
ತೀರ್ಥಹಳ್ಳಿ : ತಾಲೂಕಿನ ಶಾಸಕರು ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ರಾಜ್ಯದ ಪ್ರವಾಸದಲ್ಲಿದ್ದಾಗ ಕ್ಷೇತ್ರದ ವಿವಿದ ಕಡೆ ಅನೇಕ ಸಾವು ನೋವುಗಳು ಸಂಭವಿಸಿದ್ದು.
ಸಚಿವರು ಕ್ಷೇತ್ರಕ್ಕೆ ಬಂದ ನಂತರ ಎಲ್ಲ ಕಡೆ ಭೇಟಿ ನೀಡಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು:
ಗಾಗೋಳ್ಳಿ ರಮೇಶ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು,ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದರು, ನಂತರ ನೊಣಭೂರು ದಲಿತ ಕುಟುಂಬದ ಸದಸ್ಯ ಸೈಕಲ್ ನಲ್ಲಿ ಚಲಿಸುವಾಗ ರಸ್ತೆ ಪಕ್ಕದ ಬಾವಿಗೆ ಬಿದ್ದು ಆಕಸ್ಮಿಕ ಮರಣ ಹೊಂದಿದ್ದರು ಅವರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು,ಮುಳುಭಾಗಿಲು ಪಂಚಾಯತ್ ಭೀಮನಕಟ್ಟೆಯಲ್ಲಿ ವಿಧ್ಯುತ್ ತಂತಿ ತಗುಲಿ ಮರಣ ಹೊಂದಿದ ಗೌರಮ್ಮ ಎಂಬುವವರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು,ನಂತರ ಅಡಿಕೆ ಮರದಿಂದ ಬಿದ್ದು ಆಕಸ್ಮಿಕ ಅಸುನೀಗಿದ ಮೇಗರವಳ್ಳಿ ಹನಸ ವಾಸಪ್ಪ ಗೌಡರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಅಭಿವೃದ್ಧಿ ಕಾಮಗಾರಿ ಕಡೆಗೆ ಗಮನ ಹರಿಸಿದ ಸಚಿವರು :
ಅಂಬುತೀರ್ಥ ದಲ್ಲಿ ನಡೆಯುತ್ತಿರುವ 5 ಕೋಟಿ ರೂಪಾಯಿಗಳ ಕಾಮಗಾರಿ ವೀಕ್ಷಿಸಿದರು.
ಹೀಗೆ ವಿವಿಧ ಕಡೆ ಭೇಟಿ ನೀಡಿ ನೂಂದ ಕುಟುಂಬದವರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ನಂತರ ತಾಲೂಕಿನ ಅಭಿವೃದ್ಧಿಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುವಂತೆ ಆದೇಶ ನೀಡಿ ನಂತರ ಬೆಂಗಳೂರಿಗೆ ತೆರಳಿದರು….
ರಘುರಾಜ್ ಹೆಚ್.ಕೆ…9449553305…