ಸಾಗರ:- ಶಿವಮೊಗ್ಗ ಜಿಲ್ಲೆಯಲ್ಲಿರುವ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲೂ ಆಗದ ಇಂಜೆಕ್ಷನ್ ರಿಯಾಕ್ಷನ್ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಆಗುತ್ತಿರುವ ಹಿಂದೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಸಾಗರೀಕರು ಸಾಗರ ತಾಲ್ಲೂಕು ಉಪ ವಿಭಾಗೀಯ ಆಸ್ಪತ್ರೆ ಆಡಳಿತದಲ್ಲೇಲ್ಲೋ ಲೋಪ ಕಂಡುಬರುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ವೈದ್ಯರ ಮರ್ಮ – ರೋಗಿಗಳ ಕರ್ಮ:
ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಒಟ್ಟು ವೈದ್ಯರ ಪೈಕಿ ಶೇಕಡಾ 98% ವೈದ್ಯರುಗಳು ಕರ್ತವ್ಯ ಸಮಯದಲ್ಲೇ ಖಾಸಗಿ ಕ್ಲಿನಿಕ್ ನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೂ, ಲಕ್ಷಕ್ಕೂ ಮೀರಿ ಸಾರ್ವಜನಿಕ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿರುವ ಇಂತಹ ವೈದ್ಯರಿಗೆ ಈ ರೀತಿ ಬಡ ರೋಗಿಗಳಿಗೆ ಮಾಡುತ್ತಿರುವ ಮೋಸವಲ್ಲವೇ ಅವರ ಆತ್ಮವು ಕ್ಷಮಿಸಬಲ್ಲದೇ…….?!
ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪ ರವರೇ , ತಮ್ಮ ಕ್ಷೇತ್ರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚಿನ ವೈದ್ಯರುಗಳು ಖಾಸಗಿ ಕ್ಲಿನಿಕ್ ನಲ್ಲಿ ಕರ್ತವ್ಯ ಸಮಯದಲ್ಲಿ ಚಿಕಿತ್ಸೆ ನೀಡುತ್ತಿರುವುದು, ಬಡ ರೋಗಿಗಳು ಉಪ ವಿಭಾಗೀಯ ಆಸ್ಪತ್ರೆಯಲ್ಲಿರುವ ಆಯಾಆಯಾ ವೈದ್ಯರ ಕೊಠಡಿ ಮುಂದೇ ಕಾಯುತ್ತಾ ದಿನಗಟ್ಟಲೇ ಕುಳಿತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ …….?!
ಕಣ್ಣಿದ್ದೂ ಕುರುಡರಾದ ಉಪ ವಿಭಾಗೀಯ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳು….
ಇನ್ನೂ ಮುಂದಾದರೂ ಆಡಳಿತ ರೂಢರೂ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಅರೋಗ್ಯ ರಕ್ಷಾ ಸಮಿತಿಯವರು ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಕೆಲ ವೈದ್ಯರುಗಳು ಕರ್ತವ್ಯ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗೆ ಕೈಕೊಟ್ಟು ಖಾಸಗಿ ಆಸ್ಪತ್ರೆ ನೆಡೆಸುತ್ತಿರುವ ” ವೈದ್ಯೋ ನಾರಾಯಣ ಹರಿಃ ” ಎಂಬ ಧ್ಯೇಯ ವಾಕ್ಯಕ್ಕೆ ಚ್ಯುತಿಯನ್ನು0ಟು ಮಾಡುತ್ತಿರುವ ವೈದ್ಯರಿಗೆ ತಕ್ಕ ಪಾಠ ಕಲಿಸುತ್ತಾರೋ….?! ಸಾಮಾಜಿಕ ನ್ಯಾಯದಡಿ ವೈದ್ಯರು ಬಡ ರೋಗಿಗಳಿಗೆ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ಸಮಯದಲ್ಲಾದರೂ ಸೂಕ್ತ ಚಿಕಿತ್ಸೆಗೆ ಅನುವು ಮಾಡಿಕೊಡುತ್ತಾರೋ…….?! ಕಾದು ನೋಡೋಣ .
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….