
ತೀರ್ಥಹಳ್ಳಿ: ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಿರಿಬೈಲ್ ಶ್ರೀಧರ್ ಮೇಲೆ ಮರಣಾಂತಿಕ ಹಲ್ಲೆ ,ಕೊಲೆ ಪ್ರಯತ್ನ .ಆರೋಪಿ ಸಂದೇಶವನ್ನು ಸಾಹಸಪಟ್ಟು ಬಂಧಿಸಿದ ಪಿಎಸ್ ಐ ನವೀನ್ ಮಠಪತಿ ಮತ್ತು ಸಿಬಂದಿ ವರ್ಗ .
ಮಾಳೂರು ಠಾಣೆ ವ್ಯಾಪ್ತಿಯ ಸಿರಿಬೈಲ್ ನಿವಾಸಿ ಶ್ರೀಧರ್ ಎಂಬುವರನ್ನು ಒತ್ತುವರಿ ಭೂಮಿ ವಿಚಾರಕ್ಕಾಗಿ ಸಂದೇಶ ಬಿನ್ ತಿಮ್ಮಪ್ಪ ಗೌಡ ಎಂಬುವರು ನಿನ್ನೆ ದಿನ ದಿನಾಂಕ 7 -8-2022ರ ರಾತ್ರಿ 7ಗಂಟೆ ಸಮಯಕ್ಕೆ ಸಂತೆಹಕ್ಕಲು ವೆಂಕಟೇಶ್ ಎಂಬುವರ ಅಂಗಡಿಯ ಎದುರು ಶ್ರೀಧರ್ ಅವರನ್ನು ಕತ್ತಿಗಳಿಂದ ಹೊಡೆದು ಮರಣಾಂತಿಕ ಹಲ್ಲೆ ನಡೆಸಿದ್ದರು ಹಾಗೂ ಕೊಲೆ ಪ್ರಯತ್ನ ನಡೆಸಿದ್ದರು .ಅಲ್ಲಿದ್ದ ಗ್ರಾಮಸ್ಥರು ಹಲ್ಲೆ ಆಗುತ್ತಿರುವುದನ್ನು ಮನಗಂಡು ತಕ್ಷಣ ಮಧ್ಯಪ್ರವೇಶ ಮಾಡಿ ದಾಗ ಆರೋಪಿ ಸಂದೇಶ್ ಕತ್ತಿಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ . ತಕ್ಷಣ ಮಾಳುಾರು ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿಯವರು ಪ್ರಕರಣವನ್ನು ದಾಖಲಿಸಿ ಆರೋಪಿಯ ವಿರುದ್ಧ ಕೊಲೆ ಪ್ರಯತ್ನ ಐಪಿಸಿ 307ರ ಅಡಿಯಲ್ಲಿ ಎಫ್ ಐಆರ್ ಹಾಕಿ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಸಲ್ಲಿಸಿದರು .
ರಾತ್ರಿಯಿಡೀ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ವರ್ಗದವರು ಆರೋಪಿಯ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದು ಆರೋಪಿಯು ಇಂದು ಬೆಳಿಗ್ಗೆ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿರುವಾಗ ಮಾಹಿತಿಯನ್ನು ಪಡೆದ ಸಬ್ ಇನ್ಸ್ ಪೆಕ್ಟರ್ ಆರೋಪಿಯ ಕಾರನ್ನು ಬೆನ್ನು ಹತ್ತಿ ಮಳಲಿಮಕ್ಕಿ ಯಲ್ಲಿ ಆರೋಪಿಯನ್ನು ವಶ ಪಡಿಸಿಕೊಂಡು ಪ್ರಕರಣ ನಡೆದು ಕೆಲವೇ ಗಂಟೆಯ ಒಳಗೆ ಆರೋಪಿಯನ್ನು ಬಂಧಿಸಿ ,ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಯನ್ನು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ .ಈ ಪ್ರಕರಣದಲ್ಲಿ ಆರೋಪಿಯನ್ನು ಜೀವದ ಹಂಗನ್ನು ತೊರೆದು ಆರೋಪಿಯನ್ನು ವಶಪಡಿಸಿಕೊಂಡು ಬಂಧಿಸಿದ ಮಾಳುಾರು ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ,ಮಂಜುನಾಥ್ ನೇಕಾರ , ವಿವೇಕ್,ಮತ್ತು ಜೀಪ್ ಚಾಲಕರಾದ ಅಭಿಲಾಷ್ ರವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ .
ರಘುರಾಜ್ ಹೆಚ್. ಕೆ…9449553305…