
ತೀರ್ಥಹಳ್ಳಿ: ತಾಲೂಕಿನ ಮಾದರಿ ಶಾಲೆಗಳಲ್ಲಿ ಒಂದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೋನ್ನೆತಾಳು ಶಾಲೆಗೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಸತತವಾಗಿ ಎರಡನೆ ಸಲ ಬೇಟಿ ನೀಡಿದ್ದಾರೆ.
ಶಾಲೆಯ ದುರಸ್ತಿ ಬಗ್ಗೆ ಹಾಗೂ ಕೊಠಡಿ ಮಂಜೂರು ಬಗ್ಗೆ ಮಾಡಿದ ಮನವಿಯನ್ನು ಸ್ವೀಕರಿಸಿದ ಸಚಿವರು :
ಶಾಲಾ ದುರಸ್ತಿಯ ಬಗ್ಗೆ ಹಾಗೂ ಶಾಲೆಗೆ ಎರಡು ಕೊಠಡಿ ಮಂಜೂರು ಮಾಡುವಂತೆ ಶಾಲಾ ಶಿಕ್ಷಕರು ಮತ್ತು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒತ್ತಡಗಳ ನಡುವೆಯೂ ಸಚಿವರ ಕಾಳಜಿ ಮೆಚ್ಚುವಂತದ್ದು :
ತೀವ್ರ ಒತ್ತಡಗಳ ನಡುವೆ ಸಚಿವರು ಸರ್ಕಾರಿ ಶಾಲೆಗಳ ಬಗ್ಗೆ ಇಟ್ಟಿರುವ ಕಾಳಜಿಯನ್ನು ಶಾಲೆಯ ಶಿಕ್ಷಕರು ಪೋಷಕರು ಹಾಗೂ ಮುಖ್ಯವಾಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಮೆಚ್ಚಿಕೊಂಡಿದ್ದಾರೆ.
ರಘುರಾಜ್ ಹೆಚ್.ಕೆ…9449553305….