು ಪ್ರಕರಣದಲ್ಲಿ ಕಮಲ್ ಪಂತ್ ಹಾಗೂ ಗೃಹ ಸಚಿವರ ಹೇಳಿಕೆ ನಡುವೆ ವ್ಯತ್ಯಾಸ ಕಂಡು ಆ ಸಮಯದಲ್ಲಿಯೇ ಕಮಲ್ ಪಂತ್ ವರ್ಗಾವಣೆ ಆಗಬೇಕೆಂದು ಆಡಳಿತ ಪಕ್ಷ ಬಿಜೆಪಿಯಲ್ಲಿ ಹಲವು ನಾಯಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.
ಕೊನೆಗೂ ಕಮಿಷನರ್ ಬದಲಾವಣೆ ಮಾಡಿದ ಸರ್ಕಾರ:
ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ ನಂತರ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿ ಕೊಳ್ಳುತ್ತಿದ್ದರು. ಇದರಿಂದ ಸರ್ಕಾರಕ್ಕೂ ಹಾಗೂ ಕಮಿಷನರ್ ನಡುವೆ ಉತ್ತಮ ಸಂಬಂಧ ಇಲ್ಲಾ ಎನ್ನುವ ಅಂಶ ಬಹಿರಂಗಗೊಂಡಿತ್ತು. ಹಲವು ಸಂದರ್ಭಗಳಲ್ಲಿ ಕಮಿಷನರ್ ಹೇಳಿಕೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ಇದು ಕಮಿಷನರ್ ಬದಲಾವಣೆಗೆ ಪ್ರಮುಖ ಕಾರಣ ಎನ್ನುತ್ತವೆ ಕೆಲವು ಮೂಲಗಳು…
ಪ್ರತಾಪ್ ರೆಡ್ಡಿ ಸ್ಥಾನಕ್ಕೆ ಅಲೋಕ್ ಕುಮಾರ್:
ನೂತನ ಕಮಿಷನರ್ ಆಗಿ ಆಯ್ಕೆಯಾದ ಪ್ರತಾಪ್ ರೆಡ್ಡಿ ಸ್ಥಾನಕ್ಕೆ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿ ಎಸ್ಪಿ ಆಗಿ ಎಂಎಲ್ ಅನುಚೇತ್ ವರ್ಗಾವಣೆ:
ಸಿಐಡಿ ಎಸ್ಪಿ ಆಗಿ ಎಂಎಲ್ ಅನುಚೇತ್ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೆ ಪ್ರಮುಖ ಕಾರಣಗಳು::
ಇತ್ತೀಚಿನ ಕೆಲವು ಪ್ರಕರಣಗಳು, ಕಾನೂನು ಸುವ್ಯವಸ್ಥೆ, ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು, ಓಸಿ ಇಸ್ಪೀಟ್ ಅಂತಹ ಅಕ್ರಮ ದಂಧೆಗಳು ಪೋಲಿಸರ ಉಪಸ್ಥಿತಿಯಲ್ಲಿ ನಡೆಯುತ್ತಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ವನ್ನು ತಂದೊಡ್ಡಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಪ್ರಮುಖ ಕಾರಣವಾಗಿದೆ. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬೆಂಗಳೂರು ನಗರವನ್ನು ಅಪರಾಧ ಚಟುವಟಿಕೆಗಳಿಂದ ಅಕ್ರಮ ಚಟುವಟಿಕೆಗಳಿಂದ ಮುಕ್ತಿ ಮಾಡಲು ಅಪರಾಧಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲು ಈ ಆಂತರಿಕ ವರ್ಗಾವಣೆ ಎನ್ನಲಾಗುತ್ತಿದೆ.ಪತ್ರಿಕೆ ಕೂಡ ಹಿಂದೆ ಚಂದ್ರು ಪ್ರಕರಣ ವಾದಾಗ “ಕಮಲ್ ಪಂತ್ ವರ್ಗಾವಣೆ ಸಾಧ್ಯತೆ” ಎನ್ನುವ ಶಿರೋನಾಮೆಯಡಿಯಲ್ಲಿ ವರದಿ ಪ್ರಕಟಿಸಿತ್ತು ಅದು ಈಗ ನಿಜವಾಗಿದೆ…
ರಘುರಾಜ್ ಹೆಚ್ .ಕೆ …
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305…