
ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲ್ಲಿ ನೆಡೆಯುತ್ತಿರುವ ಬಾಕ್ಸ್ ಚರಂಡಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ನೆಡೆಯುತ್ತಿದ್ದೂ, ಸಿಮೆಂಟ್ ಕಾಮಗಾರಿಗಳಿಗೆ ನೀರು ಹಾಕ್ಕುತ್ತಾ ಕ್ಯೂರಿಂಗ್ ಮಾಡಬೇಕಾದುದು ಅತೀ ಅವಶ್ಯಕತೆ ಇರುತ್ತದೆ ಕಾರಣ ನೀರು ಕ್ಯೂರಿಂಗ್ ದಿಂದ ಸಿಮೆಂಟ್ ಕಾಮಗಾರಿಗಳು ಸಾಕಷ್ಟು ಬಲಿಷ್ಠ ಹಾಗೂ ಉತ್ತಮ ಗುಣಮಟ್ಟ ಕಾಪಾಡಲು ಸಹಕಾರಿಯಾಗುತ್ತದೆ. ಇದರಿಂದ ಸಿಮೆಂಟ್ ಕಾಮಗಾರಿಗಳ ಆಯುಸ್ಸು ಸುಮಾರು ವರ್ಷಗಳ ಕಾಲ ಉಳಿಯುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ ಸಾಗರದಲ್ಲಿ ನೆಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕ ಚರಂಡಿ ಕಾಮಗಾರಿಗಳು ಕ್ಯೂರಿಂಗ್ ಮಾಡದೇ ಕಾಮಗಾರಿ ಅನುಷ್ಠಾನ ಮಾಡುತ್ತಿದ್ದರೂ ಕುಂಭ ಕರ್ಣ ನಿದ್ರೆಗೆ ಜಾರಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು.
ಈ ಬಗ್ಗೆ ಸಾಗರದ ಪ್ರಖ್ಯಾತ ಮಾನ್ಯ ನ್ಯಾಯವಾದಿಗಳಾದ ಕೆ. ವಿ. ಪ್ರವೀಣ್ ರವರು ಸಾಗರ ನಗರದ ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕ ಚರಂಡಿ ಕಾಮಗಾರಿಯ ಕಳಪೆ ಕಾಮಗಾರಿಯ ಕ್ಯೂರಿಂಗ್ ಮಾಡದೇ ಕಾಮಗಾರಿ ಅನುಷ್ಠಾನ ವಿರುದ್ಧ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರಿಗೆ ಟ್ವೀಟ್ ಮುಖಾಂತರ ದೂರು ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕ ತೆರಿಗೆ ಹಣದ ಅನುದಾನವನ್ನೂ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರಿಗಳು ಈ ರೀತಿ ಅನುದಾನ ದುರ್ಬಳಕೆ ತೊಡಗಿರುವವರ ವಿರುದ್ಧ ಮಾನ್ಯ ಸಂಸದರಾದ ಬಿ. ವೈ. ರಾಘವೇಂದ್ರ ರವರು , ಸ್ಥಳೀಯ ಶಾಸಕರಾದ ಹರತಾಳು ಹಾಲಪ್ಪ ರವರು, ಕುಮಾರ್ ಬಂಗಾರಪ್ಪ ರವರು ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..