
ಸೊರಬ :- ಶಿವಮೊಗ್ಗ ಜಿಲ್ಲಾ ಸೊರಬ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಪ್ರಯಾಣಿಕರ ತಂಗುದಾಣ ಅವ್ಯವಸ್ಥೆ ಕಂಡು ಎಂತಹವನಿಗೂ ಇದೇನಾ ಸೊರಬ ತಾಲ್ಲೂಕು ಆಡಳಿತ ಅವ್ಯವಸ್ಥೆ ಎಂದು ಪ್ರಜ್ಞಾವಂತರು ಯೋಚನೆ ಮಾಡುವಂತಾಗಿದೆ.
ಸಾರ್ವಜನಿಕ ತೆರಿಗೆ ಹಣದಲ್ಲಿ ಅದರಲ್ಲೂ ಸರ್ಕಾರಿ ಆಸ್ಪತ್ರೆಗೆ ದೂರ ದೂರದಿಂದ ಆಗಮಿಸುವ ರೋಗಿಗಳು ಹಾಗೂ ರೋಗಿಗಳ ಜೊತೆಗೆ ಆಗಮಿಸುವ ಪೋಷಕರುಗಳಿಗೆ ಸದುಪಯೋಗವಗಲೆಂದು ಪ್ರಯಾಣಿಕರ ತಂಗುದಾಣವಿದ್ದೂ ಪ್ರಯಾಣಿಕರ ತಂಗುದಾಣ ಸುತ್ತಲೂ ಗಿಡ ಗಂಟಿಗಳು ಅವ್ಯಾಹತವಾಗಿ ಬೆಳೆದಿದ್ದರೂ ಈ ಪ್ರಯಾಣಿಕರ ತಂಗುದಾಣ ” ಆಟಕ್ಕುಂಟು ಲೆಕ್ಕಕ್ಕಿಲ್ಲ ” ಎಂಬಾತಾಗಿದೆ.
ಸೊರಬ ವಿಧಾನಸಭಾ ಕ್ಷೇತ್ರದ ಶಾಸರಾದ ಕುಮಾರ್ ಬಂಗಾರಪ್ಪ ರವರ ಶಾಸಕರ ಕಚೇರಿಯಿಂದ ಅನತಿ ದೂರದಲ್ಲೇ ಅಷ್ಟೇ ಅಲ್ಲದೇ ಮುಖ್ಯ ರಸ್ತೆಯ ಬದಿಯಲ್ಲೇ ಈ ಪ್ರಯಾಣಿಕರ ತಂಗುದಾಣವಿರುದು ಶಾಸಕರ ಗಮನಕ್ಕೆ ಬಾರದೇ ಎಂಬುದೇ ಯಕ್ಷ ಪ್ರೆಶ್ನೆಯಾಗಿಯೇ ಉಳಿದಿದೆ.
ಇನ್ನೂ ಮುಂದಾದರೂ ಪ್ರಯಾಣಿಕರ ತಂಗುದಾಣ ಸುಸ್ಥಿತಿಯತ್ತ ಕ್ರಮಕ್ಕೆ ಶಾಸಕರು ಗಮನಹರಿಸುವರೋ ಕಾದು ನೋಡೋಣಾ .
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್. ಕೆ…9449553305…