
ಪಾಪಿಗಳು :- ಮುಜರಾಯಿ ಹಿಂದೂ ದೇವಾಲಯದಲ್ಲಿ ಪುರಾತತ್ವ ಇಲಾಖೆಯಿಂದ ದಿನಗೂಲಿ ನೌಕರರಿಗೆ ಸರ್ಕಾರದ ದಿನಗೂಲಿ ನೌಕರರಿಗೆ ದಿನಗೂಲಿ ವೇತನವನ್ನೂ ಸರ್ಕಾರದ ನಿಯಮವನ್ನೂ ಪಾಲಿಸದೇ ದಿನಗೂಲಿ ನೌಕರರಿಗೆ ಚೆಕ್ ಮುಖಾಂತರ ಸಂಬಳ ನೀಡದೇ ನಗದಾಗಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಾನೂನು ಬಾಹಿರವಾಗಿ ಪುರಾತತ್ವ ಅಧಿಕಾರಿಗಳು ದಿನಗೂಲಿ ನೌಕರರಿಗೆ ಸಂಬಳ ನೀಡುತ್ತಿರುವ ಹಿಂದೇ 40% ಕಮಿಷನ್ ದಂಧೆ ಇರಬಹುದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹತ್ತು ಹಲವಾರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಉತ್ತರಿಸುವವರು ಯಾರು….?!!! ಎಂಬುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಸಂಬಳದಲ್ಲಿ ಅರ್ಧ ಭಾಗ ಸಂಬಳವನ್ನು ನೀಡುತ್ತಿರುವುದು ಅದು ಕೂಡ ನಗದಾಗಿ ನೀಡುವುದು. ಚೆಕ್ ಮೂಲಕ ನೀಡಿದರೆ ಅಕೌಂಟ್ಗೆ ಬರಬಹುದು ಇದರಿಂದ ತಮಗೆ ಏನು ಲಾಭವಿಲ್ಲ ಎನ್ನುವ ಕಾರಣದಿಂದ ಪುರತತ್ವ ಇಲಾಖೆಯ ಕೆಲ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
ಇತ್ತ ದಿನಗೂಲಿ ನೌಕರರು ಕಡು ಬಡತನದಲ್ಲಿ ಇದ್ದರು ಹೇಳಲು ಆಗದೆ ಅನುಭವಿಸಲು ಆಗದೆ ಪರದಾಡುತ್ತಿದ್ದಾರೆ.
ಇವರ ವಿರುದ್ಧ ಸೂಕ್ತ ಕ್ರಮ ಆಗಬೇಕು, ಕೂಡಲೇ ಸಂಬಂಧಪಟ್ಟ ದಿನಗೂಲಿ ನೌಕರರಿಗೆ ಸರಿಯಾದ ಪ್ರಮಾಣದ ಸಂಬಳ ಸಂದಾಯವಾಗಬೇಕು ಇಲ್ಲವಾದಲ್ಲಿ ಪತ್ರಿಕೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಂತ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹೋರಾಟ ನಡೆಸುತ್ತದೆ…
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್. ಕೆ…9449553305….