
ತೀರ್ಥಹಳ್ಳಿ : ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ 96% ಅಂಕ ಪಡೆದು ಮೊದಲ ಸ್ಥಾನ ಪಡೆದ ಕಾಸರವಳ್ಳಿ ಸಮೀಪದ ಮೈಥಾನಿ ಗ್ರಾಮದ ಸುಮಂಗಲಳನ್ನು ಆಕೆಗೆ ಸ್ವಗೃಹದಲ್ಲಿ ಅಭಿನಂದಿಸಿ ಮಾತನಾಡಿದ ಮಕ್ಕಿಮನೆ ಪ್ರಶಾಂತ್ ಅವರು ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ.ಪ್ರತಿಭಾವಂತರು ಎಲ್ಲೇ ಇದ್ದರೂ ಆ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಗ್ರಾಮೀಣ ಪ್ರದೇಶದ ಒಬ್ಬ ಬಡ ವರ್ಗದ ವಿದ್ಯಾರ್ಥಿನಿ ಯಾವುದೇ ವಿಶೇಷ ತರಭೇತಿ, ಬೆಂಬಲಗಳ ಸಹಾಯವಿಲ್ಲದೆ ಉತ್ತಮ ಸಾಧನೆ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಈಕೆ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಲು ನಾವಿಂದು ಬಂದಿದ್ದೇವೆ.ಪುಟ್ಟ ಮೆಚ್ಚುಗೆಗೆ ದೊಡ್ಡದನ್ನು ಸಾಧಿಸುವಂತೆ ಪ್ರೇರೇಪಿಸುವ ದೊಡ್ಡ ಶಕ್ತಿ ಇದೆ ಎಂದು ನಾವು ನಂಬಿದ್ದೇವೆ ಎಂದು ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ಉಪಾಧ್ಯಕ್ಷರು ಆದ ಮಕ್ಕಿಮನೆ ಪ್ರಶಾಂತ್ .ಅಭಿನಂದಿಸಿ, ಆರ್ಥಿಕ ಸಹಕಾರ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ ,
ಇಂತಹ ವಿದ್ಯಾರ್ಥಿಗಳ ಸಾಧನೆ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬಲ್ಲದು. ಶ್ರದ್ದೆ ಇದ್ದರೆ ಗೆದ್ದೆ ಎಂದವರು ಸ್ವಾಮಿ ವಿವೇಕಾನಂದರು. ಇಂತಹ ವಿದ್ಯಾರ್ಥಿಗಳು ಆ ಮಾತುಗಳಿಗೆ ಉದಾಹರಣೆಯಾಗಿ ಕಾಣಿಸುತ್ತಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳ ಸಾಧನೆ ಗೌಣವಾಗಬಾರದು. ಖಾಸಗಿ ಅಬ್ಬರದಲ್ಲಿ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಸಾಧನೆ ಮಂಕಾಗಬಾರದು.ಅಂತವರನ್ನು ಗುರುತಿಸಿ,ಪುಟ್ಟ ಮೆಚ್ಚುಗೆಯನ್ನಾದರೂ ವ್ಯಕ್ತಪಡಿಸುವ ಜವಬ್ದಾರಿ ಸಮಾಜದ ಮೇಲಿದೆ ಎಂದು ಭಾವಿಸಿ ಆ ದಿಸೆಯಲ್ಲಿ ನಮ್ಮ ಪಾಲಿನ ಜವಬ್ದಾರಿ ನಿರ್ವಹಣೆಗೆ ನಾವಿಲ್ಲಿ ಬಂದಿದ್ದೇವೆ. ವಿದ್ಯಾವಂತರೆನಿಸಿದರೇ ಭಂಡರಾಗಿ ದೊಡ್ಡ ಭ್ರಷ್ಟರಾಗಿ ಕಾಣಿಸುತ್ತಿರುವುದು ಅತಂಕದ ವಿಷಯ. ಬದುಕು ಕೇವಲ ಸ್ವಾರ್ಥಕ್ಕಷ್ಟೇ ಅಲ್ಲ. ಸಮಾಜದ ಒಳಿತಿಗೂ ಒಂದಿಷ್ಟು ಬಳಸಿದಾಗಷ್ಟೇ ಸಾರ್ಥಕತೆ ಕಾಣಲು ಸಾಧ್ಯ.ಈ ದಿಸೆಯಲ್ಲಿ ಭ್ರಷ್ಟರಾಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಪ್ರಾಮಾಣಿಕತೆ ಸ್ವಾಭಿಮಾನದಿಂದ ಸಮಾಜದ,ದೇಶದ ಒಳಿತಿಗೆ ಮುಂದೆ ತನ್ನಿಂದಾದ ಸಹಕಾರ ನೀಡುವುದಾಗಿ ಈಕೆಯಿಂದ ವಾಗ್ದಾನ ಪಡೆಯಲು ಕೂಡ ಬಂದಿದ್ದೇವೆ ಎಂದರು.
