ಹಿರೇನೆಲ್ಲೂರು :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಹಿರೇನೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲ್ಚಾವಣಿ ಬೀಳುವ ಸ್ಥಿತಿಗೆ ತಲುಪಿದ್ದೂ, ಈ ಬಗ್ಗೆ ಕೂಡಲೇ ಸರಿಪಡಿಸಿಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ , ಸ್ಥಳೀಯ ಶಾಸಕರಾದ ಕುಮಾರ್ ಬಂಗಾರಪ್ಪ ರವರಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಹಾಗೂ ಸ್ಥಳೀಯರು ಶಾಲಾ ಮೇಲ್ಚಾವಣಿ ದುರಸ್ಥಿ ಮಾಡಿಕೊಡುವಂತೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸಾರ್ವಜನಿಕರ ದೂರಿನ ಮೇರೆಗೆ ಮಣಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಾನೊಬ್ಬ ಸಾಮಾಜಿಕ ಹೋರಾಟಗಾರನಾದ ಶಾಲೆಗೆ ಭೇಟಿ ಕೊಟ್ಟಾಗ ಸಾರ್ವಜನಿಕರ ದೂರು ಸತ್ಯವಾಗಿದ್ದೂ, ಈ ಶಾಲಾ ಮೇಲ್ಚಾವಣಿ ಸಂಪೂರ್ಣ ಶಿಥಿಲಾವಸ್ಥೆ ಕೂಡಿದ್ದೂ, ಶಾಲಾ ಮಕ್ಕಳು ಹಾಗೂ ಭೋಧಕರು ಪ್ರಾಣಭಯದಿಂದ ಇರುವುದು ಕಂಡುಬಂದಿರುತ್ತದೆ.
ಮಣಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೇಲ್ಚಾವಣಿ ದುರಸ್ಥಿಗೆ ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ಸಜ್ಜನ, ಪಾರದರ್ಶಕ ಆಡಳಿತಗಾರರಾದ ಬಿ. ಸಿ. ನಾಗೇಶ್ ರವರು ತಮ್ಮ ವಿಶೇಷ ಅನುದಾನದಲ್ಲಿ ಈ ಸರ್ಕಾರಿ ಶಾಲಾ ಮೇಲ್ಚಾವಣಿ ದುರಸ್ಥಿಗಾಗಿ ಅನುದಾನ ಮಂಜೂರು ಮಾಡುವಂತೆ ಮಣಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಾಲಾ ಪೋಷಕರು, ಸ್ಥಳೀಯ ತಮ್ಮಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್. ಕೆ…9449553305…