
ಸಾಗರ :- ಸಾಗರ ವಿಧಾನಸಭಾ ಕ್ಷೇತ್ರದ ಯಲಗಳಲೆ ಗ್ರಾಮದ ದಿವಾಗದ್ದೆ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದೂ, ನಿತ್ಯ ಸಂಚಾರ ಮಾಡಲು ವಾಸಿಗಳ ನರಕಯಾತನೆ ಹೇಳತೀರದು. ಶಾಸಕರ ಕಛೇರಿಯಿಂದ ಕೆಲವೇ ದೂರದಲ್ಲಿರುವ ಈ ಗ್ರಾಮ ಮೂಲಭೂತ ಸೌಕರ್ಯ ವಂಚಿತ ಗ್ರಾಮವಾಗಿದೆ.
ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರರು, ಜನಸ್ನೇಹಿ ಶಾಸಕರು ಸನ್ಮಾನ್ಯ ಶ್ರೀ ಹರತಾಳು ಹಾಲಪ್ಪ ರವರೇ ದಯಮಾಡಿ ಯಲಗಳಲೆ ಗ್ರಾಮದ ದಿವಾಗದ್ದೆ ಊರಿನ ಈ ರಸ್ತೆಯನ್ನೂ ಕೂಡಲೇ ಸುಗಮ ಸಂಚಾರಕ್ಕೆ ಅನುವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305….