
ತೀರ್ಥಹಳ್ಳಿ: ತಾಲೂಕಿನ ಮಾಲೂರು ಸಮೀಪ ಸಿಕೆ ರೋಡಿನಲ್ಲಿ ಮೀನು ಹಿಡಿಯಲು ತೆರಳುತ್ತಿದ್ದ ನಾಲ್ಕು ಜನ ಯುವಕರ ತಂಡದ ಮೇಲೆ ನಿಹಲ್ ಕೋಬ್ರಾ ಮತ್ತು ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಹಲ್ಲೆ ನಡೆಸಿರುವ ಆರೋಪಿಗಳು ತೀರ್ಥಹಳ್ಳಿಯ ರೌಡಿಶೀಟರ್ ನಿಹಾಲ್ ಕೋಬ್ರಾ ಹಾಗೂ ಹಣಗೆರೆಕಟ್ಟೆಯ ಕೆಲವು ಈತನ ಸಹಚರರು ಸೇರಿ ಕೊಂಡು ಹಲ್ಲೆ ನಡೆಸಿದ್ದು.
ನಾಲ್ಕು ಜನ ಮೀನು ಹಿಡಿಯುವ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದು ಅದರಲ್ಲಿ ಒಬ್ಬನು ತಪ್ಪಿಸಿಕೊಂಡಿದ್ದು ಮೂರು ಜನರಿಗೆ ಮಾರಣಾಂತಿಕ ಹಲ್ಲೆ ಗಳಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದ್ದು.
ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟದಲ್ಲಿದ್ದಾರೆ.
ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಹಲ್ಲೆಗೊಳಗಾದ ವ್ಯಕ್ತಿಗಳ ಮಾಹಿತಿ ಪ್ರಕಾರ ಸುಮ್ಮನೆ ಇದ್ದ ನಮ್ಮ ಜೊತೆ ಗಲಾಟೆ ಮಾಡಿದರು ನಂತರ ರಾಜಿ ಆಯ್ತು ಆಮೇಲೆ ಮತ್ತೆ ನಮ್ಮನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನುತ್ತಾರೆ.
ಪೊಲೀಸರ ಬಂಧನದ ನಂತರ ನಿಜವಾದ ಸತ್ಯ ಹೊರಬೀಳಬೇಕಾಗಿದೆ.
ರಘುರಾಜ್ ಹೆಚ್.ಕೆ..9449553305…