
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ಉರುಳುಗಲ್ಲು ಗ್ರಾಮದ ಹಲವಾರು ಸಮಸ್ಯೆ ಕುರಿತು ಹಲವು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಪ್ರತಿಭಟನೆ, ಹೋರಾಟ ಹಾಗೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಸೆಲ್ವಮಣಿ ರವರು ಇಂದು ಭೇಟಿ ನೀಡಿ ಸಾರ್ವಜನಿಕ ಕುಂದು ಕೊರತೆ ಸಭೆ ನೆಡೆಸಿ, ಹಂತ ಹಂತವಾಗಿ ಸಮಸ್ಯೆಗಳನ್ನೂ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.
ತ್ವರಿತವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಮಾಡಿಸುವುದಾಗಿ ತಿಳಿಸಿ, ಸೂಕ್ಷ್ಮ ಗ್ರಾಮಕ್ಕೆ ಮೊದಲ ಆಧ್ಯತೆ.
ಉರುಳಗಲ್ಲಿಗೆ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸುವುದಾಗಿ ಭರವಸೆ ನೀಡಿದರು.
ಮೂಲಭೂತ ಸೌಕರ್ಯವಾದ ರಸ್ತೆ ಸಂಪರ್ಕ ಹಾಗೂ ಶಾಲೆಗೆ ಒತ್ತು.
ಮೂಲಭೂತ ಸೌಕರ್ಯಕ್ಕಾಗಿ ಅರಣ್ಯ ತೆರವಿಗೆ ವಿಶೇಷ ಅಧಿಕಾರಿಗಳನ್ನೂ ನೇಮಕ ಆದೇಶ.
ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸತ್ಯಶೋಧನೆ ಸಮಿತಿಯಿಂದ ವರದಿಗೆ ಆದೇಶ.
ಮುಂದಿನ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಉರುಳಗಲ್ಲು ಆಯ್ಕೆ ಮಾಡುವುದಾಗಿ ಸ್ಪಷ್ಟನೆ.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಸೆಲ್ವಮಣಿ ತಿಳಿಸಿದರು…
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ…9449553305…