
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ಮುಖ್ಯ ರಸ್ತೆಯಿಂದ ಶ್ರೀಧರ ನಗರ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಇಬ್ಬರು ಆಸಾಮಿಗಳು ಗಾಂಜಾ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶ್ರೀ ಲಕ್ಷ್ಮಿ ಪ್ರಸಾದ್ (ಐಪಿಎಸ್) ಮಾನ್ಯ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಶ್ರೀ ವಿಕ್ರಂ ಅಮಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಇವರ ಆದೇಶ ಮೇರೆಗೆ ಶ್ರೀ ರೋಹನ್ ಜಗದೀಶ್ (ಐಪಿಎಸ್ ) ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ಮಾರ್ಗದರ್ಶನದ ಮೇರೆಗೆ ಸಾಗರ ಸರ್ಕಲ್ ಇನ್ಸ್ಪೆಕ್ಟರ್ – ಸಾಗರ ನಗರ ಸರ್ಕಲ್ ಇನ್ಸ್ಪೆಕ್ಟರ್ (ಪ್ರಭಾರ ) ಶ್ರೀ ಕೃಷ್ಣಪ್ಪ ಕೆ. ವಿ. ರವರ ನೇತೃತ್ವದಲ್ಲಿ ಕಾರ್ಗಲ್ ಸಬ್ ಪಿಎಸ್ಐ – ಸಾಗರ ನಗರ ಪೊಲೀಸ್ ಠಾಣೆಯ ಪಿಎಸ್ಐ (ಪ್ರಭಾರ ) ಶ್ರೀ ತಿರುಮಲೇಶ್, ಸಾಗರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ತುಕಾರಾಮ್ . ಡಿ. ಸಾಗರಕರ್, ಹಾಗೂ ಪೊಲೀಸ್ ಸಹ ಸಿಬ್ಬಂದಿಗಳಾದ ಎಚ್. ಸಿ. 447 ಶ್ರೀ ರತ್ನಾಕರ್, ಎಚ್ ಸಿ.489 ಮೋಹನ್ ಎಂ, ಎಚ್. ಸಿ.588 ಶ್ರೀಮತಿ ಸವಿತಾ, ಸಿಪಿಸಿ 2149 ಶ್ರೀ ಶ್ರೀಧರ್, ಸಿಪಿಸಿ 2103 ಶ್ರೀ ಸುಧಾಕರ್, ಮತ್ತು ಸಿಪಿಸಿ 1261 ಯೋಗೇಶ್ ರನವರನ್ನೋಳಗೊಂಡ ತಂಡ ಕಾನೂನು ಬಾಹಿರವಾಗಿ ಗಾಂಜಾ ಪದಾರ್ಥ ಮಾರಾಟ ಮಾಡುತ್ತಿದ್ದ (1) ಕಿಶೋರ್ ಸಿಂಗ್ ತಂದೆ ಸುರೇಂದ್ರ ಸಿಂಗ್ 27 ವರ್ಷ ಚಾಲಕ ವೃತ್ತಿ ವಾಸ ಜನ್ನತ್ ನಗರ ಸಾಗರ ಪೇಟೆ. (2) ಸುನೀಲ್. ಬಿ ತಂದೆ ಬಸವರಾಜ್ 27 ವರ್ಷ ಚಾಲಕ ವೃತ್ತಿ, ವಾಸ ನೆಹರು ನಗರ, ಸಾಗರ ಪೇಟೆರವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಆರೋಪಿತರಿಂದ 01 ಕೆ. ಜಿ. 135 ಗ್ರಾಂ ಗಾಂಜಾ ಪದಾರ್ಥ ವಶಕ್ಕೆ ಪಡೆದು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸಾಗರ ನಗರ ಪೊಲೀಸ್ ಠಾಣೆಯ ಪೊಲೀಸ್ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ಶ್ರೀ ಲಕ್ಷ್ಮಿ ಪ್ರಸಾದ್ (ಐಪಿಎಸ್ ) ರವರು, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಕ್ರಂ ಅಮಟೆ ಹಾಗೂ “ಸಿಂಗಂ “ಎಂದೇ ಖ್ಯಾತಿಯಾದ ಸಾಗರ ಉಪ ವಿಭಾಗದ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ (ಐಪಿಎಸ್ ) ರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ..9449553305….