ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಪೇಟೆಯಲ್ಲಿ ನಿರಂತರ ಸರಣಿ ಕಳ್ಳತನ ನೆಡೆಯುತ್ತಿದ್ದೂ, ಪೊಲೀಸ್ ಇಲಾಖೆಯೂ ಕಳ್ಳರಿಗೆ ಬಲೆ ಬೀಸುವಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.
ಸರಣಿ ಕಳ್ಳತನ ಹಿಂದೇ ತಾಳಗುಪ್ಪದಲ್ಲಿ ಕೊನೆಯ ರೈಲ್ವೆ ನಿಲ್ದಾಣವಾಗಿರುವುದೇ ಪ್ರಮುಖ ಕಾರಣವಾಗಿದೆ. ರಾತ್ರಿ ಸುಮಾರು 10:00 ಗಂಟೆಯಿಂದ 11:00 ಗಂಟೆ ಒಳಗೆ ಬರುವ ಬೆಂಗಳೂರು ರೈಲು ಇದೆ ರೈಲು ಮುಂಜಾನೆ 05:00 ಗಂಟೆಗೆ ಪುನಃ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುತ್ತದೆ. ಏತನ್ಮಧ್ಯೆ ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಬರುವ ಕಳ್ಳರು ತಾಳಗುಪ್ಪ ಪೇಟೆಯಲ್ಲಿನ ಅಂಗಡಿಗಳನ್ನೂ ಸರಣಿ ಕಳ್ಳತನ ಮಾಡಿ ಅಂಗಡಿಗಳನ್ನೂ ದೋಚಿ ಮುಂಜಾನೆ 05:00 ಗಂಟೆಗೆ ಹೊರಡುವ ರೈಲಿಗೆ ಹೋಗುತ್ತಿದ್ದಾರೆ.
ನಿನ್ನೆ ರಾತ್ರಿಯೂ ಸಹ ತಾಳಗುಪ್ಪ ಪೇಟೆಯಲ್ಲಿ ಸರಣಿ ಕಳ್ಳತನ ನೆಡೆದಿದ್ದೂ, ಬಂಗಾರದ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಹಸ್ಯ ಕ್ಯಾಮೆರಾದಲ್ಲಿ ಸರಿಯಾದ ಕಳ್ಳ ಯಾರು ?
ಬಂಗಾರದ ಅಂಗಡಿಯಲ್ಲಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುವ ಕಳ್ಳ ಯಾರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗ ವಾಗಬೇಕಾಗಿದೆ…
ಪೊಲೀಸ್ ಇಲಾಖೆಯೂ ಕಳ್ಳತನವಾಗಿರುವ ಸ್ಥಳದಲ್ಲಿದ್ದೂ, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಬೆರಳಚ್ಚುಗಾರರು, ಶ್ವಾನದಳ ಶಿವಮೊಗ್ಗ ನಗರದಿಂದ ಹೊರಟಿರುವ ಮಾಹಿತಿ ದೊರೆತಿದೆ.
ರೈಲ್ವೆ ಅಧಿಕಾರಿಗಳಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಮೂರನೇ ಕಣ್ಣು (C. C. CAMERA ) ಗಳನ್ನೂ ಅಳವಡಿಸುವಂತೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305…..