
ತಮಿಳುನಾಡು:- ತಮಿಳುನಾಡು ರಾಜ್ಯದ ತಿರುನೆಲ್ವೇಲಿ ಜಿಲ್ಲೆಯಲ್ಲಿ ಕಾರಿನೊಳಗೆ ಮುದ್ದಾದ ಕಂದಮ್ಮಗಳು ಆಟವಾಡುತ್ತಿದ್ದ ವೇಳೆಯಲ್ಲಿ ಅಕಸ್ಮಾತಾಗಿ ಕಾರು ಡೋರ್ ಲಾಕ್ ಆದ ಪರಿಣಾಮವಾಗಿ ಕಾರಿನೊಳಗಿದ್ದ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನೆಡೆದಿದೆ.
ನೀತಿಶಾ (7), ಕಬಿಕಾಂತ್ (4), ಹಾಗೂ ನೀತಿಶ್ (9) ಮೃತಪಟ್ಟ ದುರ್ದೈವಿ ಕಂದಮ್ಮ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಪನಂಗುಡಿ ಸಮೀಪದ ಲೆಪ್ಪಾಯಿ ಅಪಾರ್ಟ್ಮೆಂಟ್ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಮುದ್ದಾದ ಮಕ್ಕಳು ಕಾರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ದುರಾದೃಷ್ಟವೆಂಬ0ತೆ ಇದ್ದಕ್ಕಿದ್ದಂತೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಮಕ್ಕಳು ಉಸಿರಾಟ ಸಮಸ್ಯೆ ಎದುರಿಸಿ ಕಾರಿನ ಲಾಕ್ ತೆರೆಯಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನೆಡೆಸುತ್ತಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305..