
ತೀರ್ಥಹಳ್ಳಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ// .ಬಿ ಎಂ . ಲಕ್ಷ್ಮಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ಅವರ ವ್ಯವಸ್ಥಿತ ತಂಡದಿಂದ ಹಗಲು ರಾತ್ರಿ ವಿಶೇಷ ಪ್ರಯತ್ನದಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ತೀರ್ಥಹಳ್ಳಿ :– ಪತ್ರಿಕೆ ಕಳೆದವಾರ “ಮಲೆನಾಡಿನಲ್ಲಿ ಚಿಗುರುತ್ತಿರುವ ನಿಹಾಲ್ ಕೋಬ್ರಾ ಎಂಬ ವಿಷಜಂತು” ಎನ್ನುವ ಶೀರ್ಷಿಕೆಯಡಿಯಲ್ಲಿ ಸುದ್ದಿ ಪ್ರಕಟಿಸಿತ್ತು.
ಪತ್ರಿಕೆಯಲ್ಲಿ ನಿಹಾಲ್ ಕೋಬ್ರಾ ಅಂದರೆ ಯಾರು ಆತನ ಹಿನ್ನೆಲೆ ಏನು? ಮಾಡಿರುವ ಅಪರಾಧ ಪ್ರಕರಣಗಳು ಎಷ್ಟು? ದಾಖಲಾಗಿರುವ ಕೇಸ್ ಗಳು ಎಷ್ಟು? ದಾಖಲಾಗದೆ ಉಳಿದ ಕೇಸ್ ಗಳು ಎಷ್ಟು? ಎನ್ನುವ ಸಂಪೂರ್ಣ ವಿವರವನ್ನು ಪತ್ರಿಕೆಯ ನೀಡಿತ್ತು.
ತೀರ್ಥಹಳ್ಳಿ ಪೊಲೀಸ್ ಇಲಾಖೆಯ ಯಶಸ್ವಿ ಕಾರ್ಯಾಚರಣೆ:
ತೀರ್ಥಹಳ್ಳಿಯ ಮಂಡಗದ್ದೆ ಸಮೀಪ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತೀರ್ಥಹಳ್ಳಿ ಪೊಲೀಸ್ ಇಲಾಖೆ ಡಿವೈಎಸ್ಪಿ ಶಾಂತ್ ವೀರ್ ನೇತೃತ್ವದಲ್ಲಿ ದಕ್ಷ ಅಧಿಕಾರಿಗಳಾದ ಆಗುಂಬೆ ಠಾಣೆಯ ಶಿವಕುಮಾರ್, ಮಾಳೂರು ಠಾಣೆಯ ನವೀನ್ ಮಠಪತಿ, ಮಾಲೂರು ಮತ್ತು ಆಗುಂಬೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್, ತೀರ್ಥಹಳ್ಳಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಅವರನ್ನು ಒಳಗೊಂಡ ತಂಡ ಶಿವಮೊಗ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ//ಲಕ್ಷ್ಮಿಪ್ರಸಾದ್ ಅವರ ಆದೇಶದ ಮೇರೆಗೆ ಹಗಲು-ರಾತ್ರಿಯೆನ್ನದೆ ಕಾರ್ಯಾಚರಣೆಗೆ ಇಳಿದರು.
ಘಟನೆ ನಡೆದ ಎರಡು ದಿನದಲ್ಲಿ ಮೂರು ಜನರ ಬಂಧನ:
ಘಟನೆ ನಡೆದ ಎರಡೇ ದಿನದಲ್ಲಿ ಮೂರು ಜನರನ್ನು ಬಂಧನ ಮಾಡಿದ ಈ ತಂಡ ಪ್ರಮುಖ ಆರೋಪಿಗಳಾದ ನಿಯಲ್ ಕೋಬ್ರಾ, ಸಾಹುಲ್, ಸಜ್ಜದ್, ರನ್ನು ಬಂಧಿಸಲು ಪಣತೊಟ್ಟರು ಇದರಲ್ಲಿ ನಿಹಾಲ್ ಕೋಬ್ರಾ ತೀರ್ಥಹಳ್ಳಿಯ ನಿವಾಸಿಯಾಗಿದ್ದಾರೆ. ಸಾಹುಲ್, ಸಜ್ಜದ್ ಹಣಿಗೇರಿ ಕಟ್ಟೆ ನಿವಾಸಿಗಳಾಗಿದ್ದಾರೆ.
