
ಶಿವಮೊಗ್ಗ :- ತಾಲ್ಲೂಕು ಮಟ್ಟದ ಪಂಚಾಯಿತಿ ಕ್ರೀಡೋತ್ಸವಕ್ಕೆ 5 ಸಾವಿರ ವೆಚ್ಚ ಭರಿಸುಂತೆ ಆದೇಶಿಸಿರುವುದು ಗ್ರಾಮ ಪಂಚಾಯಿತಿಗಳಿಗೆ ಅನವಶ್ಯಕ ಹೊರೆ.
ಪ್ರಜಾಪ್ರಭುತ್ವದ ಅಶಯಕ್ಕೆ ವಿರುದ್ಧವಾಗಿ ಶ್ರೀಮತಿ ವೈಶಾಲಿ ಜಿಲ್ಲಾಪಂಚಾಯತ್ ಶಿವಮೊಗ್ಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈಚೆಗೆ ಆದೇಶಗಳನ್ನು ನೀಡುತ್ತಿರುವುದು ಶಿವಮೊಗ್ಗ ಪ್ರಜ್ಞಾವಂತರು ಈ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಸುಣ್ಣ – ಬಣ್ಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ವರ್ಗ – 1 ಅನುದಾನ ಬಳಕೆಗೆ 5000/- ತೆರಿಗೆ ಹಣ ವಿನಿಯೋಗ ಮಾಡೋದು ಬಿಟ್ಟು ತಾಲ್ಲೂಕು ಮಟ್ಟದ ಕ್ರೀಡೋತ್ಸವಕ್ಕೆ ವಿನಿಯೋಗಕ್ಕೆ ಆದೇಶ ನೀಡುವುದು ಎಷ್ಟು ಸರಿ……..?
ಗ್ರಾಮ ಪಂಚಾಯಿತಿಗಳ ಜ್ವಲಂತ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ರಸ್ತೆ, ಮೋರಿ, ಚರಂಡಿ, ಬೀದಿದೀಪ, ಕೆರೆ ಅಭಿವೃದ್ಧಿ, ಸರ್ಕಾರಿ ಶಾಲೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಹಣ ಇಲ್ಲವಾಗಿದೆ ಎಂದು ಜ್ವಾಲ0ತ ಸಮಸ್ಯೆ ಮೂಲಭೂತ ಸಮಸ್ಯೆಗಳತ್ತ ಬಗೆಹರಿಸಲು ವಿಫಲರಾದ ಶ್ರೀಮತಿ ವೈಶಾಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.
ಜಲಜೀವನ್ ಮಿಷನ್ ಸೋಲಾರ್ ಲೈಟ್ ಕಸ ಸಂಗ್ರಹಣೆ ಉತ್ತಮ ಯೋಜನೆಗಳು.
ಅವನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲಿಲ್ಲ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ, ಪರಿಣಾಮವಾಗಿ ಜನರ ಟೀಕೆಗೆ ಗುರಿಯಾಗುವಂತೆ ಆಗಿದೆ.
” ಯಾರದ್ದೋ ದುಡ್ಡು ಯಲಮ್ಮನ ಜಾತ್ರೆಯಾಗಿದೆ ” ತುಘಲಕ್ ಆಡಳಿತ ನಡೆಯತ್ತ ಶ್ರೀಮತಿ ವೈಶಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ ಎಂದು ಗಂಭೀರ ಆರೋಪದತ್ತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…