
ಕಳೆದ ಹದಿನೈದು ದಿನಗಳಿಂದ ರಾಜ್ಯಾದ್ಯಂತ ಸತತವಾಗಿ ಮಳೆ ಸುರಿಯುತ್ತಲೇ ಇದೆ.ಸುರಿಯುತ್ತಿರುವ ವರುಣರಾಯ ಅನೇಕ ಅವಾಂತರಗಳನ್ನ ಸೃಷ್ಟಿಸಿದ್ದಾನೆ.ಅದೇ ರೀತಿ ಸಾಗರ ತಾಲ್ಲೂಕಿನಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು ಈಗಾಗಲೇ ಶಾಲೆಗಳಿಗೆ ಕಳೆದ 1ವಾರದಿಂದ ರಜೆ ಘೋಷಣೆ ಮಾಡಲಾಗಿದೆ.
ಸುರಿಯುತ್ತಿರುವ ಮಳೆಯ ನೀರು ಎಲ್ಲಿ ಹರಿಯಬೇಕು ಎಂದು ದಿಕ್ಕು ತೋಚದೆ ಎಲ್ಲೆಂದರಲ್ಲಿ ನೀರು ಹರಿಯತೊಡಗಿದೆ .ಹರಿಯುತ್ತಿರುವ ಮಳೆ ನೀರಿನಿಂದ ಅನೇಕ ಅವಾಂತರಗಳು ಸೃಷ್ಟಿಯಾಗುತ್ತವೆ .ಅದೇ ರೀತಿ ಸಾಗರ ತಾಲ್ಲೂಕು ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾವಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಂದು ಏಕಾಏಕಿ ಮಳೆಯ ನೀರು ನುಗ್ಗಿದೆ,ಅದೃಷ್ಟವಶಾತ್ ಶಾಲೆಗೆ ರಜೆ ಇರುವ ಕಾರಣ ಯಾವುದೇ ಅನಾಹುತಗಳು ನಡೆದಿಲ್ಲ.
ಮಳೆಯ ನೀರು ಏಕಾಏಕಿ ಎಲ್ಲಿಂದ ಬಂತು ಎಂಬುದು ಮಾತ್ರ ತಿಳಿಯುತ್ತಿಲ್ಲ,ಏಕೆಂದರೆ ಎಲ್ಲಿ ನೋಡಿದರಲ್ಲಿ ನೀರು ತುಂಬಿರುವಾಗ ಬಂದಿದ್ದಾದರೂ ಎಲ್ಲಿಂದ ಗುರುತಿಸುವುದಾದರೂ ಹೇಗೆ ?
ಪ್ರಕೃತಿಯ ಅಸಮತೋಲನದಿಂದ ವರುಣರಾಯ ಮುನಿಸಿಕೊಂಡಿದ್ದಾನೆ,ರೈತ ಸಮುದಾಯ ಕಂಗಾಲಾಗಿದೆ.ಯಾವಾಗ ಮಳೆ ನಿಲ್ಲುತ್ತಿದೆಯೋ? ಎಂದು ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು ಶಾಲೆಯ ಬಿದ್ದು ಹೋಗುವ ಮುನ್ನ ಉಳಿಸಿಕೊಳ್ಳಬೇಕು…
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್. ಕೆ….9449553305….