ಪ್ರಮುಖ ಆರೋಪಿಗಳ ಹುಡುಕಾಟಕ್ಕೆ ಪಣತೊಟ್ಟ ತೀರ್ಥಹಳ್ಳಿ ಪೊಲೀಸ್ ತಂಡ:
ನೆಲ್ಲಿ ಸರ ಕ್ಯಾಂಪಿನ ಮೀನು ಹಿಡಿಯುವ ಮೂವರು ಹುಡುಗರ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಉಳಿದ ಆರೋಪಿಗಳ ಶೋಧ ಕಾರ್ಯಕ್ಕೆ ತೊಡಗಿದರು. ತೀವ್ರ ಹುಡುಕಾಟದಲ್ಲಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಿಹಾಲ್ ಕೋಬ್ರಾ ತಂಡ ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದರು. ಆದರೆ ಬೆನ್ನು ಬಿಡದ ಪೊಲೀಸ್ ತಂಡ ಕೊನೆಗೂ ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೇಗೆ ನಡೆಯಿತು ಗೊತ್ತಾ? ನಿಹಾಲ್ ಕೋಬ್ರಾ ಎಂಬ ವಿಷಜಂತು ತಂಡದ ಬಂಧನ:
ತೀವ್ರ ಹುಡುಕಾಟದಲ್ಲಿದ್ದ ಪೊಲೀಸ್ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಿಹಾಲ್ ಕೋಬ್ರಾ ತಂಡ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ದಿನಕ್ಕೊಂದು ಸ್ಥಳಗಳನ್ನು ಬದಲಿಸುತ್ತಿದ್ದರು. ಕೊನೆಗೂ ತಮ್ಮ ಪೊಲೀಸ್ ಇಲಾಖೆಯ ಟ್ರಿಕ್ಸ್ ಗಳನ್ನು ಬಳಸಿ ಬೆಂಗಳೂರಿನಲ್ಲಿ ಇದ್ದಾರೆ ಎನ್ನುವ ಮಾಹಿತಿಯನ್ನು ಪಡೆದುಕೊಂಡರು. ಆದರೆ ಪೊಲೀಸರಿಗೆ ನಿರಾಸೆ ಕಾದಿತ್ತು ಬೆಂಗಳೂರಿನಿಂದ ತಪ್ಪಿಸಿಕೊಂಡು ಭದ್ರಾವತಿಯ ಹತ್ತಿರ ಒಂದು ಮುಸ್ಲಿಂ ಕ್ಯಾಂಪಿಗೆ ಬರುವ ಯೋಜನೆಯನ್ನು ಆರೋಪಿಗಳು ರೂಪಿಸಿದ್ದರು. ಮುಸ್ಲಿಂ ಕ್ಯಾಂಪಿಗೆ ಇವರು ಸೇರಿಕೊಂಡಿದ್ದಾರೆ ಇನ್ನು ಸುಮಾರು ಒಂದು ವರ್ಷವಾದರೂ ಇವರನ್ನು ಹಿಡಿಯಲು ಕಷ್ಟವಾಗುತ್ತಿತ್ತು.ನಂತರ ಹೊರಡಲು ತಯಾರಿ ಕೂಡ ನಡೆಸಿದರು ಆದರೆ ಮಾರ್ಗ ಮಧ್ಯದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ವ್ಯವಸ್ಥಿತವಾಗಿ ಸಂಚು ರೂಪಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಬಂಧನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಲಾಖೆಯ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳಾದ ಡಾ/ ಲಕ್ಷ್ಮೀಪ್ರಸಾದ್ ಮತ್ತು ತೀರ್ಥಹಳ್ಳಿ ಪ್ರಜ್ಞಾವಂತ ನಾಗರಿಕರು :
ಆರೋಪಿಗಳನ್ನು ಬಂಧಿಸಿ “ಐಪಿಸಿ ಸೆಕ್ಷನ್ 307” ಕೊಲೆಗೆ ಯತ್ನ, ಹಲ್ಲೆಗೊಳಗಾದ ನೆಲ್ಲಿಸರ ಕ್ಯಾಂಪಿನ ಮೀನು ಹಿಡಿಯುವ ಹುಡುಗರು ಎಸ್ಸಿ ಜನಾಂಗಕ್ಕೆ ಸೇರಿದವರಾಗಿದ್ದರಿಂದ” ಅಟ್ರಾಸಿಟಿ ಕೇಸ್“, ದಾಖಲಿಸಲಾಗಿದೆ.
ಶಿವಮೊಗ್ಗ ದ ಮೇಗನ್ ಆಸ್ಪತ್ರೆಗೆ ಆರೋಪಿಗಳು ಶಿಫ್ಟ್ ಗಾಂಜಾ ಕೇಸ್ ದಾಖಲಾಗುವ ಸಾಧ್ಯತೆ..?
