
ಸಾಗರ :- ನಿನ್ನೆ ರಾತ್ರಿ ಬೆಂಗಳೂರಿಂದ ಸಾಗರಕ್ಕೆ ” ನಾವು ಇನ್ಮುಂದೆ ಮನೆಗೆ ಬರೋದಿಲ್ಲ – ನಮ್ಮನ್ನು ಹುಡುಕಲು ಪ್ರಯತ್ನ ಮಾಡದಿರಿ ” ಎಂದು ಲಿಖಿತವಾಗಿ ಮನೆ ತೊರೆದು ಬಂದಿದ್ದ ಅಪ್ರಾಪ್ತ ಯುವತಿಯರು ಆಕಸ್ಮಿಕವಾಗಿ ಸಾಗರದ ಮಾಧ್ಯಮ ವರದಿಗಾರರು ಹಾಗೂ ಸಾಮಾಜಿಕ ಹೋರಾಟಗಾರರಾದ ಸತೀಶ್ ಶಿರವಾಳ ರವರ ಸಮಯಪ್ರೆಜ್ಞೆಯಿಂದ DYSP ಕಚೇರಿಗೆ ಈ ಇಬ್ಬರು ಯುವತಿಯರನ್ನು ಒಪ್ಪಿಸಿದರು.
ಇಂದು ಬೆಳಿಗ್ಗೆ ಯುವತಿಯಿಬ್ಬರನ್ನೂ ಕರೆದುಕೊಂಡು ಹೋಗಲು ಬೆಂಗಳೂರಿಂದ ಸಾಗರಕ್ಕೆ ಬಂದಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಅನ್ವಯ ಸುರಕ್ಷಿತವಾಗಿ ತಂದೆ ತಾಯಿಗೆ ಯುವತಿಯರನ್ನು ಒಪ್ಪಿಸಿದ್ದಾರೆ.
“ಮುಂದೇ ಈ ರೀತಿಯ ನಿರ್ಧಾರ ಮಾಡದಂತೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಂದೆ ತಾಯಿಗೆ ಕೀರ್ತಿ ತರುವಂತೆ “ ಯುವತಿಯಿಬ್ಬರಿಗೆ ಬುದ್ದಿವಾದವನ್ನೂ ಸಾಗರ DYSP ರೋಹನ್ ಜಗದೀಶ್ ರವರು ತಿಳಿ ಹೇಳಿದರು.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….