
ಶಿವಮೊಗ್ಗ: ಇಂದು 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ತಾಲೂಕ ಸಮಿತಿ ಹಾಗೂ ಸರ್ಕಾರಿ ಹಿರಿಯ ಮತ್ತು ಪ್ರೌಡಾ ಶಾಲೆ ದುರ್ಗಿಗುಡಿ ಸಹಯೋಗದೊಂದಿಗೆ ಮನೆ ಮನೆಯಲ್ಲಿ ರಾಷ್ಟ್ರ ದ್ವಜ ಜಾಥಾ ಅಭಿಯಾನ ಕಾರ್ಯಕ್ರಮವನ್ನು ದುರ್ಗಿ ಗುಡಿಯ ವಿವಿಧ ಬಡಾವಣೆ ಗಳಲ್ಲಿ ಜಾಥಾ ನಡೆಸಲಾಯಿತು.
ರಮೇಶ್ ಬಾಬು ಮತ್ತು ಶಿವಮೂರ್ತಿ ಜೆ ರವರು ಮಕ್ಕಳಿಗೆ ಧ್ವಜ ನೀಡುವುದರ ಮೂಲಕ ಜಾಥಾ ಉದ್ಘಾಟಿಸಿದರು ಮಕ್ಕಳು ದೇಶಕ್ಕೆ ಸ್ವಾತಂತ್ರ್ಯ ತಂದ ವಿವಿಧ ಗಣ್ಯನಾಯಕರ ವೇಷಬೂಷಣಗಳನ್ನು ಧರಿಸಿ ಜಾಥಾಗೆ ಕಳೆಕಟ್ಟಿದರು.
ಮಳೆಯನ್ನು ಲೆಕ್ಕಿಸದೆ ಮಕ್ಕಳು ಘೋಷವಾಕ್ಯಗಳನ್ನು ಕೂಗುತ್ತಾ ಪಾಲ್ಗೋಂಡರು ಶಾಲೆ ಮುಖ್ಯ ಶಿಕ್ಷಕರಾದ ಮೋಹನ್ ರವರು ಮತ್ತು ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮತ್ತು ತಾ|| ಕಾರ್ಯದರ್ಶಿ ಶರತ್ ಚಂದ್ರ, ಧನಂಜಯ, ಪ್ರಭು, ಪ್ರಶಂತ್
ಸೇವಾದಳದ ಎಲ್ಲಾ ಪಧಾದಿಕಾರಿಗಳು ಮತ್ತು ಸದಸ್ಯರು ಜಿಲ್ಲಾ ಸಂಘಟಕರಾದ ಪ್ರಸನ್ನ ಕುಮಾರ್ ಹೆಚ್ ಸಿ ರವರು ಉಪಸ್ಥಿತಿ ಇದ್ದರು.
ರಘುರಾಜ್ ಹೆಚ್.ಕೆ…9449553305….