
ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ನಿನ್ನೆ ಅಂದರೆ ದಿನಾಂಕ 03-07-2022 ಭಾನುವಾರ ಬೆಳಿಗ್ಗೆ 11 ಗಂಟೆಗೆ ವೈದ್ಯರ ದಿನದ ಪ್ರಯುಕ್ತ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಮತ್ತು ಉಚಿತ ದಂತ ವೈದ್ಯಕೀಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ,ತಾಲ್ಲೂಕು ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ ,ಗ್ರಾಮ ಪಂಚಾಯಿತಿಯ ಎಲ್ಲ ಸಹಕಾರ ಸಂಘಗಳಿಂದ,ತಾಯಿ ಮನೆ ,ಜೆ ಸಿ ಐ ,ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿತ್ತು.
ಈ ಆರೋಗ್ಯ ಶಿಬಿರದಲ್ಲಿ 150 (ನೂರ ಐವತ್ತು )ಕ್ಕೂಹೆಚ್ಚು ಮಕ್ಕಳು ಮತ್ತು ಹಿರಿಯರನ್ನು ತಪಾಸಣೆ ಮಾಡಿ ಪರೀಕ್ಷಿಸಿ ಚಿಕಿತ್ಸೆಯನ್ನೂ ನೀಡಲಾಯಿತು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 25 ಹೆಚ್ಚು ಜನರು ರಕ್ತದಾನದಲ್ಲಿ ಪಾಲ್ಗೊಂಡು ವಿಶೇಷವಾಗಿ ತಾಲ್ಲೂಕಿನ ಡಿ ವೈ ಎಸ್ಪಿ ಶಾಂತವೀರ್ ಅವರು ರಕ್ತದಾನ ಮಾಡುವುದರ ಮುಖಾಂತರ ಸಮಾಜಕ್ಕೆ ಮಾದರಿಯಾಗಿದ್ದಾರೆ. ಜೇ ಸಿ ಐ ಮತ್ತು ತಾಯಿ ಮನೆಯ ಎಲ್ಲ ಪ್ರಮುಖರು ಸೇರಿ ವೈದ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ವಿಶೇಷವಾಗಿ ಮಕ್ಕಳ ತಜ್ಞರು ಡಾ. ವಿನಾಯಕ ಹೆಗ್ಡೆ ಅಶೋಕ ಸಂಜೀವಿನಿ ಆಸ್ಪತ್ರೆ ಶಿವಮೊಗ್ಗ ,ಅಶೋಕ ಸಂಜೀವಿನಿ ಆಸ್ಪತ್ರೆಯ ಪ್ರಮುಖ ವೈದ್ಯರು ಡಾ.ಹೇಮಂತ್ , ಇನ್ನೋರ್ವ ವೈದ್ಯರಾದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಡಾ.ಸುರೇಶ್ ಮತ್ತು ತೀರ್ಥಹಳ್ಳಿಯ ದಂತವೈದ್ಯೆ ತಜ್ಞರಾದ ಡಾ
ನಂದ ಕಿಶೋರ್ ಇವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದ ಎಲ್ಲ ಸಂಘಟನೆಯ ಜವಾಬ್ದಾರಿ ತಾಯಿ ಮನೆಯ ಸುದರ್ಶನ್ ಇವರು ನೆರವೇರಿಸಿದರು.ರಕ್ತದಾನ ಶಿಬಿರದ ರೂವಾರಿಗಳು ಹನುಮಂತ ಇವರು ಅಚ್ಚುಕಟ್ಟಾಗಿ ಅವರ ತಂಡದಿಂದ ಕಾರ್ಯವನ್ನು ನಿರ್ವಹಿಸಿದರು.
ರಘುರಾಜ್ ಹೆಚ್.ಕೆ…9449553305….