
ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಹೋಬಳಿಯ ಉಳುಮಡಿಯ ಯು ,ಕೆ ಕೃಷ್ಣಮೂರ್ತಿ ಯವರ ತೋಟಕ್ಕೆ ಕಾಡಾನೆ ನುಗ್ಗಿದ್ದು. ಕೃಷ್ಣಮೂರ್ತಿಯವರ ತೋಟವನ್ನು ಬಹುತೇಕ ನಾಶಪಡಿಸಿದೆ. ಫಸಲು ಬರುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಅಡಿಕೆ ಮರಗಳು, ಬಾಳೆ, ಏಲಕ್ಕಿ ,ಫಸಲುಗಳನ್ನು ನಾಶಪಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ನೀಡಬೇಕಾಗಿ ಕೃಷ್ಣಮೂರ್ತಿ ಕುಟುಂಬದವರ ವಿನಂತಿ….
ರಘುರಾಜ್ ಹೆಚ್. ಕೆ…9449553305….