ಸಂಚಲನ ಬಳಗದ ಡಿ ಸಿ ಶಿವಶಂಕರ್, ಅವಿನಾಶ್ ಪ್ರಾ.ಆ.ಕೇಂದ್ರ ಮೇಗರವಳ್ಳಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವೀಣಾ, ನೇತ್ರಾವತಿ, ಸಮುದಾಯ ಆರೋಗ್ಯಾಧಿಕಾರಿ ಲಿಶಾ,ಆಶಾ ಫೆಸಿಲಿಟೇಟರ್ ತೇಜಾವತಿ ಮುಂತಾದವರು ಉಪಸ್ಥಿತರಿದ್ದು ವಿಧ್ಯಾರ್ಥಿನಿಗೆ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿನಿ ಮುಂದಿನ ದಿನಗಳಲ್ಲಿ ದೇಶದ ಹಿತಕ್ಕೆ ಸಹಕಾರಿಯಾಗುವಂತೆ, ಭ್ರಷ್ಟತೆಗೆ ತುತ್ತಾಗದಂತೆ ಸ್ವಾಭಿಮಾನದಿಂದ ಬದುಕುವುದರ ಜೊತೆಗೆ ತನ್ನಿಂದಾಗುವ ಸಹಾಯವನ್ನು ಸಮಾಜಕ್ಕೆ ನೀಡುವುದಾಗಿ ವಾಗ್ದಾನ ಮಾಡಿದಳು.
ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿನಿಯ ತಾಯಿ ಲಕ್ಷ್ಮಿ ಮಾತನಾಡಿ, ತಮ್ಮ ಮನೆಗೆ ಆಗಮಿಸಿ ತಮ್ಮ ಮಗಳಿಗೆ ಇನ್ನೂ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುವ ಕಾರ್ಯ ಮಾಡಿರುವುದಕ್ಕೆ ತುಂಬು ಸಂತಸ ವ್ಯಕ್ತಪಡಿಸಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಬಡತನದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ವಿದ್ಯೆ ಕಲಿತು ಈ ಮಟ್ಟದ ಅಂಕ ತೆಗೆದಿರುವುದು ಸಾಧನೆಯೇ ಸರಿ ಇಂಥ ಸಾಧನೆ ಗೈದ ಗ್ರಾಮೀಣ ಪ್ರತಿಭೆಯನ್ನು ಅಭಿನಂದಿಸಿ, ಗೌರವಿಸುವ , ಮನೋಭಾವವುಳ್ಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಟಿ,ವಿ ಸತೀಶ್ ಅವರು, ತೀರ್ಥಹಳ್ಳಿ ಮಲ್ನಾಡ್ ಕ್ಲಬ್ನನ ಉಪಾಧ್ಯಕ್ಷರಾದ ಮಕ್ಕಿಮನೆ ಪ್ರಶಾಂತ್, ಉಪಸ್ಥಿತರಿದ್ದ ಎಲ್ಲರೂ ಅಭಿನಂದನೆಗೆ ಅರ್ಹರು….
ರಘುರಾಜ್ ಹೆಚ್.ಕೆ…9449553305….