
ಶಿವಮೊಗ್ಗ : ಇಂದು ಬೆಳಗ್ಗೆ ಇನೋವಾದಲ್ಲಿ ಬಂದ ಆರರಿಂದ ಏಳು ಜನರ ತಂಡ ನ್ಯಾಯಲಯಕ್ಕೆ ಕೇಸ ವಿಚಾರಣೆಗಾಗಿ ಸಹಚರನಾದ ಶ್ರೀಧರ್ ಜೊತೆಗೆ ತೆರಳುತ್ತಿದ್ದ ಶಿವಮೊಗ್ಗ ಭೂಗತಲೋಕದ ಕುಖ್ಯಾತ ರೌಡಿ ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣೆಯನ್ನು ಪೊಲೀಸ್ ಚೌಕಿ ಸರ್ಕಲ್ ನಲ್ಲಿ ಭೀಕರ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣೆ ಹತ್ಯೆಯ ಹಿಂದೆ ಯಾರಿದ್ದಾರೆ..? ಹಳೆ ದುಶ್ಮನ್ಗಳಿಂದಲೇ ಕೊಲೆಯಾದನ ಹಂದಿ ಅಣ್ಣಿ ..? ಕೊಲೆಗೆ ಕಾರಣವೇನು..? ಹಂದಿ ಅಣ್ಣಿಯ ಹಿನ್ನೆಲೆ ಏನು..? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ…
ಅಣ್ಣಪ್ಪ ಆಲಿಯಾಸ್ ಹಂದಿ ಅಣ್ಣೆ ಹಿನ್ನೆಲೆ ಏನು..?
ಇನ್ನು 18 ವರ್ಷ ತುಂಬಿರಲಿಲ್ಲ ಆಗಲೇ ಶಿವಮೊಗ್ಗದ ಭೂಗತ ಲೋಕಕ್ಕೆ ಪಾದರ್ಪಣೆ ಮಾಡಿದ ಅಣ್ಣಪ್ಪ ಆಲಿಯಾಸ್ ಹಂದಿ ಅಣ್ಣಿ ಮೊದಮೊದಲು ರೌಡಿ ಆಗಿರಲಿಲ್ಲ ಸಣ್ಣಪುಟ್ಟ ಗಲಾಟೆಗಳನ್ನು ಮಾಡಿಕೊಂಡು ಓಡಾಡಿಕೊಂಡು ಇರುತ್ತಿದ್ದ. ಆದರೆ ಯಾವಾಗ ಅವಳಿ ರೌಡಿಗಳಾದ ಲವಕುಶ ಹಿಡಿದು ಹೊಡೆದರು ಅಂದಿನಿಂದ ಅಣ್ಣಿಗೆ ಲವಕುಶರ ಮೇಲೆ ಸೇಡು ಬರಲು ಪ್ರಾರಂಭಿಸಿತು.
ಲವಕುಶರ ಭೀಕರ ಹತ್ಯೆ ಮಾಡಿದ ಹಂದಿ ಅಣ್ಣಿ ಗ್ಯಾಂಗ್ :
ಶಿವಮೊಗ್ಗ ಪಾತಕ ಲೋಕದಲ್ಲಿ ಲವಕುಶ ಅವಳಿ ಸಹೋದರ ರದ್ದು ದೊಡ್ಡ ಹೆಸರು ಒಂದಷ್ಟು ಕಾಲ ಶಿವಮೊಗ್ಗ ಪಾತಕ ಲೋಕದಲ್ಲಿ ಮೆರೆದು ನಂತರ ಕುಂದಾಪುರದಲ್ಲಿ ಗ್ಯಾರೇಜ್ ಇಟ್ಟುಕೊಂಡು ಕೆಲಸ ಮಾಡಿಕೊಂಡಿದ್ದ. ಈ ಅವಳಿ ಸೋದರರು ನಂತರ ನಿಧಾನವಾಗಿ ಶಿವಮೊಗ್ಗ ಬಂದು ಸೇರಿಕೊಂಡರು. ಶಿವಮೊಗ್ಗದಲ್ಲಿ ಎಂದಿನಂತೆ ತಮ್ಮ ವರಸೆ ಶುರುವಚ್ಚಿಕೊಂಡಿದ್ದ ಅವಳಿ ಸೋದರರು ಒಂದು ದಿನ ಎಂದಿನಂತೆ ಹಂದಿ-ಹಣ್ಣಿ ತಮ್ಮ ಮುಂದೆ ಬೈಕ್ ಅನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಹಾಗೂ ಒಂದು ಮನೆಯ ವಿಚಾರಕ್ಕೆ ಹಂದಿ ಅಣ್ಣಿಗೆ ಹಿಡಿದು ಹೊಡೆಯುತ್ತಾರೆ. ಇದರಿಂದ ಆಕ್ರೋಶ ಗೊಂಡ ಹಂದಿ ಅಣ್ಣೆ ಲವಕುಶರಿಗೆ ಹೊಡೆಯಲೇ ಬೇಕು ಎಂದು ಸಂಚುರೂಪಿಸುತ್ತಿರುತ್ತಾನೆ.
