
ಸಾಗರ:- ರಾಷ್ಟ್ರೀಯ ಹೆದ್ದಾರಿ 369 ಇ ರಾಣಿಬೆನ್ನೂರು to ಬೈಂದೂರು ಮಾರ್ಗದ ಸಿಗಂದೂರು ಬಳಿಯ ಶಂಕಣ್ಣ ಶಾನಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪದೂರು ಸನಿಹ ಹೊಟ್ಟಲ ಜಡ್ಡು ಬಳಿಯ ಹೆದ್ದಾರಿ ಕಿರಿದಾದ ” U ” ತಿರುವು ಹೊಂದಿದ್ದು, ಈ ” U ” ತಿರುವು ಅತ್ಯಂತ ಅಪಾಯಕಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ” ನ್ಯೂಸ್ ವಾರಿಯರ್ಸ್ “ ಸುದ್ದಿಯನ್ನೂ ಬಿತ್ತರಿಸಿದ ಹಿನ್ನಲೆ,
ಈ ಸುದ್ದಿಯನ್ನು ಅಪರ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಹೊನ್ನಳ್ಳಿ ರವರು ವಾಟ್ಸಪ್ಪ್ ಸಂದೇಶವನ್ನೂ ವೀಕ್ಷಿಸಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ನಿಂಗಪ್ಪ ರವರು ಸಹಾಯಕ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶಿವಮೊಗ್ಗ ರವರಿಗೆ ಆದೇಶ ನೀಡಿದ ಪ್ರಕಾರ ಸ್ಥಳಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾಳೆಯಿಂದ ” ಕಾಮಗಾರಿ ಪ್ರಾರಂಭ ಮಾಡಿ ಸುಗಮ ಸುರಕ್ಷಿತ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟನೆ ನೀಡಿದ್ದಾರೆ ..
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…