
ತೀರ್ಥಹಳ್ಳಿ :ತಾಲ್ಲೂಕಿನ ಪ್ರತಿಷ್ಟಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ಇಲ್ಲಿ 2022-23ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಇಂದು ನಡೆಯಿತು.
2022-23ನೇ ಸಾಲಿನ ಕಲಿಕಾ ಚೇತರಿಕೆ ಕಲಿಕಾ ವರ್ಷವಾಗಿ ಸರ್ಕಾರ ಘೋಷಿಸಿರುವ ಹಿನ್ನಲೆಯಲ್ಲಿ ಆರಂಭದ ದಿನದಲ್ಲೇ
ವಿದ್ಯಾರ್ಥಿಗಳಿಗೆ ವಿಶಿಷ್ಟವಾಗಿ ಆರತಿಯನ್ನು ಬೆಳಗಿ ಪುಷ್ಪಾರ್ಚನೆ ಮಾಡುವುದರ ಮೂಲಕ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ತಂಡವು ಆತ್ಮೀಯವಾಗಿ ಬರಮಾಡಿಕೊಂಡರು. ಮುಖ್ಯ ಶಿಕ್ಷಕರಾದ ಶ್ರೀಮತಿ ಸುರೇಖಾ ಡಿ ಶೇಟ್ ರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು.
ಕಲಿಕಾ ಚೇತರಿಕೆ ವರ್ಷದ ಕಾರ್ಯಕ್ರಮದ ಉದ್ದೇಶದ ಬಗ್ಗೆ ಶಿಕ್ಷಕರಾದ ಶ್ರೀಮತಿ ಅಶ್ವಿನಿ ರವರು ಮಾತನಾಡಿ, ಶಾಲಾ ಪ್ರಾರಂಭೋತ್ಸವ ಹಾಗೂ ಸರ್ಕಾರದ ವಿವಿಧ ಶೈಕ್ಷಣಿಕ ಯೋಜನೆಯ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಹೊನ್ನೇತಾಳು ಗ್ರಾಮ ಪಂಚಾಯತಿ ಸದಸ್ಯರಾದ ರಾಘವೇಂದ್ರ ಅವರು ಮಾತನಾಡಿ ಶಾಲಾ ಅಭಿವೃದ್ಧಿ ಹಾಗೂ ದಾಖಲಾತಿ ಹೆಚ್ಚುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ, ನಮ್ಮ ಶಾಲೆ ಹಾಗೂ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
7ನೇ ತರಗತಿ ವಿದ್ಯಾರ್ಥಿಗಳು ಸವಿನೆನಪಿಗಾಗಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನ ಉಡುಗೊರೆಯಾಗಿ ನೀಡಿದರು. ಬೆಂಗಳೂರಿನ ಕ್ವೆಸ್ ಕಾರ್ಪ್ ಲಿ ಉದ್ಯೋಗಿಯಾದ ಮಧು ನರಸಿಂಹ ಅವರು LKG,UKG ಮಕ್ಕಳಿಗೆ ನೋಟ್ ಬುಕ್ ಮತ್ತು ಪಠ್ಯ ಪುಸ್ತಕವನ್ನು ಕೊಡುಗೆಯಾಗಿ ನೀಡಿರುವುದನ್ನು ಈ ದಿನ ವಿತರಿಸಲಾಯಿತು.
ಬೆಂಗಳೂರಿನ ಶ್ರೀಮತಿ ಅನ್ನಪೂರ್ಣ ಅವರು ಕೊಡುಗೆಯಾಗಿ ನೀಡಿದ ಬ್ಯಾಗನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬ್ಯಾಗ್ ಕೊಡುಗೆಯಾಗಿ ನೀಡಲು ಸಹಕರಿಸಿದ ಶ್ರೀಮತಿ ವಿದ್ಯಾಬಳ್ಳಕರ್ ಹಾಗು ಮಧುಸೂದನ್ ಶುಕ್ಲ ಅವರ ಸಹಕಾರವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪೋಷಕರು, ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಾಲಾ ಪ್ರಾರಂಭೋತ್ಸವಕ್ಕೆ ಮೆರುಗನ್ನು ನೀಡಿದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…