ಹಂದಿಅಣ್ಣಿಗೆ ಸಹಾಯ ಮಾಡಿದ ನಟೋರಿಯಸ್ ರೌಡಿ ತಮಿಳ್ ಕುಮಾರ :
ಶಿವಮೊಗ್ಗ ಪಾತಕ ಲೋಕದಲ್ಲಿ ನಟೋರಿಯಸ್ ರೌಡಿ ಯಾಗಿದ್ದ ಪೊಲೀಸರ ಎನ್ಕೌಂಟರಿ ಗೆ ಬಲಿಯಾದ ಕುಮಾರ ಅಲಿಯಾಸ್ ತಮಿಳ್ ಕುಮಾರ ಹಿಂದೆ ನೆಹರು ರೋಡಿನಲ್ಲಿ ಹಾಡು ಹಗಲೇ ನಡೆದ ತುಕಾರಾಂ ಕೊಲೆ ಕೇಸಿನಲ್ಲಿ ಈತ ಕೂಡ ಇದ್ದ ಆದರೆ ಈತ ತಲೆಮೆರೆಸಿಕೊಂಡು ಆ ಕೇಸಿನಲ್ಲಿ ಸತೀಶ್ ಕುಮಾರ್ ಅಲಿಯಾಸ್ ಮೊಟ್ಟೆ ಸತೀಶ ,ಪೃಥ್ವಿ, ಹೆಬ್ಬೆಟ್ಟು ಮಂಜ, ಇನ್ನಿತರರ ಬಂಧನವಾಗುತ್ತದೆ. ಬಹಳ ಸಮಯದವರೆಗೂ ತಮಿಳ್ ಕುಮಾರ ಪೊಲೀಸರ ಕೈಗೆ ಸಿಕ್ಕಿರುವುದಿಲ್ಲ ತಮಿಳ್ ಕುಮಾರನಿಗೆ ಮತ್ತು ಲವಕುಶರಿಗೂ ದುಶ್ಮನ್ ಇರುತ್ತದೆ. ತಮಿಳ್ ಕುಮಾರ ಸಹ ಲವಕುಶರಿಗೆ ಹೊಡೆಯಬೇಕು ಎಂದು ಅಂದುಕೊಂಡಿರುತ್ತಾನೆ. ಆದರೆ ಅದಕ್ಕೆ ಸಮಯ ಕೂಡಿ ಬಂದಿರುವುದಿಲ್ಲ.
ಹಂದಿ ಅಣ್ಣಿಯ ಗ್ಯಾಂಗ್ ಅನ್ನು ಬಳಸಿಕೊಂಡ ತಮಿಳು ಕುಮಾರ :
ಯಾವಾಗ ಹಂದಿಹಣ್ಣಿ ಗ್ಯಾಂಗ್ ಲವಕುಶರಿಗೆ ಹೊಡೆಯಬೇಕು ಎಂದು ಸಂಚು ರೂಪಿಸಿರುವುದು ತಮಿಳ್ ಕುಮಾರನಿಗೆ ಮಾಹಿತಿ ಸಿಗುತ್ತದೆಯೋ ಆಗ ಅಲರ್ಟ್ ಆದ ತಮಿಳು ಕುಮಾರ ಹಂದಿ ಅಣ್ಣೆ ಗ್ಯಾಂಗ್ ಬೆಂಬಲಕ್ಕೆ ನಿಲ್ಲುತ್ತಾನೆ . ಒಂದು ದಿನ ಸಾಗರ ರಸ್ತೆಯ ಅಂಗಡಿಯ ಒಂದರಲ್ಲಿ ಅವಳಿ ಸೋದರರಾದ ಲವಕುಶರನ್ನು ಹಂದಿ ಅಣ್ಣೆಯ ಗ್ಯಾಂಗ್ ಭೀಕರವಾಗಿ ಹತ್ಯೆಗೆಯುತ್ತದೆ. ಈ ಹತ್ಯೆಯಲ್ಲಿ ಅವಳಿ ಸೋದರರಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬ ಮಣಿಪಾಲಿಗೆ ಹೋಗುವಷ್ಟರಲ್ಲಿ ಸಾವನ್ನಪ್ಪುತ್ತಾನೆ.
