
ಕಾರ್ಗಲ್ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ದಿನಾಂಕ 05/06/2022 ರಂದು ಓರ್ವ ಮಹಿಳೆ ಹಾಗೂ ಬಾಲಕಿ ನಾಪತ್ತೆ ದೂರು ಪ್ರಕರಣ ದಾಖಲಾಗಿತ್ತು.
ನಾಪತ್ತೆ ದೂರು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡಲೇ ಬೇಕು ಎಂಬ ಹಠದಿಂದ ಸವಾಲಾಗಿ ಸ್ವೀಕರಿಸಿದ ಸಾಗರ DYSP ರವರಾದ ರೋಹನ್ ಜಗದೀಶ್ ( ASP ) ರವರು ಕೂಡಲೇ ಕಾರ್ಯಪ್ರವತ್ತರಾಗಿ ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಶೀಘ್ರದಲ್ಲಿಯೇ ನಾಪತ್ತೆ ಪ್ರಕರಣ ಭೇದಿಸುವಂತೆ ಸಲಹೆ ಸೂಚನೆ ನೀಡಿದರು.
ಕೂಡಲೇ ನಾಪತ್ತೆ ಪ್ರಕರಣ ಭೇಧಿಸಲು ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರು ಪೊಲೀಸ್ ಸಹ ಸಿಬ್ಬಂದಿಗಳ ತಂಡದೊಂದಿಗೆ ಪತ್ತೆಕಾರ್ಯಕ್ಕೆ ಅಣಿಯಾದರು.
ಕೇವಲ 07 ದಿನಗಳಲ್ಲಿ ನಾಪತ್ತೆ ಪ್ರಕರಣ ಭೇಧಿಸಿ ನಾಪತ್ತೆ ಪ್ರಕರಣ ಸುಖಾ0ತ್ಯಕ್ಕೆ ಬ್ಯಾಕೋಡು ಸುತ್ತಮುತ್ತಲಿನ ಜನತೆ ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಪೊಲೀಸ್ ಇಲಾಖೆಯ ಪೊಲೀಸ್ ಕರ್ತವ್ಯದ ಮೇಲೆ ನಂಬಿಕೆ ಇಮ್ಮಡಿಗೊಳಿಸಿರುವ ಕುರಿತು ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಾಗರ DYSP (ASP ) ಶ್ರೀ ರೋಹನ್ ಜಗದೀಶ್ ” ನಾಪತ್ತೆ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ತಂಡ ರಚನೆ ಮಾಡಿ ನಾಪತ್ತೆ ಪ್ರಕರಣವನ್ನೂ ಪತ್ತೆಗಾಗಿ ಸೂಕ್ತ ಮಾರ್ಗದರ್ಶನ ನೀಡಿದೇವು. ಈ ನಾಪತ್ತೆ ಪ್ರಕರಣವನ್ನೂ ಕೇವಲ 07 ದಿನಗಳಲ್ಲಿ ಪತ್ತೆ ಹಚ್ಚಿ ಸುಖಾ0ತ್ಯಕ್ಕೆ ಕಾರಣರಾದ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….