
ದಾವಣಗೆರೆ: ಜಿಲ್ಲಾ ಅಬಕಾರಿ ಅಧಿಕಾರಿಗಳು ನೀಡುವ ಎಚ್ಚರಿಕೆ ಮೀರಿ ಪದೇ ಪದೇ ಸನ್ನದುದಾರರು ಸನ್ನದು ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ದಾವಣಗೆರೆ ಜಿಲ್ಲೆಯ ಎರಡು ಮದ್ಯದಂಗಡಿಗಳ ಪರವಾನಿಗೆಯನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹೊನ್ನಾಳಿ ಪಟ್ಟಣದ ಹೆಚ್.ಇ.ಮೈನುದ್ದೀನ್ ಪಾಷ ಇವರ ಒಡೆತನದ ಸುಗಂದಾ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ (ಬೈಪಾಸ್ ಬಳಿಯ) ಕೃಷ್ಣ ಸಾ ಭೂತೆ ಒಡೆತನದ ರಾಘವೇಂದ್ರ ಬಾರ್ ಅಂಡ್ ರೆಸ್ಟೋರೆಂಟ್ ಅಮಾನತ್ತಾದ ಮದ್ಯದ ಅಂಗಡಿಗಳು.
ಪ್ರಸ್ತುತ ಅಬಕಾರಿ ವರ್ಷದಲ್ಲಿ ಪರವಾನಿಗೆ ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ಮೇಲಿನ ಪ್ರತಿ ಬಾರ್ ಮೇಲೆ ಮೂರು ಪ್ರಕರಣಗಳು ದಾಖಲಾಗಿರುತ್ತವೆ. ಆಯಾ ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ದಾವಣಗೆರೆ ಇವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳು, ದಾವಣಗೆರೆ ಇವರು ಸದರಿ ಬಾರ್ ಗಳನ್ನು ಮುಂದಿನ ಆದೇಶದವರೆಗೆ ಅಮಾನತ್ತುಪಡಿಸಿ ಆದೇಶ ಹೊರಡಿಸಿದ್ದಾರೆ.
ಈ ಎರಡು ಮದ್ಯದ ಅಂಗಡಿಗಳನ್ನು ತಾಲೂಕು ಅಬಕಾರಿ ಅಧಿಕಾರಿಗಳು ಸ್ತಗಿತಗೊಳಿಸಿದ್ದಾರೆ.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: ,9449553305..