ನಂತರ ಮಾಧ್ಯಮದ ಮೂಲಕ ಪೊಲೀಸರಿಗೆ ಶರಣಾದ ಹಂದಿ ಅಣ್ಣೆಯ ಗ್ಯಾಂಗ್ :
ಅವಳಿ ಸಹೋದರರ ಭೀಕರ ಹತ್ಯೆ ಮಾಡಿದ ನಂತರ ಹಂದಿ ಅಣ್ಣೆ ಗ್ಯಾಂಗ್ ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆ ಅವರ ಹತ್ತಿರ ಹೋಗಿ ಮಾಧ್ಯಮದ ಮೂಲಕ ಪೊಲೀಸರಿಗೆ ಶರಣಾಗುತ್ತಾರೆ.
ಕೇಸ್ ನಿಂದ ಖುಲಾಸೆಯಾಗಿ ಹೊರಬಂದ ಅಣ್ಣಿ ಗ್ಯಾಂಗ್ :
ಈ ಮಧ್ಯೆ ಸಾಕಷ್ಟು ಬೆಳವಣಿಗೆಗಳು ನಡೆದು ಕೊನೆಗೂ ಹಂದಿ ಅಣ್ಣೆಯ ಗ್ಯಾಂಗ್ ಲವಕುಶ ಕೇಸ್ನಲ್ಲಿ ಕುಲಾಸೆಯಾಗಿ ಹೊರಬರುತ್ತಾರೆ. ನಂತರ ಶಿವಮೊಗ್ಗದಲ್ಲಿ ಫೀಲ್ಡ್ ಮಾಡುತ್ತಿರುತ್ತಾರೆ. ಮರಳುಗಾರಿಕೆ, ಬಡ್ಡಿಗೆ ಹಣ ಬಿಡುವುದು, ಹಪ್ತಾ ವಸೂಲಿಗೆ ಇಳಿಯುತ್ತಾರೆ. ಮಧ್ಯೆ ಸಾಕಷ್ಟು ಕೇಸ್ ಗಳು ಈತನ ಮೇಲೆ ಈತನ ಗ್ಯಾಂಗ್ ಮೇಲೆ ಬೀಳುತ್ತದೆ 2 ಕೊಲೆ ಕೇಸ್ ಗಳು, ಡಕಾಯಿತಿ ,ಕೊಲೆಬೆದುರಿಕೆ, ಅಂತಹ 9 ಕೇಸ್ ಗಳು ಈತನ ಮೇಲೆ ಇರುತ್ತದೆ. ಆದರೆ 2016 ರಿಂದ ಯಾವುದೇ ಕೇಸ್ಗಳು ಈತನ ಮೇಲೆ ಇರುವುದಿಲ್ಲ.
ಹಂದಿ ಅಣ್ಣಿಯ ತಮ್ಮ ಗಿರಿಯನ್ನು ಕೊಲೆ ಮಾಡಿದ ಅಜ್ರು ಗ್ಯಾಂಗ್ :
ಹಂದಿ ಅಣ್ಣಿಯ ತಮ್ಮ ಗಿರಿ ಪಾತಕ ಲೋಕದಲ್ಲಿ ಪ್ರಬಲವಾಗಿ ಬೆಳೆಯುತ್ತಿರುತ್ತಾನೆ. ಹಲವು ಸಲ ಈತನ ಮೇಲೆ ಅಟ್ಯಾಕ್ ಆದರು ಬದುಕು ಉಳಿದಿರುತ್ತಾನೆ. ಆದರೆ ಜೆಪಿ ನಗರದ ಅಜ್ರು ಗ್ಯಾಂಗ್ ಮತ್ತು ಗಿರಿ ನಡುವೆ ಗಲಾಟೆಗಳಾಗಿ ನಂತರ ಅಜ್ರು ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡುತ್ತದೆ. ನಂತರ ಹಂದಿ ಅಣ್ಣಿಗೂ ಮತ್ತು ಅಜ್ರು ಗ್ಯಾಂಗ್ ನಡುವೆ ವೈರತ್ವ ಶುರುವಾಗುತ್ತದೆ…
ಪೆಟ್ರೋಲ್ ಬಂಕ್ ಬಾಲು ಕೇಸ್ ನಲ್ಲಿ ಹಂದಿ ಅಣ್ಣೆಯ ಹೆಸರು :
ಪೆಟ್ರೋಲ್ ಬಂಕ್ ಬಾಲು ಕೇಸ್ ನಲ್ಲಿ ನೇರವಾಗಿ ಹಂದಿ ಅಣ್ಣೆ ಇಲ್ಲದಿದ್ದರೂ ಆತನ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ.
