
ಹಿರೇನೆಲ್ಲೂರು (ತಾಳಗುಪ್ಪ ):- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಹಿರೇನೆಲ್ಲೂರು ಗ್ರಾಮ ಪಂಚಾಯಿತಿ ಕಚೇರಿಯಿಂದ ಅನತಿ ದೂರದಲ್ಲಿಯೇ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ರಾಶಿ ಹಾಕಿದ್ದು, ಈ ಮಣ್ಣು ರಾಶಿಯಿಂದ ವಾಹನ ಸಂಚಾರಿಗಳು, ಪಾದಚಾರಿಗಳು ಅದರಲ್ಲೂ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದೂ, ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಗಂಭೀರ ಸ್ವರೂಪದ ಗಾಯಗೊಂಡ ಪ್ರಕರಣಗಳು ಘಟಿಸಿದರೂ, ಇದುವರೆಗೂ ಹಿರೇನೆಲ್ಲೂರು ಗ್ರಾಮ ಪಂಚಾಯಿತಿ ಮಣ್ಣು ತೆರೆವು ಕಾರ್ಯ ಮಾಡದೇ ಇರುವ ಬಗ್ಗೆ ವಾಹನ ಸವಾರರು, ಪಾದಚಾರಿಗಳು, ಸ್ಥಳೀಯರು ಗ್ರಾಮ ಪಂಚಾಯಿತಿಯ ಆಡಳಿತ ರೂಢರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೂಡಲೇ ಹಿರೇನೆಲ್ಲೂರು ಗ್ರಾಮ ಪಂಚಾಯಿತಿಯು ರಸ್ತೆಯ ಇಕ್ಕೆಲಗಳಲ್ಲಿ ಮಣ್ಣುಗಳ ರಾಶಿಯನ್ನೂ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಗೊಳಿಸುವಂತೆ ಮತ್ತೊಮ್ಮೆ ಸ್ಥಳೀಯರು, ವಾಹನ ಸವಾರರು, ಪಾದಚಾರಿಗಳು ಆಗ್ರಹಿಸಿದ್ದಾರೆ .
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….