ಮೆಗನ್ ಆಸ್ಪತ್ರೆಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗಿದ್ದು. ವೈದ್ಯಕೀಯ ವರದಿ ಬಂದ ನಂತರ ನ್ಯಾಯಾಲಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಲಾಗುವುದು. ಗಾಂಜಾದ ಮತ್ತಿನಲ್ಲಿ ಇರುತ್ತಿದ್ದ ಬಂದಿತ ತಂಡವನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿ ಪಾಸಿಟಿವ್ ಬಂದರೆ ಗಾಂಜಾ ಸೇವನೆ ಕೆಸ್ ದಾಖಲಾಗುವ ಸಾಧ್ಯತೆ ಇದೆ.
ಈ ಬಂಧನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಲಾಖೆಯ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಜಿಲ್ಲಾ ವರಿಷ್ಠಾಧಿಕಾರಿಗಳಾದ ಡಾ/ ಲಕ್ಷ್ಮೀಪ್ರಸಾದ್ ಮತ್ತು ತೀರ್ಥಹಳ್ಳಿ ಪ್ರಜ್ಞಾವಂತ ನಾಗರಿಕರು :
ಒಟ್ಟಿನಲ್ಲಿ ತೀರ್ಥಹಳ್ಳಿ ನಾಗರಿಕರಲ್ಲಿ ಭಯ ಮೂಡಿಸಿದ, ಪೊಲೀಸರ ನಿದ್ದೆಗೆಡಿಸಿದ ಪಾತಕಿಗಳ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಇತರ ಕ್ರಿಮಿನಲ್ ಗಳಿಗೂ ಎಚ್ಚರಿಕೆ ಗಂಟೆಯಾಗಬೇಕು. ಬಂಧಿತ ಆರೋಪಿಗಳು ಸಹ ಬಿಡುಗಡೆಯ ನಂತರ ನೆಮ್ಮದಿ ಜೀವನ ನಡೆಸಬೇಕು. ಎನ್ನುವುದು ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ ಹಾಗೆ ಈ ತಂಡವನ್ನು ಭೇದಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಿವೈಎಸ್ಪಿ ಅವರ ತಂಡದ ಡಿವೈಎಸ್ಪಿ ಕಚೇರಿಯ ಜೋಸೆಪ್ ,ಡ್ರೈವರ್ ವಿಜಯ್ ,ಗಣೇಶ್ .
ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಶಾಂತವೀರ್ ರವರ ತಂಡದಲ್ಲಿ ಡ್ರೈವರ್ ಸುಬ್ಬಣ್ಣ, ಸುರಕ್ಷಿತ ,
ಮಾಳುಾರು ಸಬ್ ಇನ್ಸ್ಪೆಕ್ಟರ್ ನವೀನ್ ಮಠಪತಿಯವರ ಅವರ ತಂಡದಲ್ಲಿ ಡ್ರೈವರ್ ಅಭಿಲಾಷ್ ,ಮಂಜುನಾಥ ನೇಕಾರ ,ಮಂಜು ನಾಯ್ಕ್ ,ರುದ್ರೇಶ್ ,ಕೇಶವಮೂರ್ತಿ ,ವಿವೇಕ್ ,ರಮೇಶ್ ನಾಯ್ಕ್ ,ಸಂದೀಪ .
ತೀರ್ಥಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವತ್ಥ್ ಗೌಡರ ತಂಡದಲ್ಲಿ ಸುಧಾಕರ ,ದೀಪಕ್ ,ಪುನೀತ್ .
ಆಗುಂಬೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ರವರ ತಂಡದಲ್ಲಿ ಹನುಮಂತ ಬಾರ್ಕಿ ,ರಾಘವೇಂದ್ರ, ಡ್ರೈವರ್ ಗಣೇಶ ,ಶಶಿಧರ ಮುಂತಾದವರು ಆರೋಪಿಯ ಚಲನವಲನವನ್ನು ಗಮನಿಸಿದ ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯ ಕಂಪ್ಯೂಟರ್ ವಿಭಾಗದ ಇಂದ್ರೇಶ್, ಗುರು ಮತ್ತು ವಿಜಯ್ ಅವರುಗಳನ್ನು ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮೀಪ್ರಸಾದ್ ಅವರು ಹಾಗೂ ತೀರ್ಥಹಳ್ಳಿ ಪ್ರಜ್ಞಾವಂತ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305….