ಬಂಕ್ ಬಾಲುವಿನ ಶಿಷ್ಯರು ತಮ್ಮ ಗುರುವಿನ ಕೊಲೆಗೆ ಸೇಡು ತೀರಿಸಿಕೊಂಡರಾ..?
ಬಂಕ್ ಬಾಲುವಿನ ಕೊಲೆ ಕೇಸಿನಲ್ಲಿ ಹಂದಿ ಅಣ್ಣೆಯ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದರಿಂದ ಆ ಕೊಲೆಗೆ ರಿವೆಂಜ್ ಆಗಿ ತಮ್ಮ ಗುರುವಿನ ಕೊಲೆಗೆ ಪ್ರತಿಕಾರವಾಗಿ ಶಿಷ್ಯಂದರು ಸೇಡು ತೀರಿಸಿಕೊಂಡರಾ..? ಎನ್ನುವ ಗುಮಾನಿ ಈಗ ಶುರುವಾಗಿದೆ…
ಹಂದಿ ಅಣ್ಣಿಗೆ ಇದ್ದ ದುಷ್ಮನ್ ಗಳು ಯಾರು..?
ಹಂದಿಅಣ್ಣಿಗೆ ಪ್ರಬಲವಾಗಿ ಇದ್ದ ದುಷ್ಮನ್ ಗಳ ಎಂದರೆ ಹಂದಿ ಅಣ್ಣಿ ಯ ತಮ್ಮನ ಕೊಲೆ ಮಾಡಿದ ಅಜ್ರು ಗ್ಯಾಂಗ್, ನವಲೆ ಆನಂದ.. ಬಂಕ್ ಬಾಲು ಶಿಷ್ಯರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತವೆ..
ಲವಕುಶರ ಭೀಕರ ಹತ್ಯೆಗೆ ಹಾಗೂ ಬಂಕ್ ಬಾಲುವಿನ ಹತ್ಯೆಗೆ ಸೇಡು ತೀರಿಸಿಕೊಂಡರಾ ಶಿಷ್ಯಂದಿರು ..?
ಲವಕುಶರ ಭೀಕರ ಹತ್ಯೆಗೆ ಹಾಗೂ ಬಂಕ್ ಬಾಲುವಿನ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡರಾ ಅವರು ಶಿಷ್ಯಂದಿರು ಎನ್ನುವ ಗುಮಾನಿ ಕಾಡುತ್ತಿದೆ…?
ಯಾರು ಬಂಕ್ ಬಾಲುವಿನ ಶಿಷ್ಯಂದರುಗಳು..?
ಬಂಕ್ ಬಾಲುವಿನ ಜೊತೆ ಸದಾ ಇರುತ್ತಿದ್ದ ಕಾಡ ಕಾರ್ತಿಕ್, ನಿತಿನ್ ,ನರಸಿಂಹ, ಹಾಗೂ ಇನ್ನಿತರು ಸೇರಿಕೊಂಡು ಪ್ರತಿಕಾರ ತೀರಿಸಿಕೊಂಡರಾ..? ಕೊಲೆಗೆ ನಿಖರವಾದ ಕಾರಣವೇನು ..? ಇನೋವಾದಲ್ಲಿ ಬಂದ 7 ಜನರ ತಂಡ ಯಾವುದು..? ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಾಗಿದೆ. ಆರೋಪಿಗಳ ಬೆನ್ನು ಹತ್ತಿರುವ ಪೊಲೀಸರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305…..