
ಶಿವಮೊಗ್ಗ:- ಜಿಲ್ಲೆಯ ಬಹುದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮೇಗನ್ ಆಸ್ಪತ್ರೆಗೆ ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಂಗಳೂರು ,ಜಿಲ್ಲೆಗಳಿಂದಲೂ ಸಾಕಷ್ಟು ಜನ ರೋಗಿಗಳು ಬರುತ್ತಾರೆ .
ಸದಾ ಸುದ್ದಿಯಲ್ಲಿರುವ ಮೇಗನ್ ಆಸ್ಪತ್ರೆ:
ಸದಾ ಒಂದಿಲ್ಲೊಂದು ಸುದ್ದಿಗಳಿಂದ ಪ್ರಚಾರದಲ್ಲಿರುವ ಮೇಗನ್ ಆಸ್ಪತ್ರೆಯ ಅಧೀಕ್ಷಕರಾಗಿ ಡಾ/ಶ್ರೀಧರ್ ಬಂದಮೇಲೆ ಒಂದಷ್ಟು ಸುಧಾರಣೆಗೆ ಬಂದಿತ್ತು.
ಮೇಗನ್ ಆಸ್ಪತ್ರೆಯ ನಿರ್ದೇಶಕರು ಆಟಕ್ಕುಂಟು ಲೆಕ್ಕಕ್ಕಿಲ್ಲ:
ಮೇಗನ್ ಆಸ್ಪತ್ರೆಯ ನಿರ್ದೇಶಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅವರಿಗೂ ಹಾಗೂ ಅಧೀಕ್ಷಕರಿಗೆ ಸಮನ್ವಯದ ಕೊರತೆಯಿದೆ ಅಧೀಕ್ಷಕರಾದ ಶ್ರೀಧರ್ ಒಂದಷ್ಟು ಕಾಳಜಿಯಿಂದ ಲವಲವಿಕೆಯಿಂದ ಓಡಾಡಿಕೊಂಡು ಒತ್ತಡದ ನಡುವೆಯೂ ಕಾರ್ಯನಿರ್ವಹಿಸುತ್ತಾರೆ.ಆದರೆ ಆಸ್ಪತ್ರೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಕರು ಹಿಂದೇಟು ಹಾಕುತ್ತಾರೆ . ಆದ್ದರಿಂದ ವಿಶಾಲವಾದ ಆಸ್ಪತ್ರೆಯಾದರೂ ಸಮರ್ಪಕವಾದ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ.
ಆಸ್ಪತ್ರೆಯ ಶೌಚಲಯ ಗಬ್ಬೆದ್ದು ನಾರುತ್ತಿದೆ :
ಮೆಗ್ಗಾನ್ ಆಸ್ಪತ್ರೆಯ ಶೌಚಾಲಯವೂ ಗಬ್ಬೆದು ಹೋಗಿದ್ದೂ, ಕುಡುಕರು ಮಧ್ಯ ಬಾಟಲಿ & ಮಧ್ಯ ಪೌಚ್ಯಿಂದ ಕೂಡಿದ್ದೂ, ಗುಟ್ಕಾ ಉಗುಳಿರುವುದು ಸಭ್ಯರಿಗೆ ಶೌಚಾಲಯ ಬಳಸಲು ಅಸಭ್ಯವಾಗಿದ್ದು ಬಾಗಿಲಿಗೆ ಸರಿಯಾದ ಲಾಕ್ ವ್ಯವಸ್ಥೆಯಿಲ್ಲದೇ ಪರದಾಟ ನೆಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಿಮ್ಸ್ ಆಡಳಿತ ಮಂಡಳಿ ಮೆಗ್ಗಾನ್ ಆಸ್ಪತ್ರೆಯ ಶೌಚಾಲಯ ಶುಚಿತ್ವ ಕಾಪಾಡುವಂತೆ ರೋಗಿಗಳು ಹಾಗೂ ರೋಗಿಗಳ ಪೋಷಕರು ಕೋರಿದ್ದಾರೆ.
ರೋಗಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ :

ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ ಚೇರ್ ಗಳನ್ನು ಹಾಕಿಲ್ಲ ನೆಲದಲ್ಲಿ ಕೆಲವರು ಕುಳಿತುಕೊಂಡರೆ, ಕೆಲವರು ಅಲ್ಲೇ ಮಲಗಿರುತ್ತಾರೆ. ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳನ್ನು ಕಲ್ಪಿಸಿ… ನಿತ್ಯ ಗೋಳಾಡುವ ರೋಗಿಗಳ ಗೋಳಾಟವನ್ನು ತಪ್ಪಿಸಿ… ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರುಗಳು ಸರಿಯಾದ ಸಮಯಕ್ಕೆ ಲಭ್ಯ ಇರುವುದಿಲ್ಲ…ಆದರ ಬಗ್ಗೆ ಗಮನಹರಿಸಿ… ಎಲ್ಲಾ ಇದ್ದು ಏನೂ ಇಲ್ಲದಂತೆ ಆಗಿರುವ ಆಸ್ಪತ್ರೆಗೆ ಡಾಕ್ಟರ್ ಶ್ರೀಧರ್ ಬಂದ ಮೇಲೆ ಒಂದು ನಂಬಿಕೆ ಬಂದಿತ್ತು. ಅದು ಹಾಗೆ ಮುಂದುವರೆಯಲಿ ಎನ್ನುವ ವಿಶ್ವಾಸ ಪತ್ರಿಕೆಯದು….
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…